ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಅನುಸರಿಸಿರಿ ಮತ್ತು ಅಲ್ಲಾಹನ ಸಂದೇಶವಾಹಕರನ್ನೂ, ಹಾಗೂ ನಿಮ್ಮಿಂದಲೇ ಇರುವ ಆಡಳಿತಾಧಿಕಾರಿಗಳನ್ನೂ ಅನುಸರಿಸಿರಿ. ಇನ್ನು ಯಾವುದಾದರೂ ವಿಚಾರದಲ್ಲಿ ನೀವು ಭಿನ್ನರಾದರೆ ನೀವು ಅದನ್ನು ಅಲ್ಲಾಹನೆಡೆಗೂ, ಸಂದೇಶವಾಹಕರೆಡೆಗೂ ಮರಳಿಸಿರಿ. ನೀವು ಅಲ್ಲಾಹನಲ್ಲೂ, ಅಂತ್ಯ ದಿನದಲ್ಲೂ ವಿಶ್ವಾಸವಿರುಸುವುದಾದರೆ. ಇದು ತುಂಬಾ ಉತ್ತಮವೂ, ಪರಿಣಾಮದ ದೃಷ್ಟಿಯಿಂದ ಅತ್ಯುತ್ತಮವೂ ಆಗಿದೆ.