ನೀವು ಪತ್ನಿಯರನ್ನು ಸ್ಪರ್ಶಿಸದೆ ಅಥವಾ ವಿವಾಹ ಧನವನ್ನು ನಿಶ್ಚಯಿಸದೆÀ ಇರುವ ಪತ್ನಿಯರಿಗೆ ವಿಚ್ಛೇದನೆ ಕೊಟ್ಟರೆ (ಮಹ್ರ್ ನೀಡದಿರುವುದಕ್ಕಾಗಿ) ನಿಮ್ಮ ಮೇಲೆ ಯಾವ ದೋಷವಿರುವುದಿಲ್ಲ. ಹಾಗೆಯೇ ಅವರಿಗೆ ಏನಾದರೂ ಜೀವನಾಂಶವನ್ನು ಕೊಟ್ಟು ಬಿಡಿರಿ. ಸಾಮರ್ಥ್ಯವುಳ್ಳವನು ತನ್ನ ಸಾಮರ್ಥ್ಯಕ್ಕನುಸಾರವಾಗಿ ಮತ್ತು ದುಸ್ಥಿಯಲ್ಲಿರುವವನು ತನಗೆ ಅನುಕೂಲವಿರುವಷ್ಟು ಸದಾಚಾರದೊಂದಿಗೆ ನೀಡಲಿ. ಇದು ಸತ್ಕರ್ಮಿಗಳ ಮೇಲಿರುವ ಬಾಧ್ಯತೆಯಾಗಿರುತ್ತದೆ.