ಅವರ ಹೆಚ್ಚಿನ ಗೂಢಾಲೋಚನೆಗಳಲ್ಲಿ ಯಾವುದೇ ಒಳಿತಿರುವುದಿಲ್ಲ. ಆದರೆ! ದಾನಧರ್ಮ ಮಾಡುವುದಕ್ಕಾಗಲೀ, ಸದಾಚಾರ ಕೈಗೊಳ್ಳುವುದಕ್ಕಾಗಲೀ, ಅಥವಾ ಜನರ ಮಧ್ಯೆ ಸಾಮರಸ್ಯ ಉಂಟು ಮಾಡಲಿಕ್ಕಾಗಿ ನಡೆಸಲಾಗುವ ಗೂಢಾಲೋಚನೆಗಳ ಹೊರತು ಯಾರು ಅಲ್ಲಾಹನ ಸಂತೃಪ್ತಿಯನ್ನು ಪಡೆಯುವ ಉದ್ದೇಶದಿಂದ ಹೀಗೆ ಮಾಡುತ್ತಾನೋ ಅವನಿಗೆ ನಾವು ಮಹಾ ಪ್ರತಿಫಲವನ್ನು ನೀಡುವೆವು.