Salin ng mga Kahulugan ng Marangal na Qur'an - Salin sa Wikang Kanarese ni Hamza Batur

ಅಲ್ -ಬಯ್ಯಿನ

external-link copy
1 : 98

لَمْ یَكُنِ الَّذِیْنَ كَفَرُوْا مِنْ اَهْلِ الْكِتٰبِ وَالْمُشْرِكِیْنَ مُنْفَكِّیْنَ حَتّٰی تَاْتِیَهُمُ الْبَیِّنَةُ ۟ۙ

ಗ್ರಂಥದವರಲ್ಲಿ ಸೇರಿದ ಸತ್ಯನಿಷೇಧಿಗಳು ಮತ್ತು ಬಹುದೇವವಿಶ್ವಾಸಿಗಳು ಸ್ಪಷ್ಟ ಸಾಕ್ಷ್ಯವು ಅವರ ಬಳಿಗೆ ಬರುವ ತನಕ (ಸತ್ಯನಿಷೇಧದಿಂದ) ದೂರವಾಗುವವರಾಗಿರಲಿಲ್ಲ. info
التفاسير:

external-link copy
2 : 98

رَسُوْلٌ مِّنَ اللّٰهِ یَتْلُوْا صُحُفًا مُّطَهَّرَةً ۟ۙ

(ಆ ಸಾಕ್ಷ್ಯವು) ಪರಿಶುದ್ಧ ಗ್ರಂಥಗಳನ್ನು ಓದಿಕೊಡುವ ಅಲ್ಲಾಹನ ಕಡೆಯ ಸಂದೇಶವಾಹಕರಾಗಿದ್ದಾರೆ. info
التفاسير:

external-link copy
3 : 98

فِیْهَا كُتُبٌ قَیِّمَةٌ ۟ؕ

ಅದರಲ್ಲಿ (ಆ ಗ್ರಂಥದಲ್ಲಿ) ಸರಿಯಾದ ನಿಯಮಗಳಿವೆ. info
التفاسير:

external-link copy
4 : 98

وَمَا تَفَرَّقَ الَّذِیْنَ اُوْتُوا الْكِتٰبَ اِلَّا مِنْ بَعْدِ مَا جَآءَتْهُمُ الْبَیِّنَةُ ۟ؕ

ಗ್ರಂಥ ನೀಡಲಾದವರು ಅವರ ಬಳಿಗೆ ಸ್ಪಷ್ಟ ಸಾಕ್ಷ್ಯವು ಬಂದ ಬಳಿಕವೇ (ಭಿನ್ನಮತ ತಳೆದು) ವಿಭಿನ್ನ ಪಂಗಡಗಳಾದರು. info
التفاسير:

external-link copy
5 : 98

وَمَاۤ اُمِرُوْۤا اِلَّا لِیَعْبُدُوا اللّٰهَ مُخْلِصِیْنَ لَهُ الدِّیْنَ ۙ۬— حُنَفَآءَ وَیُقِیْمُوا الصَّلٰوةَ وَیُؤْتُوا الزَّكٰوةَ وَذٰلِكَ دِیْنُ الْقَیِّمَةِ ۟ؕ

ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕವಾಗಿಸಿ ಏಕನಿಷ್ಠರಾಗಿ ಅವನನ್ನು ಮಾತ್ರ ಆರಾಧಿಸಿರಿ, ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ ಎಂದಲ್ಲದೆ ಬೇರೇನನ್ನೂ ಅವರಿಗೆ ಆದೇಶಿಸಲಾಗಿರಲಿಲ್ಲ. ಅದೇ ನೇರವಾದ ಧರ್ಮ. info
التفاسير:

external-link copy
6 : 98

اِنَّ الَّذِیْنَ كَفَرُوْا مِنْ اَهْلِ الْكِتٰبِ وَالْمُشْرِكِیْنَ فِیْ نَارِ جَهَنَّمَ خٰلِدِیْنَ فِیْهَا ؕ— اُولٰٓىِٕكَ هُمْ شَرُّ الْبَرِیَّةِ ۟ؕ

ನಿಶ್ಚಯವಾಗಿಯೂ ಗ್ರಂಥದವರಲ್ಲಿ ಸೇರಿದ ಸತ್ಯನಿಷೇಧಿಗಳು ಮತ್ತು ಬಹುದೇವವಿಶ್ವಾಸಿಗಳು ನರಕವಾಸಿಗಳಾಗಿದ್ದಾರೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರು ಸೃಷ್ಟಿಗಳಲ್ಲೇ ಅತಿನಿಕೃಷ್ಟರು. info
التفاسير:

external-link copy
7 : 98

اِنَّ الَّذِیْنَ اٰمَنُوْا وَعَمِلُوا الصّٰلِحٰتِ ۙ— اُولٰٓىِٕكَ هُمْ خَیْرُ الْبَرِیَّةِ ۟ؕ

ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ ಅವರು ಸೃಷ್ಟಿಗಳಲ್ಲೇ ಅತಿಶ್ರೇಷ್ಠರು. info
التفاسير:

external-link copy
8 : 98

جَزَآؤُهُمْ عِنْدَ رَبِّهِمْ جَنّٰتُ عَدْنٍ تَجْرِیْ مِنْ تَحْتِهَا الْاَنْهٰرُ خٰلِدِیْنَ فِیْهَاۤ اَبَدًا ؕ— رَضِیَ اللّٰهُ عَنْهُمْ وَرَضُوْا عَنْهُ ؕ— ذٰلِكَ لِمَنْ خَشِیَ رَبَّهٗ ۟۠

ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿಯಿರುವ ಪ್ರತಿಫಲವು ಶಾಶ್ವತವಾಸದ ಸ್ವರ್ಗೋದ್ಯಾನಗಳಾಗಿವೆ. ಅವುಗಳ ತಳಭಾಗದಿಂದ ನದಿಗಳು ಹರಿಯುತ್ತವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಾಹು ಅವರ ಬಗ್ಗೆ ಸಂಪ್ರೀನಾಗಿದ್ದಾನೆ ಮತ್ತು ಅವರು ಅಲ್ಲಾಹನ ಬಗ್ಗೆ ಸಂಪ್ರೀತರಾಗಿದ್ದಾರೆ. ಇದು ತನ್ನ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುವವನಿಗೆ ಇರುವುದಾಗಿದೆ. info
التفاسير: