Salin ng mga Kahulugan ng Marangal na Qur'an - Salin sa Wikang Kanarese ni Hamza Batur

Numero ng Pahina:close

external-link copy
55 : 9

فَلَا تُعْجِبْكَ اَمْوَالُهُمْ وَلَاۤ اَوْلَادُهُمْ ؕ— اِنَّمَا یُرِیْدُ اللّٰهُ لِیُعَذِّبَهُمْ بِهَا فِی الْحَیٰوةِ الدُّنْیَا وَتَزْهَقَ اَنْفُسُهُمْ وَهُمْ كٰفِرُوْنَ ۟

ಅವರ ಆಸ್ತಿ ಮತ್ತು ಮಕ್ಕಳನ್ನು ನೋಡಿ ಬೆರಗಾಗಬೇಡಿ. ಅಲ್ಲಾಹು ಅವುಗಳ ಮೂಲಕ ಅವರನ್ನು ಇಹಲೋಕದಲ್ಲೇ ಶಿಕ್ಷಿಸಲು ಮತ್ತು ಸತ್ಯನಿಷೇಧಿಗಳಾಗಿಯೇ ಅವರು ಪ್ರಾಣ ಬಿಡುವಂತಾಗಲು ಬಯಸುತ್ತಾನೆ. info
التفاسير:

external-link copy
56 : 9

وَیَحْلِفُوْنَ بِاللّٰهِ اِنَّهُمْ لَمِنْكُمْ ؕ— وَمَا هُمْ مِّنْكُمْ وَلٰكِنَّهُمْ قَوْمٌ یَّفْرَقُوْنَ ۟

ಅವರು ನಿಮ್ಮಲ್ಲಿ ಸೇರಿದವರು ಎಂದು (ಸಾಬೀತುಪಡಿಸಲು) ಅವರು ಅಲ್ಲಾಹನ ಹೆಸರಲ್ಲಿ ಆಣೆ ಮಾಡುತ್ತಾರೆ. ಆದರೆ ಅವರು ನಿಮ್ಮಲ್ಲಿ ಸೇರಿದವರಲ್ಲ. ಬದಲಿಗೆ ಅವರು ಅಂಜುಬುರುಕ ಜನರಾಗಿದ್ದಾರೆ. info
التفاسير:

external-link copy
57 : 9

لَوْ یَجِدُوْنَ مَلْجَاً اَوْ مَغٰرٰتٍ اَوْ مُدَّخَلًا لَّوَلَّوْا اِلَیْهِ وَهُمْ یَجْمَحُوْنَ ۟

ಅವರು (ಅಡಗಿಕೊಳ್ಳಲು) ಒಂದು ರಕ್ಷಣಾತಾಣವನ್ನು, ಗುಹೆಯನ್ನು ಅಥವಾ ನುಸುಳಿಕೊಳ್ಳಲು ಯಾವುದಾದರೂ ದ್ವಾರವನ್ನು ಕಂಡರೆ ಅದರ ಕಡೆಗೆ ದೌಡಾಯಿಸುತ್ತಾ ಓಡುತ್ತಾರೆ. info
التفاسير:

external-link copy
58 : 9

وَمِنْهُمْ مَّنْ یَّلْمِزُكَ فِی الصَّدَقٰتِ ۚ— فَاِنْ اُعْطُوْا مِنْهَا رَضُوْا وَاِنْ لَّمْ یُعْطَوْا مِنْهَاۤ اِذَا هُمْ یَسْخَطُوْنَ ۟

ದಾನಧರ್ಮಗಳನ್ನು ಹಂಚುವ ವಿಷಯದಲ್ಲಿ ನಿಮ್ಮನ್ನು ಟೀಕಿಸುವವರೂ ಅವರಲ್ಲಿದ್ದಾರೆ. ಅವರಿಗೆ ಅದರಿಂದ ಏನಾದರೂ ಕೊಟ್ಟುಬಿಟ್ಟರೆ ಸಂತೋಷವಾಗುತ್ತದೆ. ಅವರಿಗೆ ಏನೂ ಕೊಡದಿದ್ದರೆ ಅವರು ಸಿಟ್ಟಾಗುತ್ತಾರೆ. info
التفاسير:

external-link copy
59 : 9

وَلَوْ اَنَّهُمْ رَضُوْا مَاۤ اٰتٰىهُمُ اللّٰهُ وَرَسُوْلُهٗ ۙ— وَقَالُوْا حَسْبُنَا اللّٰهُ سَیُؤْتِیْنَا اللّٰهُ مِنْ فَضْلِهٖ وَرَسُوْلُهٗۤ ۙ— اِنَّاۤ اِلَی اللّٰهِ رٰغِبُوْنَ ۟۠

ಅಲ್ಲಾಹು ಮತ್ತು ಅವನ ಸಂದೇಶವಾಹಕರು ಏನು ಕೊಟ್ಟರೋ ಅದರಲ್ಲಿ ಸಂತೃಪ್ತರಾಗಿ, “ನಮಗೆ ಅಲ್ಲಾಹು ಸಾಕು; ಅಲ್ಲಾಹು ಅವನ ಔದಾರ್ಯದಿಂದ ನಮಗೆ ಕೊಡುವನು ಮತ್ತು ಅವನ ಸಂದೇಶವಾಹಕರು ಕೂಡ ಕೊಡುವರು; ನಿಶ್ಚಯವಾಗಿಯೂ ನಾವು ಅಲ್ಲಾಹನಲ್ಲಿ ಮಾತ್ರ ನಿರೀಕ್ಷೆಯಿಡುತ್ತೇವೆ” ಎಂದು ಅವರು ಹೇಳುತ್ತಿದ್ದರೆ (ಎಷ್ಟು ಚೆನ್ನಾಗಿತ್ತು)! info
التفاسير:

external-link copy
60 : 9

اِنَّمَا الصَّدَقٰتُ لِلْفُقَرَآءِ وَالْمَسٰكِیْنِ وَالْعٰمِلِیْنَ عَلَیْهَا وَالْمُؤَلَّفَةِ قُلُوْبُهُمْ وَفِی الرِّقَابِ وَالْغٰرِمِیْنَ وَفِیْ سَبِیْلِ اللّٰهِ وَابْنِ السَّبِیْلِ ؕ— فَرِیْضَةً مِّنَ اللّٰهِ ؕ— وَاللّٰهُ عَلِیْمٌ حَكِیْمٌ ۟

ದಾನಧರ್ಮವನ್ನು (ಝಕಾತ್) ಬಡವರಿಗೆ, ನಿರ್ಗತಿಕರಿಗೆ, ಅದರ ಸಂಗ್ರಹಕರಿಗೆ, ಹೃದಯದಲ್ಲಿ (ಇಸ್ಲಾಮ್ ಧರ್ಮದ ಬಗ್ಗೆ) ಒಲವುಳ್ಳವರಿಗೆ, ಗುಲಾಮ ವಿಮೋಚನೆಗೆ, ಸಾಲದಲ್ಲಿರುವವರಿಗೆ, ಅಲ್ಲಾಹನ ಮಾರ್ಗದಲ್ಲಿ ಹೋರಾಡುವುದಕ್ಕೆ ಮತ್ತು ಪ್ರಯಾಣಿಕರಿಗೆ ಮಾತ್ರ ನೀಡಬೇಕಾಗಿದೆ. ಇದು ಅಲ್ಲಾಹು ವಿಧಿಸಿದ ಕಡ್ಡಾಯ ಬಾಧ್ಯತೆಯಾಗಿದೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
61 : 9

وَمِنْهُمُ الَّذِیْنَ یُؤْذُوْنَ النَّبِیَّ وَیَقُوْلُوْنَ هُوَ اُذُنٌ ؕ— قُلْ اُذُنُ خَیْرٍ لَّكُمْ یُؤْمِنُ بِاللّٰهِ وَیُؤْمِنُ لِلْمُؤْمِنِیْنَ وَرَحْمَةٌ لِّلَّذِیْنَ اٰمَنُوْا مِنْكُمْ ؕ— وَالَّذِیْنَ یُؤْذُوْنَ رَسُوْلَ اللّٰهِ لَهُمْ عَذَابٌ اَلِیْمٌ ۟

ಪ್ರವಾದಿಗೆ ತೊಂದರೆ ಕೊಡುವವರು ಮತ್ತು ಅವರು (ಎಲ್ಲರ ಮಾತುಗಳನ್ನೂ ಕೇಳುವ) ಕಿವಿಯಾಗಿದ್ದಾರೆ ಎಂದು ಹೇಳುವವರು ಅವರಲ್ಲಿದ್ದಾರೆ. ಹೇಳಿರಿ: “ಅವರು ನಿಮಗೆ ಒಳಿತನ್ನೇ ಬಯಸುವ ಕಿವಿಯಾಗಿದ್ದಾರೆ. ಅವರು ಅಲ್ಲಾಹನಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಸತ್ಯವಿಶ್ವಾಸಿಗಳ ಮಾತನ್ನು ನಂಬುತ್ತಾರೆ. ಅವರು ನಿಮ್ಮಲ್ಲಿರುವ ಸತ್ಯವಿಶ್ವಾಸಿಗಳಿಗೆ ದಯೆಯಾಗಿದ್ದಾರೆ.” ಅಲ್ಲಾಹನ ಸಂದೇಶವಾಹಕರಿಗೆ ತೊಂದರೆ ಕೊಡುವವರು ಯಾರೋ ಅವರಿಗೆ ಯಾತನಾಮಯ ಶಿಕ್ಷೆಯಿದೆ. info
التفاسير: