ಮತ್ತು ನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರಿ ಮತ್ತು ಮಾತಾಪಿತರೊಂದಿಗೆ ಸದ್ವರ್ತನೆ ತೋರಿರಿ. ಮತ್ತು ಬಂಧುಗಳೊAದಿಗೆ, ಅನಾಥರೊಂದಿಗೆ, ನಿರ್ಗತಿಕರೊಂದಿಗೆ, ಕುಟುಂಬ ಸಂಬAಧವಿರುವ ನೆರೆಹೊರೆಯವರೊಂದಿಗೆ, ಅನ್ಯರಾದ ನೆÀರೆಹೊರೆಯವರೊಂದಿಗೆ, ಹತ್ತಿರದ ಸಹವರ್ತಿಗಳೊಂದಿಗೆ, ಪ್ರಯಾಣಿಕರೊಂದಿಗೆ ಮತ್ತು ನಿಮ್ಮ ಸ್ವಾಧೀನದಲ್ಲಿರುವ ಗುಲಾಮರೊಂದಿಗೆ (ಸದ್ವರ್ತನೆ ತೋರಿರಿ) ಖಂಡಿತವಾಗಿಯು ಅಲ್ಲಾಹನು ದುರಹಂಕಾರಿ ಮತ್ತು ದುರಭಿಮಾನಿಯನ್ನು ಮೆಚ್ಚುವುದಿಲ್ಲ.