ಓ ಗ್ರಂಥ ನೀಡಲ್ಪಟ್ಟವರೇ ನಿಮ್ಮ ಬಳಿ ಇರುವುದನ್ನು ದೃಢೀಕರಿಸುತ್ತಾ ನಾವು ಅವತೀರ್ಣಗೊಳಿಸಿರುವುದರಲ್ಲಿ (ಕುರ್‌ಆನ್) ವಿಶ್ವಾಸವಿಡಿರಿ. ನಾವು ಕೆಲವು ಮುಖಗಳನ್ನು ವಿಕೃತಗೊಳಿಸಿ ಅದನ್ನು ಬೆನ್ನ ಹಿಂದಕ್ಕೆ ತಿರುಗಿಸುವುದಕ್ಕೆ ಮುನ್ನ ಅಥವಾ ಸಬ್ತ್ನ (ಶನಿವಾರದ) ಜನರನ್ನು ನಾವು ಶಪಿಸಿದಂತೆ ಅವರನ್ನು ಶಪಿಸುವುದಕ್ಕೆ ಮುನ್ನ ಅಲ್ಲಾಹನ ಆಜ್ಞೆಯು ಜಾರಿಗೆ ಬಂದೇ ತೀರುವುದು.