'ಓ ನಮ್ಮ ಪ್ರಭು, ಈ ಅಕ್ರಮಿಗಳ ನಾಡಿನಿಂದ ನಮ್ಮನ್ನು ಪಾರು ಮಾಡು ಮತ್ತು ನಿನ್ನ ವತಿಯಿಂದ ನಮಗಾಗಿ ರಕ್ಷಕನನ್ನು ನಿಶ್ಚಯಿಸಿಕೊಡು ಹಾಗೂ ನಮಗಾಗಿ ನಿನ್ನ ವತಿಯಿಂದ ಸಹಾಯಕನನ್ನು ಕೊಡು' ಎಂದು ಮರ್ದಿತರಾದ ಪುರಷರು, ಸ್ತಿçÃಯರು ಮತ್ತು ಪುಟ್ಟ ಪುಟ್ಟ ಮಕ್ಕಳು ಪ್ರಾರ್ಥಿಸುತ್ತಿರುವಾಗ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡದಿರಲು ನಿಮಗೇನಾಗಿದೆ.?
ಸತ್ಯವಿಶ್ವಾಸಿಗಳು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ. ಮತ್ತು ಸತ್ಯನಿಷೇಧಿಗಳು ಅಲ್ಲಾಹನ ಹೊರತಾದ ಮಿಥ್ಯಾರಾಧ್ಯರ ಮಾರ್ಗದಲ್ಲಿ ಯುದ್ಧ ಮಾಡುತ್ತಿದ್ದಾರೆ. ಆದ್ದರಿಂದ ನೀವು ಶೈತಾನನ ಮಿತ್ರರೊಂದಿಗೆ ಯುದ್ಧ ಮಾಡಿರಿ. ಖಂಡಿತವಾಗಿಯು ಶೈತಾನನ ಕುತಂತ್ರವು ದುರ್ಬಲವಾಗಿದೆ.
(ಯುದ್ಧಕ್ಕೆ ಹಾತೊರೆಯುತ್ತಿದ್ದವರಿಗೆ) ನಿಮ್ಮ ಕೈಗಳನ್ನು ತಡೆಹಿಡಿದುಕೊಳ್ಳಿರಿ, ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ ಎಂಬ ಆದೇಶ ನೀಡಲಾದ ಜನರನ್ನು ನೀವು ನೋಡಿಲ್ಲವೇ? ನಂತರ ಅವರ ಮೇಲೆ ಯುದ್ಧವನ್ನು ಕಡ್ಡಾಯಗೊಳಿಸಲಾದಾಗ ಅವರ ಪೈಕಿಯ ಒಂದು ಗುಂಪು ಅಲ್ಲಾಹನನ್ನು ಭಯಪಡುವಂತೆ ಜನರನ್ನು ಭಯಪಡಲಾರಂಭಿಸಿದರು ಅಥವಾ ಅದಕ್ಕಿಂತಲೂ ತೀವ್ರವಾಗಿ ಹೇಳಿದರು: 'ಓ ನಮ್ಮ ಪ್ರಭೂ, ನೀನು ನಮ್ಮ ಮೇಲೆ ಯುದ್ಧವನ್ನು ಏಕೆ ಕಡ್ಡಾಯಗೊಳಿಸಿದೆ? ನಮಗೆ ಇನ್ನೊಂದಿಷ್ಟು ಕಾಲವಕಾಶವೇಕೆ ನೀಡಲಿಲ್ಲ'. ನೀವು ಹೇಳಿರಿ:; ಇಹಲೋಕದ ಸುಖಾನುಭವವು ಅತ್ಯಲ್ಪವಾಗಿದೆ ಮತ್ತು ಭಯಭಕ್ತಿಯುಳ್ಳವರಿಗೆ ಪರಲೋಕವೇ ಅತ್ಯುತ್ತಮವಾಗಿದೆ. ನಿಮ್ಮೊಂದಿಗೆ ಒಂದು ನೂಲಿನಷ್ಟು ಅನ್ಯಾಯ ಮಾಡಲಾಗದು.
ನೀವೆಲ್ಲೇ ಇದ್ದರೂ ಮರಣವು ನಿಮ್ಮನ್ನು ಹಿಡಿಯುವುದು. ನೀವು ಸುಭದ್ರ ಕೋಟೆಯೊಳಗಿದ್ದರೂ ಸರಿಯೇ. ಅವರಿಗೇನಾದರೂ ಒಳಿತು ಲಭಿಸಿದರೆ ಇದು ಅಲ್ಲಾಹನಿಂದ ಲಭಿಸಿದೆ ಮತ್ತು ಏನಾದರೂ ಕೆಡುಕು ಬಾಧಿಸಿದರೆ ಇದು ನಿನ್ನಿಂದಾಗಿ ಉಂಟಾಗಿದೆAದು ಹೇಳುತ್ತಾರೆ. ಅವರಿಗೆ ಹೇಳಿರಿ: ಇವೆಲ್ಲವೂ ಅಲ್ಲಾಹನ ಕಡೆಯಿಂದಾಗಿದೆ. ಅವರಿಗೇನಾಗಿಬಿಟ್ಟಿದೆ? ಅವರು ಯಾವುದೇ ಮಾತನ್ನು ಅರ್ಥ ಮಾಡಿಕೊಳ್ಳುವ ಸನಿಹದಲ್ಲಿಲ್ಲವಲ್ಲಾ?
ಓ ಮಾನವ ಲಭಿಸುವ ಪ್ರತಿಯೊಂದು ಒಳಿತು ನಿನಗೆ ಅಲ್ಲಾಹನ ಕಡೆಯಿಂದಾಗಿದೆ ಮತ್ತು ನಿನಗೆ ಬಾಧಿಸುವ ಪ್ರತಿಯೊಂದು ಕೆಡುಕು ಸ್ವತಃ ನಿನ್ನಿಂದಲೇ ಉಂಟಾಗಿರುತ್ತದೆ. ಓ ಪೈಗಂಬರÀರೇ ನಾವು ನಿಮ್ಮನ್ನು ಸಕಲ ಮನುಷ್ಯರಿಗೆ ಸಂದೇಶವಾಹಕರಾಗಿ ಕಳುಹಿಸಿದ್ದೇವೆ ಮತ್ತು ಸಾಕ್ಷಿಯಾಗಿ ಅಲ್ಲಾಹನೇ ಸಾಕು.