《古兰经》译解 - 卡纳达语翻译 - 巴希尔·梅苏里。

external-link copy
2 : 5

یٰۤاَیُّهَا الَّذِیْنَ اٰمَنُوْا لَا تُحِلُّوْا شَعَآىِٕرَ اللّٰهِ وَلَا الشَّهْرَ الْحَرَامَ وَلَا الْهَدْیَ وَلَا الْقَلَآىِٕدَ وَلَاۤ آٰمِّیْنَ الْبَیْتَ الْحَرَامَ یَبْتَغُوْنَ فَضْلًا مِّنْ رَّبِّهِمْ وَرِضْوَانًا ؕ— وَاِذَا حَلَلْتُمْ فَاصْطَادُوْا ؕ— وَلَا یَجْرِمَنَّكُمْ شَنَاٰنُ قَوْمٍ اَنْ صَدُّوْكُمْ عَنِ الْمَسْجِدِ الْحَرَامِ اَنْ تَعْتَدُوْا ۘ— وَتَعَاوَنُوْا عَلَی الْبِرِّ وَالتَّقْوٰی ۪— وَلَا تَعَاوَنُوْا عَلَی الْاِثْمِ وَالْعُدْوَانِ ۪— وَاتَّقُوا اللّٰهَ ؕ— اِنَّ اللّٰهَ شَدِیْدُ الْعِقَابِ ۟

ಓ ಸತ್ಯವಿಶ್ವಾಸಿಗಳೇ, ಅಲ್ಲಾಹನ ಧರ್ಮ ಲಾಂಛನಗಳನ್ನು ಅಪಮಾನಿಸÀದಿರಿ. ಪವಿತ್ರವಾದ ತಿಂಗಳನ್ನು ಹರಮ್‌ನಲ್ಲಿ ಬಲಿಕೊಡಲು ಕೊಂಡೊಯ್ಯಲಾಗುವ ಮೃಗಗಳನ್ನು, ಹಾಗೂ ಬಲಿ ಸೂಚಕವಾಗಿ ಕೊರಳಪಟ್ಟಿಯಿರುವ ಮೃಗಗಳನ್ನು ಮತ್ತು ತಮ್ಮ ಪ್ರಭುವಿನ ಅನುಗ್ರಹ ಹಾಗೂ ಸಂತೃಪ್ತಿಯನ್ನು ಅರಸುತ್ತಾ ಪವಿತ್ರ ಭವನದೆಡೆಗೆ (ಹಜ್ಜ್ಗಾಗಿ) ಹೋಗುವವರನ್ನು ಅಪಮಾನಿಸÀದಿರಿ. ಆದರೆ ಇಹ್ರಾಮನ್ನು ಬಿಚ್ಚಿದ ಬಳಿಕ ನೀವು ಬೇಟೆಯಾಡಬಹುದಾಗಿದೆ. ಒಂದು ಜನತೆಯ ನಿಮ್ಮೊಂದಿಗಿನ ವೈರತ್ವವು ಅವರು ನಿಮ್ಮನ್ನು ಮಸ್ಜಿದುಲ್ ಹರಾಮ್‌ನಿಂದ ತಡೆದರು. ಎಂಬ ವಿಚಾರವು ಅವರೊಡನೆ ಅನ್ಯಾಯ ಮಾಡಲು ನಿಮ್ಮನ್ನು ಪ್ರೇರೇಪಿಸದಿರಲಿ. ಪುಣ್ಯ ಮತ್ತು ಧರ್ಮ ನಿಷ್ಠೆಯ ವಿಚಾರದಲ್ಲಿ ನೀವು ಪರಸ್ಪರ ಸಹಾಯ ಮಾಡುತ್ತಲಿರಿ. ಪಾಪ ಮತ್ತು ಅನ್ಯಾಯಗಳ ವಿಚಾರದಲ್ಲಿ ನೀವು ಪರಸ್ಪರ ಸಹಾಯ ಮಾಡಬೇಡಿರಿ. ನೀವು ಅಲ್ಲಾಹನನ್ನು ಭಯಪಡಿರಿ. ಖಂಡಿತವಾಗಿಯು ಅಲ್ಲಾಹನು ಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ. info
التفاسير: