(ಓ ಪೈಗಂಬರರೇ) ನಿಶ್ಚಯವಾಗಿಯೂ ನಿಮ್ಮ ಪ್ರಭು ಜನರನ್ನು ಸುತ್ತುವರೆದಿದ್ದಾನೆ ಎಂದು ನಾವು ನಿಮಗೆ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನಾವು ನಿಮಗೆ ತೋರಿಸಿದಂತಹ ಆ ದೃಶ್ಯವು (ಮೇರಾಜ್‌ನ್ ರಾತ್ರಿ) ಜನರಿಗೆ ಸ್ಪಷ್ಟ ಪರೀಕ್ಷೆಯೇ ಆಗಿತ್ತು ಮತ್ತು ಕುರ್‌ಆನಿನಲ್ಲಿ ಶಪಿಸಲ್ಪಟ್ಟ ಆ ವೃಕ್ಷವು ಸಹ. ನಾವು ಅವರನ್ನು ಹೆದರಿಸುತ್ತಲೇ ಇದ್ದೇವೆ. ಆದರೆ ಅದು ಅವರಿಗೆ ಮಹಾ ಅತಿಕ್ರಮವನ್ನೇ ಹೆಚ್ಚಿಸುತ್ತಿದೆ.