ಬಡ್ಡಿ ತಿನ್ನುವವರು ಶೈತಾನನು ಬಾಧಿಸಿ ಗರಬಡಿದು ಎದ್ದೇಳುವವನ ಹಾಗೆಯೇ (ಪುನರುತ್ಥಾನದ ದಿನ) ಎದ್ದೇಳುವರು. ಇದು (ಇದರ ಕಾರಣ ಅವರು) ವ್ಯಾಪಾರವು ಸಹ ಬಡ್ಡಿಯಂತೆಯೇ ಎಂದು ಹೇಳಿದುದರಿಂದಾಗಿದೆ. ವಸ್ತುತಃ ಅಲ್ಲಾಹನು ವ್ಯಾಪಾರವನ್ನು ಧರ್ಮ ಸಮ್ಮತಗೊಳಿಸಿದ್ದಾನೆ ಮತ್ತು ಬಡ್ಡಿಯನ್ನು ನಿಷಿದ್ಧಗೊಳಿಸಿದ್ದಾನೆ. ಆದ್ದರಿಂದ ಯಾರು ತನ್ನ ಬಳಿಗೆ ಬಂದಿರುವ ಅಲ್ಲಾಹನ ಉಪದೇಶವನ್ನು ಕೇಳಿ (ಬಡ್ಡಿಯನ್ನು) ಸ್ಥಗಿತಗೊಳಿಸಿದರೆ ಅವನು ಮುಂಚೆ ಪಡೆದುದು ಅವನಿಗಿದೆ. ಅವನ ವಿಷಯವು ಅಲ್ಲಾಹನ ಕಡೆಯಿರುತ್ತದೆ. ಮತ್ತು ಯಾರು (ಬಡ್ಡಿಯೆಡೆಗೆ) ಮರಳುತ್ತಾನೋ ಅವನು ನರಕವಾಸಿಯಾಗಿದ್ದಾನೆ. ಅಂತಹವರು ಅದರಲ್ಲಿ ಶಾಶ್ವತವಾಗಿರುವವರು.