ಓ ಪೈಗಂಬರರೇ ತಮ್ಮೆಡೆಗೆ ಅವತೀರ್ಣಗೊಳಿಸಲಾದುದರಲ್ಲೂ, ತಮಗಿಂತ ಮುಂಚೆ ಅವತೀರ್ಣಗೊಳಿಸಲಾದುದರಲ್ಲೂ ನಾವು ವಿಶ್ವಾಸವಿಟ್ಟಿದ್ದೇವೆಂದು ವಾದಿಸುವ, ಜನರನ್ನು ನೀವು ಕಂಡಿಲ್ಲವೇ? ಆದರೆ ಅವರು (ಶೈತಾನನ ಹಿಂಬಾಲಕರು)ತಮ್ಮ ತೀರ್ಪನ್ನು ಮಿಥ್ಯಶಕ್ತಿಯೆಡೆಗೆ ಕೊಂಡೊಯ್ಯಲು ಬಯಸುತ್ತಾರೆ. ವಾಸ್ತವದಲ್ಲಿ ಶೈತಾನನನ್ನು ನಿರಾಕರಿಸಲು ಅವರು ಆದೇಶಿಸಲಾಗಿದ್ದರು. ಶೈತಾನನಂತೂ ಅವರನ್ನು ಪಥಭ್ರಷ್ಟತೆಗೊಳಿಸಿ ಬಹುದೂರ ಕೊಂಡೊಯ್ಯಲು ಬಯಸುತ್ತಾನೆ.