ಅವರು ನಿಮ್ಮೊಂದಿಗೆ ಧರ್ಮವಿಧಿ ಕೇಳುತ್ತಾರೆ. ಹೇಳಿರಿ: (ಸ್ವತಃ) ಅಲ್ಲಾಹನು ನಿಮಗೆ ಕಲಾಲ(ತಂದೆ ಹಾಗು ಸಂತಾನವಿಲ್ಲದವನು)ದ ಕುರಿತು ನಿಮಗೆ ಧರ್ಮವಿಧಿಯನ್ನು ನೀಡುತ್ತಾನೆ. ತಂದೆ ಮತ್ತು ಸಂತಾನವಿಲ್ಲದ ಒಬ್ಬ ವ್ಯಕ್ತಿಯು ಮೃತಪಟ್ಟರೆ ಮತ್ತು ಅವನಿಗೆ ಒಬ್ಬಳು ಸ್ವಂತ ಸಹೋದರಿಯಿದ್ದರೆ ಅವನು ಬಿಟ್ಟು ಹೋದ ಸಂಪತ್ತಿನ ಅರ್ಧಭಾಗ ಅವಳಿಗಿರುವುದು. ಮತ್ತು (ಮೃತಪಟ್ಟ ವ್ಯಕ್ತಿಯು) ಮಹಿಳೆಯಾಗಿದ್ದು, ಅವಳಿಗೆ ಸಂತಾನವಿಲ್ಲದಿದ್ದರೆ ಅವನ ಸ್ವಂತ ಸಹೋದರನು ಅವಳ ವಾರೀಸುದಾರನಾಗುವನು; ಇನ್ನು ಮೃತ ವ್ಯಕ್ತಿಗೆ ಇಬ್ಬರು ಸಹೋದರಿಯರಿದ್ದರೆ ಬಿಟ್ಟು ಹೋದ ಸಂಪತ್ತಿನ ಮೂರನೇ ಎರಡು ಭಾಗವು ಅವರಿಗಿರುವುದು. ಮತ್ತು ಅನೇಕ ಮಂದಿ ಸಹೋದರರು ಸಹೋದರಿಯರಿದ್ದರೆ ಇಬ್ಬರು ಸ್ತಿçÃಯರಿಗೆ ದೊರಕುವ ಸಮಾನ ಪಾಲು ಒಬ್ಬ ಪುರುಷನಿಗಿರುವುದು. ನೀವು ದಾರಿ ತಪ್ಪಬಾರದೆಂದು ಅಲ್ಲಾಹನು ನಿಮಗೆ ವಿಷಯಗಳನ್ನು ವಿವರಿಸಿಕೊಡುತ್ತಿದ್ದಾನೆ ಮತ್ತು ಅಲ್ಲಾಹನು ಸಕಲ ಸಂಗತಿಗಳ ಕುರಿತು ಅರಿವುಳ್ಳವನಾಗಿದ್ದಾನೆ.