ನಾವು ಪ್ರತಿಯೊಬ್ಬ ಸಂದೇಶವಾಹಕನನ್ನು ಅಲ್ಲಾಹನ ಅಪ್ಪಣೆಯಂತೆ ಅವನನ್ನು ಅನುಸರಿಸಲಿಕ್ಕಾಗಿಯೇ ನಿಯೋಗಿಸಿದ್ದೇವೆ ಮತ್ತು ಅವರು ತಮ್ಮ ಮೇಲೆ ಅಕ್ರಮವನ್ನು ಮಾಡಿ, ನಿಮ್ಮ ಬಳಿಗೆ ಬಂದು ಅಲ್ಲಾಹನೊಂದಿಗೆ ಪಾಪವಿಮೋಚನೆಯನ್ನು ಬೇಡುತ್ತಿದ್ದರೆ ಮತ್ತು ಅವರಿಗೋಸ್ಕರ ಸಂದೇಶವಾಹಕನು ಸಹ ಪಾಪವಿಮೋಚನೆಯನ್ನು ಬೇಡುತ್ತಿದ್ದರೆ ಖಂಡಿತ ಅವರು ಅಲ್ಲಾಹನನ್ನು ಕ್ಷಮೆ ನೀಡುವವನಾಗಿಯು, ಕರುಣೆಯುಳ್ಳವನಾಗಿಯು ಕಾಣುತ್ತಿದ್ದರು.