《古兰经》译解 - 卡纳达语翻译 - 哈姆宰·比图尔

ಅಲ್ -ಮುಜಾದಿಲ

external-link copy
1 : 58

قَدْ سَمِعَ اللّٰهُ قَوْلَ الَّتِیْ تُجَادِلُكَ فِیْ زَوْجِهَا وَتَشْتَكِیْۤ اِلَی اللّٰهِ ۖۗ— وَاللّٰهُ یَسْمَعُ تَحَاوُرَكُمَا ؕ— اِنَّ اللّٰهَ سَمِیْعٌ بَصِیْرٌ ۟

(ಓ ಪ್ರವಾದಿಯವರೇ!) ನಿಮ್ಮೊಡನೆ ತನ್ನ ಗಂಡನ ವಿಷಯದಲ್ಲಿ ತರ್ಕಿಸುವ ಮತ್ತು ತನ್ನ ಅಳಲನ್ನು ಅಲ್ಲಾಹನಲ್ಲಿ ತೋಡಿಕೊಳ್ಳುವ ಒಬ್ಬ ಮಹಿಳೆಯ ಮಾತನ್ನು ಖಂಡಿತವಾಗಿಯೂ ಅಲ್ಲಾಹು ಕೇಳಿದನು.[1] ಅಲ್ಲಾಹು ನಿಮ್ಮಿಬ್ಬರ ಸಂಭಾಷಣೆಯನ್ನು ಕೇಳುತ್ತಿದ್ದನು. ಖಂಡಿತವಾಗಿಯೂ ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ. info

[1] ಖೌಲ ಬಿನ್ತ್ ಮಾಲಿಕ್ ಬಿನ್ ಸಅಲಬ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ರನ್ನು ಅವರ ಗಂಡ ಔಸ್ ಬಿನ್ ಸಾಮಿತ್ ಝಿಹಾರ್ ಮಾಡಿದ್ದರು. ಝಿಹಾರ್ ಎಂದರೆ ಪತ್ನಿಯೊಡನೆ, “ನೀನು ನನಗೆ ನನ್ನ ತಾಯಿಯ ಬೆನ್ನಿನಂತೆ” ಎಂದು ಹೇಳಿ ಅವಳೊಡನೆ ಲೈಂಗಿಕ ಸಂಪರ್ಕವನ್ನು ತೊರೆಯುವುದು. ಖೌಲ ಈ ವಿಷಯವನ್ನು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ತಿಳಿಸಿ ಅವರೊಡನೆ ವಿಧಿ ಕೇಳಿದರು. ಆದರೆ ಈ ವಿಷಯದಲ್ಲಿ ಈ ತನಕ ಯಾವುದೇ ವಿಧಿ ಅವತೀರ್ಣವಾಗಿರಲಿಲ್ಲ.

التفاسير:

external-link copy
2 : 58

اَلَّذِیْنَ یُظٰهِرُوْنَ مِنْكُمْ مِّنْ نِّسَآىِٕهِمْ مَّا هُنَّ اُمَّهٰتِهِمْ ؕ— اِنْ اُمَّهٰتُهُمْ اِلَّا الّٰٓـِٔیْ وَلَدْنَهُمْ ؕ— وَاِنَّهُمْ لَیَقُوْلُوْنَ مُنْكَرًا مِّنَ الْقَوْلِ وَزُوْرًا ؕ— وَاِنَّ اللّٰهَ لَعَفُوٌّ غَفُوْرٌ ۟

ನಿಮ್ಮ ಪೈಕಿ ತಮ್ಮ ಪತ್ನಿಯರಿಗೆ ಝಿಹಾರ್ ಮಾಡುವವರು ಯಾರೋ—ಅವರು (ಪತ್ನಿಯರು) ಅವರ ತಾಯಂದಿರಾಗುವುದಿಲ್ಲ. ಅವರಿಗೆ ಜನ್ಮ ನೀಡಿದವರೇ ಅವರ ತಾಯಂದಿರು. ನಿಶ್ಚಯವಾಗಿಯೂ ಅವರು ಅಸಂಬದ್ಧ ಮಾತನ್ನು ಮತ್ತು ಸುಳ್ಳನ್ನು ಹೇಳುತ್ತಿದ್ದಾರೆ. ನಿಶ್ಚಯವಾಗಿಯೂ ಅಲ್ಲಾಹು ಮನ್ನಿಸುವವನು ಮತ್ತು ಕ್ಷಮಿಸುವವನಾಗಿದ್ದಾನೆ. info
التفاسير:

external-link copy
3 : 58

وَالَّذِیْنَ یُظٰهِرُوْنَ مِنْ نِّسَآىِٕهِمْ ثُمَّ یَعُوْدُوْنَ لِمَا قَالُوْا فَتَحْرِیْرُ رَقَبَةٍ مِّنْ قَبْلِ اَنْ یَّتَمَآسَّا ؕ— ذٰلِكُمْ تُوْعَظُوْنَ بِهٖ ؕ— وَاللّٰهُ بِمَا تَعْمَلُوْنَ خَبِیْرٌ ۟

ತಮ್ಮ ಪತ್ನಿಯರಿಗೆ ಝಿಹಾರ್ ಮಾಡುವವರು, ನಂತರ ತಾವು ಹೇಳಿದ ಮಾತನ್ನು ಹಿಂದಕ್ಕೆ ಪಡೆಯಲು ಬಯಸುವವರು ಯಾರೋ, ಅವರು ಪರಸ್ಪರ ಕೂಡುವುದಕ್ಕೆ ಮುನ್ನ ಒಬ್ಬ ಗುಲಾಮನನ್ನು ಸ್ವತಂತ್ರಗೊಳಿಸಬೇಕು. ಇದು ನಿಮಗೆ ನೀಡಲಾಗುತ್ತಿರುವ ಉಪದೇಶವಾಗಿದೆ. ಅಲ್ಲಾಹು ನೀವು ಮಾಡುವ ಕರ್ಮಗಳ ಬಗ್ಗೆ ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ. info
التفاسير:

external-link copy
4 : 58

فَمَنْ لَّمْ یَجِدْ فَصِیَامُ شَهْرَیْنِ مُتَتَابِعَیْنِ مِنْ قَبْلِ اَنْ یَّتَمَآسَّا ۚ— فَمَنْ لَّمْ یَسْتَطِعْ فَاِطْعَامُ سِتِّیْنَ مِسْكِیْنًا ؕ— ذٰلِكَ لِتُؤْمِنُوْا بِاللّٰهِ وَرَسُوْلِهٖ ؕ— وَتِلْكَ حُدُوْدُ اللّٰهِ ؕ— وَلِلْكٰفِرِیْنَ عَذَابٌ اَلِیْمٌ ۟

ಯಾರಿಗೆ (ಸ್ವತಂತ್ರಗೊಳಿಸಲು ಗುಲಾಮ) ಸಿಗಲಿಲ್ಲವೋ ಅವನು—ಅವರು ಪರಸ್ಪರ ಕೂಡುವುದಕ್ಕೆ ಮುನ್ನ—ಎರಡು ತಿಂಗಳು ನಿರಂತರ ಉಪವಾಸ ಆಚರಿಸಬೇಕು. ಯಾರಿಗೆ ಇದು ಕೂಡ ಸಾಧ್ಯವಿಲ್ಲವೋ ಅವನು ಅರುವತ್ತು ಬಡವರಿಗೆ ಆಹಾರ ನೀಡಬೇಕು. ಇದು ನೀವು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಆಜ್ಞೆಯನ್ನು ಪಾಲಿಸಬೇಕೆಂಬ ಕಾರಣದಿಂದಾಗಿದೆ. ಇವು ಅಲ್ಲಾಹು ನಿಶ್ಚಯಿಸಿದ ಎಲ್ಲೆಗಳಾಗಿವೆ. ಸತ್ಯನಿಷೇಧಿಗಳಿಗೆ ಯಾತನಾಮಯ ಶಿಕ್ಷೆಯಿದೆ. info
التفاسير:

external-link copy
5 : 58

اِنَّ الَّذِیْنَ یُحَآدُّوْنَ اللّٰهَ وَرَسُوْلَهٗ كُبِتُوْا كَمَا كُبِتَ الَّذِیْنَ مِنْ قَبْلِهِمْ وَقَدْ اَنْزَلْنَاۤ اٰیٰتٍۢ بَیِّنٰتٍ ؕ— وَلِلْكٰفِرِیْنَ عَذَابٌ مُّهِیْنٌ ۟ۚ

ನಿಶ್ಚಯವಾಗಿಯೂ ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ವಿರುದ್ಧವಾಗಿ ಸಾಗುವವರು ಯಾರೋ—ಅವರ ಪೂರ್ವಜರು ಅವಮಾನಕ್ಕೊಳಗಾದಂತೆ ಇವರೂ ಅವಮಾನಕ್ಕೊಳಗಾಗುವರು. ನಾವು ಸ್ಪಷ್ಟ ವಚನಗಳನ್ನು ಅವತೀರ್ಣಗೊಳಿಸಿದ್ದೇವೆ. ಸತ್ಯನಿಷೇಧಿಗಳಿಗೆ ಅವಮಾನಕರ ಶಿಕ್ಷೆಯಿದೆ. info
التفاسير:

external-link copy
6 : 58

یَوْمَ یَبْعَثُهُمُ اللّٰهُ جَمِیْعًا فَیُنَبِّئُهُمْ بِمَا عَمِلُوْا ؕ— اَحْصٰىهُ اللّٰهُ وَنَسُوْهُ ؕ— وَاللّٰهُ عَلٰی كُلِّ شَیْءٍ شَهِیْدٌ ۟۠

ಅಲ್ಲಾಹು ಅವರೆಲ್ಲರನ್ನೂ ಪುನರುತ್ಥಾನಗೊಳಿಸಿ, ನಂತರ ಅವರು ಮಾಡಿದ ಕರ್ಮಗಳ ಬಗ್ಗೆ ಅವರಿಗೆ ತಿಳಿಸಿಕೊಡುವ ದಿನ! ಅಲ್ಲಾಹು ಅದನ್ನು ಎಣಿಸಿಟ್ಟಿದ್ದಾನೆ. ಆದರೆ ಅವರು ಅದನ್ನು ಮರೆತುಬಿಟ್ಟಿದ್ದಾರೆ. ಅಲ್ಲಾಹು ಎಲ್ಲ ವಿಷಯಗಳಿಗೂ ಸಾಕ್ಷಿಯಾಗಿದ್ದಾನೆ. info
التفاسير: