ಅನಂತರ ಅವರಿಬ್ಬರೂ ಮುಂದೆ ಸಾಗಿದರು. ಕೊನೆಗೆ ಅವರು ಒಂದು ಗ್ರಾಮದ ನಿವಾಸಿಗಳೆಡೆಗೆ ಬಂದು ಅವರಿಂದ ಊಟ ಕೇಳಿದರು. ಆಗ ಅವರು ಅವರ ಅತಿಥ್ಯ ವಹಿಸಲು ನಿರಾಕರಿಸಿದರು. ಅವರಿಬ್ಬರೂ ಅಲ್ಲಿ ಕುಸಿದು ಬೀಳುವ ಸ್ಥಿತಿಯಲ್ಲಿದ್ದ ಗೋಡೆಯೊಂದನ್ನು ಕಂಡರು. ಆಗ ಅವರು ಅದನ್ನು ದುರಸ್ಥಿ ಮಾಡಿದರು. ಮೂಸಾ ಹೇಳಿದರು: ನೀವು ಇಚ್ಛಿಸಿರುತ್ತಿದ್ದರೆ ಈ ಕಾರ್ಯದ ಪ್ರತಿಫಲ ಪಡೆಯಬಹುದಿತ್ತು.