ಓ ಸತ್ಯವಿಶ್ವಾಸಿಗಳೇ, ನೀವು ಅಮಲಿನಲ್ಲಿದ್ದರೆ ನೀವು ನಿಮ್ಮ ಮಾತನ್ನು ಗ್ರಹಿಸಿಕೊಳ್ಳುವ ತನಕ ನಮಾಝ್‌ನ ಹತ್ತಿರಕ್ಕೂ ಸುಳಿಯಬೇಡಿರಿ ಮತ್ತು ಜನಾಬತ್‌ನ ಸ್ಥಿತಿಯಲ್ಲಿದ್ದರೆ ಸ್ನಾನ ಮಾಡಿಕೊಳ್ಳುವ ತನಕ (ನಮಾಝ್‌ನ ಹತ್ತಿರಕ್ಕೂ ಸುಳಿಯಬೇಡಿರಿ)ಆದರೆ ನೀವು ಮಸೀದಿಯಿಂದ ಹಾದು ಹೋಗುವವರಾಗಿದ್ದರೆ ಬೇರೆ ವಿಚಾರ. ಇನ್ನು ನೀವು ರೋಗಿಗಳಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಅಥವಾ ನಿಮ್ಮಲ್ಲೋರ್ವನು ಮಲಮೂತ್ರ ವಿಸರ್ಜನೆ ಮಾಡಿ ಬಂದರೆ ಅಥವಾ ನೀವು ಸ್ತಿçÃಯರೊಂದಿಗೆ ಸಂಪರ್ಕ ಮಾಡಿದರೆ ಮತ್ತು ನಿಮಗೆ ನೀರು ಲಭಿಸದಿದ್ದಲ್ಲಿ ನೀವು ಶುದ್ಧವಾಗಿರುವ ಮಣ್ಣಿನಿಂದ ತಯಮ್ಮುಮ್ ಮಾಡಿರಿ ಮತ್ತು ನಿಮ್ಮ ಮುಖಗಳನ್ನು ಕೈಗಳನ್ನು ಸವರಿರಿ. ನಿಸ್ಸಂಶಯವಾಗಿಯು ಅಲ್ಲಾಹನು ಮನ್ನಿಸುವವನು, ಕ್ಷಮೆ ನೀಡುವವನು ಆಗಿದ್ದಾನೆ.