《古兰经》译解 - 卡纳达语翻译 - 巴希尔·梅苏里。

external-link copy
102 : 4

وَاِذَا كُنْتَ فِیْهِمْ فَاَقَمْتَ لَهُمُ الصَّلٰوةَ فَلْتَقُمْ طَآىِٕفَةٌ مِّنْهُمْ مَّعَكَ وَلْیَاْخُذُوْۤا اَسْلِحَتَهُمْ ۫— فَاِذَا سَجَدُوْا فَلْیَكُوْنُوْا مِنْ وَّرَآىِٕكُمْ ۪— وَلْتَاْتِ طَآىِٕفَةٌ اُخْرٰی لَمْ یُصَلُّوْا فَلْیُصَلُّوْا مَعَكَ وَلْیَاْخُذُوْا حِذْرَهُمْ وَاَسْلِحَتَهُمْ ۚ— وَدَّ الَّذِیْنَ كَفَرُوْا لَوْ تَغْفُلُوْنَ عَنْ اَسْلِحَتِكُمْ وَاَمْتِعَتِكُمْ فَیَمِیْلُوْنَ عَلَیْكُمْ مَّیْلَةً وَّاحِدَةً ؕ— وَلَا جُنَاحَ عَلَیْكُمْ اِنْ كَانَ بِكُمْ اَذًی مِّنْ مَّطَرٍ اَوْ كُنْتُمْ مَّرْضٰۤی اَنْ تَضَعُوْۤا اَسْلِحَتَكُمْ ۚ— وَخُذُوْا حِذْرَكُمْ ؕ— اِنَّ اللّٰهَ اَعَدَّ لِلْكٰفِرِیْنَ عَذَابًا مُّهِیْنًا ۟

ಪೈಗಂಬರರೇ, ನೀವು ಅವರ (ಮುಜಾಹಿದ್‌ಗಳ) ಜೊತೆಗಿದ್ದು, ಅವರ ನಮಾಝ್‌ನ ನೇತೃತ್ವ ನಿರ್ವಹಿಸುತ್ತಿರುವಾಗ ಅವರಲ್ಲಿ ಒಂದು ಗುಂಪು ನಿಮ್ಮ ಹಿಂದೆ ಬಂದು ನಿಲ್ಲಲಿ ಮತ್ತು ತಮ್ಮ ಆಯುಧಗಳನ್ನು ಹಿಡಿದುಕೊಂಡಿರಲಿ. ಅವರು ಸುಜೂದ್(ಸಾಷ್ಟಾಂಗ)ಮುಗಿಸಿದ ನಂತರ ಸರಿದು ನಿಂತು ನಮಾಝ್ ಮಾಡಿರದ ಇನ್ನೊಂದು ಗುಂಪು ಬಂದು ನಿಮ್ಮೊಂದಿಗೆ ನಮಾಝ್ ಮಾಡಲಿ. ಅವರು ಎಚ್ಚರ ವಹಿಸಲಿ ಮತ್ತು ತಮ್ಮ ಆಯುಧಗಳನ್ನು ಹಿಡಿದುಕೊಂಡಿರಲಿ. ನೀವು ನಿಮ್ಮ ಆಯುಧಗಳನ್ನು ಮತ್ತು ಸಾವiಗ್ರಿಗಳ ಕುರಿತು ಅಲಕ್ಷö್ಯರಾದರೆ, ನಿಮ್ಮ ಮೇಲೆ ಒಮ್ಮೇಲೆ ಮುಗಿಬೀಳಬಹುದೆಂದು ಸತ್ಯನಿಷೇಧಿಗಳು ಬಯಸುತ್ತಾರೆ. ಆದರೆ ನಿಮಗೆ ಮಳೆ ಅಥವಾ ರೋಗದ ನಿಮಿತ್ತ ತೊಂದರೆಯಿದ್ದರೆ ನಿಮ್ಮ ಆಯುಧಗಳನ್ನು ಕೆಳಗಿಡುವುದುರಲ್ಲಿ ದೋಷವಿಲ್ಲ ಮತ್ತು ನೀವು ನಿಮ್ಮ ಎಚ್ಚರ ವಹಿಸಿರಿ ಖಂಡಿತವಾಗಿಯು ಅಲ್ಲಾಹನು ಆ ಸತ್ಯನಿಷೇಧಿಗಳಿಗೆ ಅಪಮಾನಕರವಾದ ಶಿಕ್ಷೆಯನ್ನು ಸಿದ್ಧಗೊಳಿಸಿಟ್ಟಿದ್ದಾನೆ. info
التفاسير: