《古兰经》译解 - 卡纳达语翻译 - 哈姆宰·比图尔

external-link copy
43 : 4

یٰۤاَیُّهَا الَّذِیْنَ اٰمَنُوْا لَا تَقْرَبُوا الصَّلٰوةَ وَاَنْتُمْ سُكٰرٰی حَتّٰی تَعْلَمُوْا مَا تَقُوْلُوْنَ وَلَا جُنُبًا اِلَّا عَابِرِیْ سَبِیْلٍ حَتّٰی تَغْتَسِلُوْا ؕ— وَاِنْ كُنْتُمْ مَّرْضٰۤی اَوْ عَلٰی سَفَرٍ اَوْ جَآءَ اَحَدٌ مِّنْكُمْ مِّنَ الْغَآىِٕطِ اَوْ لٰمَسْتُمُ النِّسَآءَ فَلَمْ تَجِدُوْا مَآءً فَتَیَمَّمُوْا صَعِیْدًا طَیِّبًا فَامْسَحُوْا بِوُجُوْهِكُمْ وَاَیْدِیْكُمْ ؕ— اِنَّ اللّٰهَ كَانَ عَفُوًّا غَفُوْرًا ۟

ಓ ಸತ್ಯವಿಶ್ವಾಸಿಗಳೇ! ಪಾನಮತ್ತರಾದ ಸ್ಥಿತಿಯಲ್ಲಿ ನೀವು ನಮಾಝ್ ಮಾಡಲು ಬರಬೇಡಿ—ನೀವೇನು ಹೇಳುತ್ತಿದ್ದೀರಿ ಎಂದು ನಿಮಗೆ ಅರ್ಥವಾಗುವ ತನಕ. ದೊಡ್ಡ ಅಶುದ್ಧಿಯಿರುವಾಗಲೂ[1] ಬರಬೇಡಿ—ಸ್ನಾನ ಮಾಡಿ ಶುದ್ಧರಾಗುವ ತನಕ. ಆದರೆ (ಮಸೀದಿಯ ಮೂಲಕ) ಹಾದು ಹೋಗುವುದರಲ್ಲಿ ತೊಂದರೆಯಿಲ್ಲ. ನೀವು ಅನಾರೋಗ್ಯದಲ್ಲಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ; ಅಥವಾ ನಿಮ್ಮಲ್ಲೊಬ್ಬನು ಮಲಮೂತ್ರ ವಿಸರ್ಜನೆ ಮಾಡಿ ಬಂದಿದ್ದರೆ, ಅಥವಾ ಮಹಿಳೆಯರನ್ನು ಸ್ಪರ್ಶಿಸಿದ್ದರೆ (ಲೈಂಗಿಕ ಸಂಪರ್ಕ ಮಾಡಿದ್ದರೆ); ನಂತರ ನಿಮಗೆ ಶುದ್ಧಿಯಾಗಲು ನೀರು ದೊರೆಯದಿದ್ದರೆ, ಶುದ್ಧ ಮಣ್ಣಿನಿಂದ ತಯಮ್ಮುಮ್[2] ಮಾಡಿ ಮುಖ ಮತ್ತು ಕೈಗಳನ್ನು ಸವರಿರಿ. ನಿಶ್ಚಯವಾಗಿಯೂ ಅಲ್ಲಾಹು ಮನ್ನಿಸುವವನು ಮತ್ತು ಕ್ಷಮಿಸುವವನಾಗಿದ್ದಾನೆ. info

[1] ದೊಡ್ಡ ಅಶುದ್ಧಿ (ಜನಾಬತ್) ಎಂದರೆ ಲೈಂಗಿಕ ಸಂಭೋಗ, ಸ್ವಪ್ನಸ್ಖಲನ ಅಥವಾ ವೀರ್ಯಸ್ಖಲನದ ಮೂಲಕ ಉಂಟಾಗುವ ಅಶುದ್ಧಿ. [2] ವುದೂ (ಅಂಗಸ್ನಾನ) ಅಥವಾ ಸ್ನಾನ ಮಾಡಲು ನೀರು ಸಿಗದಿದ್ದರೆ, ಅಥವಾ ಕಾಯಿಲೆ ಮುಂತಾದ ಕಾರಣದಿಂದ ನೀರು ಬಳಸಲು ಸಾಧ್ಯವಾಗದಿದ್ದರೆ ತಯಮ್ಮುಮ್ ಮಾಡಬಹುದು. ಇದು ವುದೂಗೆ ಪರ್ಯಾಯವಾಗಿದೆ. ತಯಮ್ಮುಮ್ ಎಂದರೆ ಎರಡು ಅಂಗೈಗಳನ್ನು ಶುದ್ಧ ಮಣ್ಣಿಗೆ ಬಡಿದು ಅದರಿಂದ ಅಂಗೈಗಳನ್ನು ಮತ್ತು ಮುಖವನ್ನು ಸವರುವುದು.

التفاسير: