《古兰经》译解 - 卡纳达语翻译 - 哈姆宰·比图尔

external-link copy
75 : 16

ضَرَبَ اللّٰهُ مَثَلًا عَبْدًا مَّمْلُوْكًا لَّا یَقْدِرُ عَلٰی شَیْءٍ وَّمَنْ رَّزَقْنٰهُ مِنَّا رِزْقًا حَسَنًا فَهُوَ یُنْفِقُ مِنْهُ سِرًّا وَّجَهْرًا ؕ— هَلْ یَسْتَوٗنَ ؕ— اَلْحَمْدُ لِلّٰهِ ؕ— بَلْ اَكْثَرُهُمْ لَا یَعْلَمُوْنَ ۟

ಅಲ್ಲಾಹು ಒಂದು ಉದಾಹರಣೆಯನ್ನು ಕೊಡುತ್ತಾನೆ. ಇನ್ನೊಬ್ಬನ ಅಧೀನದಲ್ಲಿರುವ ಒಬ್ಬ ಗುಲಾಮ. ಅವನಿಗೆ (ಸ್ವಯಂ) ಏನೂ ಮಾಡುವ ಸಾಮರ್ಥ್ಯವಿಲ್ಲ. ಅದೇ ರೀತಿ, ನಾವು ಅತ್ಯುತ್ತಮ ಉಪಜೀವನವನ್ನು ದಯಪಾಲಿಸಿದ ಇನ್ನೊಬ್ಬ ವ್ಯಕ್ತಿ. ಅವನು ಅದರಿಂದ ರಹಸ್ಯವಾಗಿಯೂ ಬಹಿರಂಗವಾಗಿಯೂ ಖರ್ಚು ಮಾಡುತ್ತಾನೆ. ಇವರು ಸಮಾನರಾಗುವರೇ?[1] ಅಲ್ಲಾಹನಿಗೆ ಸರ್ವಸ್ತುತಿ. ವಾಸ್ತವವಾಗಿ, ಅವರಲ್ಲಿ ಹೆಚ್ಚಿನವರೂ ತಿಳಿಯುವುದಿಲ್ಲ. info

[1] ಮೊದಲನೆಯವನು ಒಬ್ಬ ಗುಲಾಮ ಮತ್ತು ಎರಡನೆಯವನು ಸ್ವತಂತ್ರ ವ್ಯಕ್ತಿ. ಇವರಿಬ್ಬರೂ ಮನುಷ್ಯರು. ಇವರು ಅನೇಕ ಗುಣಗಳನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಆದರೂ ನೀವು ಇವರಿಬ್ಬರನ್ನು ಸಮಾನರೆಂದು ಪರಿಗಣಿಸುವುದಿಲ್ಲ. ಹೀಗಿರುವಾಗ ನಿಮ್ಮ ದೇವರುಗಳನ್ನು ಅಥವಾ ಸಮಾಧಿಯಲ್ಲಿರುವ ಮಹಾಪುರುಷರನ್ನು ನೀವು ಅಲ್ಲಾಹನಿಗೆ ಸಮಾನರೆಂದು ಹೇಗೆ ಕಲ್ಪಿಸಿಕೊಳ್ಳುತ್ತೀರಿ?

التفاسير: