《古兰经》译解 - 卡纳达语翻译 - 巴希尔·梅苏里。

页码:close

external-link copy
46 : 18

اَلْمَالُ وَالْبَنُوْنَ زِیْنَةُ الْحَیٰوةِ الدُّنْیَا ۚ— وَالْبٰقِیٰتُ الصّٰلِحٰتُ خَیْرٌ عِنْدَ رَبِّكَ ثَوَابًا وَّخَیْرٌ اَمَلًا ۟

ಸೊತ್ತು ಸಂತಾನಗಳು ಐಹಿಕ ಜೀವನದ ಅಲಂಕಾರವಾಗಿದೆ ಮತ್ತು ಬಾಕಿಯುಳಿಯುವ ಸತ್ಕರ್ಮಗಳೇ ನಿಮ್ಮ ಪ್ರಭುವಿನ ಬಳಿ ಪ್ರತಿಫಲದ ದೃಷ್ಟಿಯಿಂದ ಹಾಗೂ ನಿರೀಕ್ಷೆಯಿಡುವ ದೃಷ್ಟಿಯಿಂದ ಅತ್ಯುತ್ತಮವಾಗಿದೆ. info
التفاسير:

external-link copy
47 : 18

وَیَوْمَ نُسَیِّرُ الْجِبَالَ وَتَرَی الْاَرْضَ بَارِزَةً ۙ— وَّحَشَرْنٰهُمْ فَلَمْ نُغَادِرْ مِنْهُمْ اَحَدًا ۟ۚ

ನಾವು ಪರ್ವತಗಳನ್ನು ಚಲಾಯಿಸುವ ದಿನದಂದು ನೀವು ಭೂಮಿಯನ್ನು ಸಮತಟ್ಟಾದ ಮೈದಾನದಂತೆ ಕಾಣುವಿರಿ ಮತ್ತು ನಾವು ಸಕಲ ಜನರನ್ನು ಒಟ್ಟುಗೂಡಿಸುವೆವು. ಅವರ ಪೈಕಿ ಯಾರನ್ನೂ ಬಿಡಲಾರೆವು. info
التفاسير:

external-link copy
48 : 18

وَعُرِضُوْا عَلٰی رَبِّكَ صَفًّا ؕ— لَقَدْ جِئْتُمُوْنَا كَمَا خَلَقْنٰكُمْ اَوَّلَ مَرَّةٍ ؗ— بَلْ زَعَمْتُمْ اَلَّنْ نَّجْعَلَ لَكُمْ مَّوْعِدًا ۟

ಮತ್ತು ಸಕಲರೂ ನಿಮ್ಮ ಪ್ರಭುವಿನ ಮುಂದೆ ಸಾಲು ಸಾಲಾಗಿ ಹಾಜರುಗೊಳಿಸಲಾಗುವರು. ಖಂಡಿತವಾಗಿಯು ಮೊದಲ ಬಾರಿಗೆ ನಾವು ನಿಮ್ಮನ್ನು ಸೃಷ್ಟಿಸಿದಂತೆಯೇ ನೀವು ನಮ್ಮ ಬಳಿಗೆ ಬಂದಿರುವಿರಿ. ಆದರೆ ನೀವಂತು ನಾವು ನಿಮಗೆ ಪುನರುತ್ಥಾನದ ಯಾವ ವಾಗ್ದಾನವನ್ನೂ ನಿಶ್ಚಯಿಸಿಲ್ಲವೆಂದು ಭಾವಿಸಿದ್ದಿರಿ. info
التفاسير:

external-link copy
49 : 18

وَوُضِعَ الْكِتٰبُ فَتَرَی الْمُجْرِمِیْنَ مُشْفِقِیْنَ مِمَّا فِیْهِ وَیَقُوْلُوْنَ یٰوَیْلَتَنَا مَالِ هٰذَا الْكِتٰبِ لَا یُغَادِرُ صَغِیْرَةً وَّلَا كَبِیْرَةً اِلَّاۤ اَحْصٰىهَا ۚ— وَوَجَدُوْا مَا عَمِلُوْا حَاضِرًا ؕ— وَلَا یَظْلِمُ رَبُّكَ اَحَدًا ۟۠

ಮತ್ತು ಕರ್ಮ ಗ್ರಂಥವನ್ನು ಮುಂದಿಡಲಾಗುವುದು. ಆಗ ನೀವು ಅಪರಾಧಿಗಳನ್ನು ಅದರಲ್ಲಿರುವುದರ ನಿಮಿತ್ತ ಭಯಭೀತರಾಗುತ್ತಿರುವುದನ್ನು ಕಾಣುವಿರಿ. ಅವರು ಹೇಳುತ್ತಿರುವರು: ಅಯ್ಯೋ, ನಮ್ಮ ದುರ್ಗತಿಯೇ, ಇದೆಂತಹ ಗ್ರಂಥ! ಚಿಕ್ಕದಿರಲಿ, ದೊಡ್ಡದಿರಲಿ ಯಾವೊಂದನ್ನೂ ಇದು ದಾಖಲಿಸದೆ ಬಿಟ್ಟಿಲ್ಲವಲ್ಲ. ಅವರು ಮಾಡಿದ್ದನ್ನೆಲ್ಲಾ ಅದರಲ್ಲಿ ಕಾಣುವರು ಮತ್ತು ನಿಮ್ಮ ಪ್ರಭವು ಯಾರ ಮೇಲೂ ಅನ್ಯಾಯ ಮಾಡುವುದಿಲ್ಲ. info
التفاسير:

external-link copy
50 : 18

وَاِذْ قُلْنَا لِلْمَلٰٓىِٕكَةِ اسْجُدُوْا لِاٰدَمَ فَسَجَدُوْۤا اِلَّاۤ اِبْلِیْسَ ؕ— كَانَ مِنَ الْجِنِّ فَفَسَقَ عَنْ اَمْرِ رَبِّهٖ ؕ— اَفَتَتَّخِذُوْنَهٗ وَذُرِّیَّتَهٗۤ اَوْلِیَآءَ مِنْ دُوْنِیْ وَهُمْ لَكُمْ عَدُوٌّ ؕ— بِئْسَ لِلظّٰلِمِیْنَ بَدَلًا ۟

ನಾವು ಮಲಕ್‌ಗಳಿಗೆ: ಆದಮರಿಗೆ ಸಾಷ್ಟಾಂಗವೆರಗಿರಿ ಎಂದು ಹೇಳಿದ ಸಂದರ್ಭವನ್ನು ಸ್ಮರಿಸಿರಿ ಅವರೆಲ್ಲರೂ ಸಾಷ್ಟಾಂಗವೆರಗಿದರು. ಇಬ್ಲೀಸ್‌ನ ಹೊರತು ಅವನು ಯಕ್ಷಗಳಲ್ಲಾಗಿದ್ದನು. ಆದ್ದರಿಂದ ಅವನು ತನ್ನ ಪ್ರಭುವಿನ ಆದೇಶವನ್ನು ಧಿಕ್ಕರಿಸಿದನು. ಹಾಗಿದ್ದೂ ನೀವು ಅವನನ್ನೂ, ಅವನ ಸಂತಾನವನ್ನೂ ನನ್ನನ್ನು ಬಿಟ್ಟು ನಿಮ್ಮ ಆಪ್ತಮಿತ್ರರನ್ನಾಗಿ ಮಾಡಿಕೊಳ್ಳುತ್ತಿರುವಿರಾ? ವಸ್ತುತಃ ಅವರು ನಿಮಗೆ ಶತ್ರುಗಳಾಗಿರುತ್ತಾರೆ. ಇಂತಹ ಅಕ್ರಮಿಗಳು ಅಲ್ಲಾಹನೆದುರು ಸ್ವೀಕರಿಸುತ್ತಿರುವ ಬದಲಿಯು ಅದೆಷ್ಟು ಕೆಟ್ಟದು!. info
التفاسير:

external-link copy
51 : 18

مَاۤ اَشْهَدْتُّهُمْ خَلْقَ السَّمٰوٰتِ وَالْاَرْضِ وَلَا خَلْقَ اَنْفُسِهِمْ ۪— وَمَا كُنْتُ مُتَّخِذَ الْمُضِلِّیْنَ عَضُدًا ۟

ನಾನು ಆಕಾಶಗಳ ಮತ್ತು ಭೂಮಿಯ ಸೃಷ್ಟಿಯ ಸಂದರ್ಭದಲ್ಲಾಗಲೀ, ಸ್ವತಃ ಅವರದೇ ಸೃಷ್ಟಿಯ ಸಂದರ್ಭದಲ್ಲಾಗಲೀ ಅವರನ್ನು ಸಾಕ್ಷಿಗಳನ್ನಾಗಿ ಮಾಡಿಕೊಂಡಿರಲಿಲ್ಲ. ಮತ್ತು ದಾರಿಗೆಡಿಸುವವರನ್ನು ನಾನು ನನ್ನ ಸಹಾಯಕನನ್ನಾಗಿ ಮಾಡಿಕೊಳ್ಳುವವನೂ ಅಲ್ಲ. info
التفاسير:

external-link copy
52 : 18

وَیَوْمَ یَقُوْلُ نَادُوْا شُرَكَآءِیَ الَّذِیْنَ زَعَمْتُمْ فَدَعَوْهُمْ فَلَمْ یَسْتَجِیْبُوْا لَهُمْ وَجَعَلْنَا بَیْنَهُمْ مَّوْبِقًا ۟

ನೀವು (ಬಹುದೇವಾರಾಧಕರು) ನನ್ನ ಸಹಭಾಗಿಗಳೆಂದು ಭಾವಿಸಿಕೊಂಡಿದ್ದವರನ್ನು ಕರೆಯಿರಿ ಎಂದು ಅಲ್ಲಾಹನು ಹೇಳುವ ದಿನ. ಕಾರಣ ಅವರು ಅವರನ್ನು (ದೇವತೆಗಳನ್ನು) ಕರೆಯುವರು ಆದರೆ ಅವರು ಅವರ ಕರೆಗೆ ಓಗೊಡಲಾರರು. ಆಗ ನಾವು (ಅಲ್ಲಾಹ್) ಅವರ ನಡುವೆ ವಿನಾಶ ಪಾತವನ್ನು ಉಂಟು ಮಾಡಿ ಬಿಡುವೆವು. info
التفاسير:

external-link copy
53 : 18

وَرَاَ الْمُجْرِمُوْنَ النَّارَ فَظَنُّوْۤا اَنَّهُمْ مُّوَاقِعُوْهَا وَلَمْ یَجِدُوْا عَنْهَا مَصْرِفًا ۟۠

ನೀವು (ಬಹುದೇವಾರಾಧಕರು) ನನ್ನ ಸಹಭಾಗಿಗಳೆಂದು ಭಾವಿಸಿಕೊಂಡಿದ್ದವರನ್ನು ಕರೆಯಿರಿ ಎಂದು ಅಲ್ಲಾಹನು ಹೇಳುವ ದಿನ. ಕಾರಣ ಅವರು ಅವರನ್ನು (ದೇವತೆಗಳನ್ನು) ಕರೆಯುವರು ಆದರೆ ಅವರು ಅವರ ಕರೆಗೆ ಓಗೊಡಲಾರರು. ಆಗ ನಾವು (ಅಲ್ಲಾಹ್) ಅವರ ನಡುವೆ ವಿನಾಶ ಪಾತವನ್ನು ಉಂಟು ಮಾಡಿ ಬಿಡುವೆವು. info
التفاسير: