ನೀವೇನಾದರೂ ಸಕಲ ದೃಷ್ಟಾಂತವನ್ನು ಗ್ರಂಥ ನೀಡಲಾದವರಿಗೆ ನೀಡಿದರೂ ಅವರು ನಿಮ್ಮ ಕಿಬ್ಲಾಃ ದಿಕ್ಕನ್ನು ಅನುಸರಿಸಲಾರರು ಮತ್ತು ಈಗ ನಿಮಗೂ ಸಹ ಅವರ ಕಿಬ್ಲಾಃ ದಿಕ್ಕನ್ನು ಅನುಸರಿಸುವುದು ಯೋಗ್ಯವಲ್ಲ ಮತ್ತು ಯಹೂದಿಯರು ಮತ್ತು ಕ್ರೆöÊಸ್ತರು ಸಹ ಪರಸ್ಪರರ ಕಿಬ್ಲಾಃವನ್ನು ಅನುಸರಿಸುವವರಲ್ಲ ಮತ್ತು ನೀವೇನಾದರೂ ನಿಮ್ಮ ಬಳಿಗೆ ಜ್ಞಾನ ಬಂದ ಬಳಿಕವೂ ಅವರ ಸ್ವೇಚ್ಛೆಗಳನ್ನು ಅನುಸರಿಸಿದರೆ ನಿಜವಾಗಿಯು ನೀವು ಅಕ್ರಮಿಗಳಲ್ಲಾಗುವಿರಿ.