ಮತ್ತು ನಾವು ಅವರ (ಸತ್ಯನಿಷೇಧಿಗಳ) ಹೃದಯಗಳಲ್ಲಿ ಅದನ್ನು ಗ್ರಹಿಸಿಕೊಳ್ಳದಿರುವಂತೆ ಪರದೆಗಳನ್ನು ಹಾಗೂ ಅವರ ಕಿವಿಗಳಲ್ಲಿ ಕಿವುಡುತನವನ್ನು ಹಾಕಿ ಬಿಟ್ಟಿರುತ್ತೇವೆ. ನೀವು ಕುರ್‌ಆನಿನಲ್ಲಿ ನಿಮ್ಮ ಏಕೈಕ ಪ್ರಭುವಿನ ಪ್ರಸ್ತಾಪವನ್ನು ಮಾಡಿದಾಗ ಅವರು ಅಸಹ್ಯಪಡುತ್ತಾ ತಮ್ಮ ಬೆನ್ನು ತಿರುಗಿಸಿ ಹೋಗ ತೊಡಗುತ್ತಾರೆ.