ಶತ್ರುಗಳನ್ನು ಬೆನ್ನಟ್ಟಿ ಹೋಗುವ ವಿಚಾರದಲ್ಲಿ ನೀವು ಎದೆಗುಂದಬಾರದು. ನೀವು ನೋವು ಅನುಭವಿಸಿದಂತೆ ಅವರೂ ನೋವು ಅನುಭವಿಸುತ್ತಾರೆ. ಮತ್ತು ಅವರು ನಿರೀಕ್ಷಿಸದ ಅನುಗ್ರಹವನ್ನು ನೀವೂ ಅಲ್ಲಾಹನಿಂದ (ಅವನ ಸನ್ನಿಧಿ ಹಾಗೂ ಸ್ವರ್ಗವನ್ನು) ನಿರೀಕ್ಷಿಸುತ್ತೀರಿ ಮತ್ತು ಅಲ್ಲಾಹನು ಸರ್ವಜ್ಞನೂ, ಯುಕ್ತಿಪೂರ್ಣನೂ ಆಗಿದ್ದಾನೆ.