ಓ ಸತ್ಯವಿಶ್ವಾಸಿಗಳೇ, ಸ್ತಿçÃಯರನ್ನು ಬಲವಂತವಾಗಿ ವಾರೀಸು ಸೊತ್ತಿನಂತೆ ಕೈವಶವಿರಿಸಕೊಳ್ಳವುದು ನಿಮಗೆ ಸಮ್ಮತಾರ್ಹವಲ್ಲ. ನೀವು ಅವರಿಗೆ ನೀಡಿರುವುದರಲ್ಲಿ (ವಧುಧನದಿಂದ) ಸ್ವಲ್ಪವನ್ನು ಪಡೆಯಲಿಕ್ಕಾಗಿ ನೀವವರನ್ನು ತಡೆದಿರಿಸಿಕೊಳ್ಳಬೇಡಿರಿ. ಇನ್ನು ಅವರು ಬಹಿರಂಗವಾದ ಯಾವುದಾದರೂ ನಿರ್ಲಜ್ಜೆಯ ಕಾರ್ಯವನ್ನು ಕೈಗೊಂಡರೆ ಅದು ಬೇರೆ ವಿಚಾರ. ನೀವು ಅವರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಿರಿ. ನಿಮಗೆ ಅವರು ಅಪ್ರಿಯವೆನಿಸುವುದಾದರೆ ನಿಮ್ಮ ಅಪ್ರಿಯವಾದ ಆ ಒಂದು ವಿಚಾರದಲ್ಲಿ ಅಲ್ಲಾಹನು ಧಾರಾಳ ಒಳಿತುಗಳನ್ನುಂಟು ಮಾಡಬಹುದು.