《古兰经》译解 - 卡纳达语翻译 - 哈姆宰·比图尔

external-link copy
71 : 16

وَاللّٰهُ فَضَّلَ بَعْضَكُمْ عَلٰی بَعْضٍ فِی الرِّزْقِ ۚ— فَمَا الَّذِیْنَ فُضِّلُوْا بِرَآدِّیْ رِزْقِهِمْ عَلٰی مَا مَلَكَتْ اَیْمَانُهُمْ فَهُمْ فِیْهِ سَوَآءٌ ؕ— اَفَبِنِعْمَةِ اللّٰهِ یَجْحَدُوْنَ ۟

ಅಲ್ಲಾಹು ನಿಮ್ಮಲ್ಲಿ ಕೆಲವರಿಗೆ ಇತರ ಕೆಲವರಿಗಿಂತಲೂ ಹೆಚ್ಚು ಉಪಜೀವನವನ್ನು ನೀಡಿದ್ದಾನೆ. ಹೆಚ್ಚು ಉಪಜೀವನ ನೀಡಲಾದವರು ಅದನ್ನು ತಮ್ಮ ಅಧೀನದಲ್ಲಿರುವ ಗುಲಾಮರಿಗೆ ನೀಡಿ ಅದರಲ್ಲಿ ಇಬ್ಬರೂ (ಗುಲಾಮ ಮತ್ತು ಯಜಮಾನ) ಸಮಾನರಾಗುವಂತೆ ಮಾಡಿಕೊಳ್ಳುವುದಿಲ್ಲ.[1] ಹಾಗಿದ್ದೂ ಅವರು ಅಲ್ಲಾಹನ ಅನುಗ್ರಹಗಳನ್ನು ನಿಷೇಧಿಸುತ್ತಾರೆಯೇ? info

[1] ನಿಮ್ಮ ಅಧೀನದಲ್ಲಿರುವ ಗುಲಾಮರಿಗಿಂತಲೂ ಹೆಚ್ಚು ಆಸ್ತಿಪಾಸ್ತಿ ನಿಮ್ಮಲ್ಲಿದೆ. ಆದರೂ ನೀವು ನಿಮ್ಮಲ್ಲಿರುವ ಆಸ್ತಿಯನ್ನು ಅವರಿಗೂ ಹಂಚಿ ನೀವಿಬ್ಬರೂ ಆಸ್ತಿಯಲ್ಲಿ ಸಮಾನರಾಗುವಂತೆ ಮಾಡುವುದಿಲ್ಲ. ಆದರೆ ನೀವು ಅಲ್ಲಾಹನ ದಾಸರನ್ನು ಅವನಿಗೆ ಸಹಭಾಗಿಯಾಗಿ ಮಾಡಿ ಅವರು ಅಲ್ಲಾಹನಿಗೆ ಸಮಾನರಾಗಿದ್ದಾರೆ ಮತ್ತು ಅಲ್ಲಾಹು ಅವರಿಗೆ ಅವನ ಅಧಿಕಾರವನ್ನು ಹಂಚಿದ್ದಾನೆಂದು ಹೇಳುತ್ತೀರಿ.

التفاسير: