[1] ಸ್ಪಷ್ಟ ಪುರಾವೆ ಎಂದರೆ ಮನುಷ್ಯನ ಸಹಜ ಮನೋಧರ್ಮ (ಫಿತ್ರ). ಎಲ್ಲಾ ಮನುಷ್ಯರೂ ಸಹಜ ಮನೋಧರ್ಮದಲ್ಲೇ (ಏಕದೇವವಿಶ್ವಾಸದಲ್ಲೇ) ಹುಟ್ಟುತ್ತಾರೆ. ನಂತರ ಅವರ ತಂದೆ-ತಾಯಿಗಳು ಅವರನ್ನು ಯಹೂದಿ, ಕ್ರೈಸ್ತ ಅಥವಾ ಅಗ್ನಿಪೂಜಕರನ್ನಾಗಿ ಮಾಡುತ್ತಾರೆ.
[2] ಅದರ ಹಿಂದೆ ಎಂದರೆ ಅದರ ಜೊತೆಗೆ. ಸಾಕ್ಷಿ ಎಂದರೆ ಪವಿತ್ರ ಕುರ್‌ಆನ್.
[3] ಇದರ ಅರ್ಥವೇನೆಂದರೆ ಒಬ್ಬ ವ್ಯಕ್ತಿ ತನ್ನ ಸಹಜ ಮನೋಧರ್ಮದ ಆಧಾರದಲ್ಲಿದ್ದು ಏಕೈಕ ದೇವನನ್ನು ಮಾತ್ರ ಆರಾಧಿಸುತ್ತಾನೆ. ಅವನ ಜೊತೆಗೆ ಅವನನ್ನು ಆ ಸಹಜ ಮನೋಧರ್ಮಕ್ಕೆ (ಏಕದೇವವಿಶ್ವಾಸಕ್ಕೆ) ಆಮಂತ್ರಿಸುವ ಪವಿತ್ರ ಕುರ್‌ಆನ್ ಇದೆ. ಮಾತ್ರವಲ್ಲ, ಇದಕ್ಕಿಂತ ಮುಂಚೆ ಅವತೀರ್ಣವಾದ ಮೂಸಾರ (ಅವರ ಮೇಲೆ ಶಾಂತಿಯಿರಲಿ) ಕೂಡ ಪವಿತ್ರ ಕುರ್‌ಆನನ್ನು ಅನುಸರಿಸಲು ಹೇಳುತ್ತದೆ. ಇಂತಹ ವ್ಯಕ್ತಿ ಖಂಡಿತ ಪವಿತ್ರ ಕುರ್‌ಆನ್‌ನಲ್ಲಿ ವಿಶ್ವಾಸವಿಡುತ್ತಾನೆ.