ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸುತ್ತಾ, ಗೇಲಿ ಮಾಡುತ್ತಾ ಇರುವ ಯಾವುದಾದರೂ ಸಭೆಯನ್ನು ನೀವು ಆಲಿಸಿದರೆ ಅವರು ಬೇರಾವುದಾದರೂ ವಿಚಾರವನ್ನು ಆರಂಭಿಸುವ ತನಕ ನೀವು ಅವರೊಂದಿಗೆ ಕುಳಿತುಕೊಳ್ಳಬೇಡಿರಿ ಎಂದು ಅಲ್ಲಾಹನು ನಿಮ್ಮ ಬಳಿಯಿರುವ ಗ್ರಂಥದಲ್ಲಿ ಆದೇಶ ನೀಡಿರುತ್ತಾನೆ. ಇಲ್ಲವಾದರೆ ನೀವು ಸಹ ಅವರಂತೆಯೇ ಆಗಿ ಬಿಡುವಿರಿ ಖಂಡಿತವಾಗಿಯು ಅಲ್ಲಾಹನು ಸಕಲ ಸತ್ಯನಿಷೇಧಿಗಳನ್ನೂ, ಸಕಲ ಕಪಟವಿಶ್ವಾಸಿಗಳನ್ನೂ ನರಕದಲ್ಲಿ ಒಟ್ಟುಗೂಡಿಸಲಿರುವನು.