《古兰经》译解 - 卡纳达语翻译 - 巴希尔·梅苏里。

页码:close

external-link copy
105 : 23

اَلَمْ تَكُنْ اٰیٰتِیْ تُتْلٰی عَلَیْكُمْ فَكُنْتُمْ بِهَا تُكَذِّبُوْنَ ۟

ಅಲ್ಲಾಹನು ಅವರೊಡನೆ (ನರಕವಾಸಿಗಳಿಂದ) ಕೇಳುವನು: ನನ್ನ ಸೂಕ್ತಿಗಳನ್ನು ನಿಮಗೆ ಓದಿ ಹೇಳಲಾಗುತ್ತಿರಲಿಲ್ಲವೇ? ಹಾಗಿದ್ದೂ ನೀವು ಅದನ್ನು ಸುಳ್ಳಾಗಿಸುತ್ತಿದ್ದಿರಿ. info
التفاسير:

external-link copy
106 : 23

قَالُوْا رَبَّنَا غَلَبَتْ عَلَیْنَا شِقْوَتُنَا وَكُنَّا قَوْمًا ضَآلِّیْنَ ۟

ಅವರು ಹೇಳುವರು: ನಮ್ಮ ಪ್ರಭುವೇ, ನಮ್ಮ ಮೇಲೆ ನಮ್ಮ ದುರಾದೃಷ್ಟವು ಪ್ರಾಬಲ್ಯ ಸಾಧಿಸಿತು ಮತ್ತು ನಾವು ಮಾರ್ಗಭ್ರಷ್ಟ ಜನರಾಗಿದ್ದೆವು. info
التفاسير:

external-link copy
107 : 23

رَبَّنَاۤ اَخْرِجْنَا مِنْهَا فَاِنْ عُدْنَا فَاِنَّا ظٰلِمُوْنَ ۟

ನಮ್ಮ ಪ್ರಭುವೇ, ನೀನು ನಮ್ಮನ್ನು ಇಲ್ಲಿಂದ ಹೊರ ಹಾಕು. ಪುನಃ ನಾವು ಹಾಗೆ ಮಾಡಿದರೆ ಖಂಡಿತ ನಾವು ಅಕ್ರಮಿಗಳಾಗುವೆವು. info
التفاسير:

external-link copy
108 : 23

قَالَ اخْسَـُٔوْا فِیْهَا وَلَا تُكَلِّمُوْنِ ۟

ಅಲ್ಲಾಹನು ಹೇಳುವನು: ನೀವು ನಿಂದ್ಯರಾಗಿ ಇಲ್ಲೇ (ನರಕದಲ್ಲೇ) ಬಿದ್ದಿರಿ ಮತ್ತು ನನ್ನೊಂದಿಗೆ ಮಾತನಾಡಬೇಡಿರಿ. info
التفاسير:

external-link copy
109 : 23

اِنَّهٗ كَانَ فَرِیْقٌ مِّنْ عِبَادِیْ یَقُوْلُوْنَ رَبَّنَاۤ اٰمَنَّا فَاغْفِرْ لَنَا وَارْحَمْنَا وَاَنْتَ خَیْرُ الرّٰحِمِیْنَ ۟ۚۖ

ನನ್ನ ದಾಸರ ಪೈಕಿ ಒಂದು ಸಮೂಹ: ಓ ನಮ್ಮ ಪ್ರಭುವೇ, ನಾವು ವಿಶ್ವಾಸವಿರಿಸಿದೆವು. ಆದ್ದರಿಂದ ನೀನು ನಮ್ಮನ್ನು ಕ್ಷಮಿಸು ಹಾಗೂ ನಮ್ಮ ಮೇಲೆ ಕರುಣೆ ತೋರು. ನೀನು ಸಕಲ ಕಾರುಣ್ಯವಂತರಲ್ಲಿ ಅತ್ಯುತ್ತಮನಾಗಿರುವೆ ಎಂದು ಪ್ರಾರ್ಥಿಸುತ್ತಿತ್ತು. info
التفاسير:

external-link copy
110 : 23

فَاتَّخَذْتُمُوْهُمْ سِخْرِیًّا حَتّٰۤی اَنْسَوْكُمْ ذِكْرِیْ وَكُنْتُمْ مِّنْهُمْ تَضْحَكُوْنَ ۟

ಆಗ ನೀವು ಅವರನ್ನು ಪರಿಹಾಸ್ಯ ಮಾಡಿದಿರಿ. ಕೊನೆಗೆ ಅದು ನಿಮಗೆ ನನ್ನ ಸ್ಮರಣೆಯನ್ನೇ ಮರೆಯುವಂತೆ ಮಾಡಿತು ಮತ್ತು ನೀವು ಅವರನ್ನು ಕಂಡು ನಗುತ್ತಿದ್ದಿರಿ. info
التفاسير:

external-link copy
111 : 23

اِنِّیْ جَزَیْتُهُمُ الْیَوْمَ بِمَا صَبَرُوْۤا ۙ— اَنَّهُمْ هُمُ الْفَآىِٕزُوْنَ ۟

ನಾನಿಂದು ಅವರಿಗೆ ಅವರ ಸಹನೆಯ ಪ್ರತಿಫಲವನ್ನು ನೀಡಿರುವೆನು. ನಿಜವಾಗಿಯೂ ಅವರೇ ಜಯಶಾಲಿಗಳು. info
التفاسير:

external-link copy
112 : 23

قٰلَ كَمْ لَبِثْتُمْ فِی الْاَرْضِ عَدَدَ سِنِیْنَ ۟

ಅಲ್ಲಾಹನು ಕೇಳುವನು: ನೀವು ಭೂಮಿಯಲ್ಲಿ ವರ್ಷಗಳ ಗಣನೆಯ ಪ್ರಕಾರ ಎಷ್ಟು ಕಾಲ ತಂಗಿದ್ದೀರಿ? info
التفاسير:

external-link copy
113 : 23

قَالُوْا لَبِثْنَا یَوْمًا اَوْ بَعْضَ یَوْمٍ فَسْـَٔلِ الْعَآدِّیْنَ ۟

ಅವರು ಹೇಳುವರು: ಒಂದು ದಿನ ಇಲ್ಲವೇ ದಿನದ ಒಂದು ಭಾಗ ತಂಗಿದ್ದೆವು. ಎಣಿಕೆ ಮಾಡುವ ಮಲಕ್‌ಗಳೊಂದಿಗೆ ಕೇಳಿ ನೋಡು. info
التفاسير:

external-link copy
114 : 23

قٰلَ اِنْ لَّبِثْتُمْ اِلَّا قَلِیْلًا لَّوْ اَنَّكُمْ كُنْتُمْ تَعْلَمُوْنَ ۟

ಅಲ್ಲಾಹನು ಹೇಳುವನು: ನಿಜವಾಗಿಯೂ ನೀವು ಅತ್ಯಲ್ಪ ಕಾಲವೆ ತಂಗಿದ್ದೀರಿ. ನೀವು ಮೊದಲೇ ತಿಳಿದಿರುತ್ತಿದ್ದರೆ!. info
التفاسير:

external-link copy
115 : 23

اَفَحَسِبْتُمْ اَنَّمَا خَلَقْنٰكُمْ عَبَثًا وَّاَنَّكُمْ اِلَیْنَا لَا تُرْجَعُوْنَ ۟

ನಾವು ನಿಮ್ಮನ್ನು ನಿರರ್ಥಕವಾಗಿ ಸೃಷ್ಟಿಸಿದ್ದೇವೆಂದೂ ಮತ್ತು ನೀವು ನಮ್ಮೆಡೆಗೆ ಮರಳಿಸಲಾಗುವುದಿಲ್ಲವೆಂದೂ ಭಾವಿಸಿ ಕೊಂಡಿದ್ದೀರಾ info
التفاسير:

external-link copy
116 : 23

فَتَعٰلَی اللّٰهُ الْمَلِكُ الْحَقُّ ۚ— لَاۤ اِلٰهَ اِلَّا هُوَ ۚ— رَبُّ الْعَرْشِ الْكَرِیْمِ ۟

ಅಲ್ಲಾಹನು ಮಹೋನ್ನತನು, ನೈಜ ಅಧಿಪತಿಯಾಗಿರುವನು. ಅವನ ಹೊರತು ಬೇರೆ ದೇವನಿಲ್ಲ. ಅವನೇ ಸಿಂಹಾಸನದ ಒಡೆಯನಾಗಿದ್ದಾನೆ. info
التفاسير:

external-link copy
117 : 23

وَمَنْ یَّدْعُ مَعَ اللّٰهِ اِلٰهًا اٰخَرَ ۙ— لَا بُرْهَانَ لَهٗ بِهٖ ۙ— فَاِنَّمَا حِسَابُهٗ عِنْدَ رَبِّهٖ ؕ— اِنَّهٗ لَا یُفْلِحُ الْكٰفِرُوْنَ ۟

ಯಾರು ಅಲ್ಲಾಹನ ಜೊತೆ ಬೇರೊಬ್ಬ ಆರಾಧ್ಯ ದೇವನನ್ನು ಕರೆದು ಬೇಡುತ್ತಾನೋ ವಸ್ತುತಃ ಅವನ ಬಳಿ ಅದರ ಕುರಿತು ಯಾವ ಆಧಾರವು ಇಲ್ಲ. ಅವನ ಲೆಕ್ಕಾಚಾರವು ಅವನ ಪ್ರಭುವಿನ ಬಳಿಯಿದೆ. ಸತ್ಯನಿಷೇಧಿಗಳು ಖಂಡಿತ ಯಶಸ್ಸು ಪಡೆಯಲಾರರು. info
التفاسير:

external-link copy
118 : 23

وَقُلْ رَّبِّ اغْفِرْ وَارْحَمْ وَاَنْتَ خَیْرُ الرّٰحِمِیْنَ ۟۠

ಓ ಪೈಗಂಬರರೇ ಹೇಳಿರಿ: ನನ್ನ ಪ್ರಭುವೇ, ನನ್ನನ್ನು ಕ್ಷಮಿಸು ಹಾಗೂ ನನ್ನ ಮೇಲೆ ಕರುಣೆ ತೋರು ಮತ್ತು ನೀನು ಸಕಲ ಕಾರುಣ್ಯವಂತರಲ್ಲಿ ಅತ್ಯುತ್ತಮನಾಗಿರುವೆ. info
التفاسير: