ಸರ್ವಸ್ತುತಿಯು ಅಲ್ಲಾಹನಿಗೇ ಮೀಸಲು ಅವನು ಆಕಾಶಗಳ ಮತ್ತು ಭೂಮಿಯ ಸೃಷ್ಟಿಕರ್ತನು ಎರಡೆರಡು, ಮೂರು ಮೂರು, ನಾಲ್ಕು ನಾಲ್ಕು ರೆಕ್ಕೆಗಳುಳ್ಳ ಮಲಕ್‌ಗಳನ್ನು ತನ್ನ ದೂತರನ್ನಾಗಿ ನಿಶ್ಚಯಿಸಿದ್ದಾನೆ. ಅವನು ಸೃಷ್ಟಿಗಳಲ್ಲಿ ತಾನಿಚ್ಛಿಸಿದ್ದನ್ನು ಹೆಚ್ಚಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹನು ಎಲ್ಲಾ ವಸ್ತುಗಳ ಮೇಲೆ ಸಾಮರ್ಥ್ಯವುಳ್ಳವನಾಗಿದ್ದಾನೆ.
ಅಲ್ಲಾಹನು ಜನರಿಗೆ ಯಾವ ಅನುಗ್ರಹವನ್ನು ತೆರೆದುಕೊಡುವನೋ ಅದನ್ನು ತಡೆಯುವವನಾರಿಲ್ಲ ಮತ್ತು ತಡೆ ಹಿಡಿದಿದ್ದನ್ನು ಅದರ ಬಳಿಕ ಅದನ್ನು ತೆರೆÉÉಯುವವನಾರಿಲ್ಲ ಮತ್ತು ಅವನು ಪ್ರಚಂಡನೂ, ಯುಕ್ತಿಪೂರ್ಣನೂ ಆಗಿದ್ದಾನೆ.
ಓ ಜನರೇ, ಅಲ್ಲಾಹನು ನಿಮ್ಮ ಮೇಲೆ ಮಾಡಿರುವಂತಹ ಅನುಗ್ರಹವನ್ನು ಸ್ಮರಿಸಿರಿ. ಆಕಾಶದಿಂದಾಗಲಿ, ಭೂಮಿಯಿಂದಾಗಲಿ ನಿಮಗೆ ಜೀವನಾಧಾರ ನೀಡುವಂತಹ ಬೇರೆ ಸೃಷ್ಟಿಕರ್ತನು ಇದ್ದಾನೆಯೇ ? ಅವನ ಹೊರತು ಬೇರೆ ಆರಾಧ್ಯನಿಲ್ಲ. ಹಾಗಿದ್ದೂ ನೀವು ಎತ್ತ ಅಲೆದಾಡಿಸಲಾಗುತ್ತಿರುವಿರಿ.