ಅಮಾನತ್ತುಗಳನ್ನು ಅದರ ಹಕ್ಕುದಾರರಿಗೆ ತಲುಪಿಸಿಕೊಡಬೇಕೆಂದೂ, ಜನರ ಮಧ್ಯೆ, ನೀವು ತೀರ್ಪು ನೀಡುವಾಗ ನ್ಯಾಯಪೂರ್ವಕವಾಗಿ ತೀರ್ಪು ನೀಡಬೇಕೆಂದೂ ಅಲ್ಲಾಹನು ನಿಮಗೆ ಆಜ್ಞಾಪಿಸುತ್ತಾನೆ. ಖಂಡಿತವಾಗಿಯು ಅಲ್ಲಾಹನು ನಿಮಗೆ ಉತ್ತಮವಾದ ಉಪದೇಶವನ್ನು ನೀಡುತ್ತಾನೆ. ನಿಸ್ಸಂಶಯವಾಗಿಯು ಅಲ್ಲಾಹನು ಆಲಿಸುವವನೂ, ನೋಡುವವನೂ ಆಗಿದ್ದಾನೆ.