ಅಲ್ಲಾಹನು ನಿಮ್ಮ ಪೈಕಿ ಕೆಲವರಿಗೆ ಇನ್ನು ಕೆಲವರಿಗಿಂತ ಹೆಚ್ಚು ಅನುಗ್ರಹಗಳನ್ನು ಕೊಟ್ಟಿರುವುದನ್ನು ನೀವು ಹಂಬಲಿಸದಿರಿ. ಪುರುಷರು ಸಂಪಾದಿಸಿರುವುದು ಅವರಿಗಿದೆ. ಮತ್ತು ಸ್ತಿçÃಯರು ಸಂಪಾದಿಸಿರುವುದು ಅವರಿಗಿದೆ. ಅಲ್ಲಾಹನೊಂದಿಗೆ ಅವನ ಔದಾರ್ಯದಿಂದ ಬೇಡಿಕೊಳ್ಳಿರಿ. ಖಂಡಿತವಾಗಿಯು ಅಲ್ಲಾಹನು ಸಕಲ ಸಂಗತಿಗಳ ಕುರಿತು ಅರಿವುಳ್ಳವನಾಗಿದ್ದಾನೆ.