ಕೊನೆಗೆ ಅವರು ಸೂರ್ಯಾಸ್ತಮಯ ಪ್ರದೇಶಕ್ಕೆ ತಲುಪಿದರು ಮತ್ತು ಅದನ್ನವರು ಕಪ್ಪು ಹುದುಲಿನ ಚಿಲುಮೆಯಲ್ಲಿ ಮುಳುಗುತ್ತಿರುವುದಾಗಿ ಕಂಡರು. (ಅವರಿಗೆ ಭಾಸವಾಯಿತು) ಅಲ್ಲಿ ಅವರು ಒಂದು ಜನಾಂಗವನ್ನು ಕಂಡರು. ಆಗ ನಾವು ಹೇಳಿದೆವು: ಓ ಜುಲ್ಖರ್‌ನೈನ್, ಒಂದೋ ನೀವು ಅವರನ್ನು ಶಿಕ್ಷಿಸಬಹುದು ಇಲ್ಲವೇ ಅವರ ವಿಚಾರದಲ್ಲಿ ಉತ್ತಮ ನಿಲುವನ್ನು ತಾಳಬಹುದು.