Salin ng mga Kahulugan ng Marangal na Qur'an - Salin sa Wikang Kanarese ni Hamza Batur

ಅದ್ದಾರಿಯಾತ್

external-link copy
1 : 51

وَالذّٰرِیٰتِ ذَرْوًا ۟ۙ

ಬಲವಾಗಿ ಧೂಳಿಯನ್ನು ಹರಡುವ (ಗಾಳಿಯ) ಮೇಲಾಣೆ! info
التفاسير:

external-link copy
2 : 51

فَالْحٰمِلٰتِ وِقْرًا ۟ۙ

ಭಾರವನ್ನು ಹೊರುವ (ಮೋಡಗಳ) ಮೇಲಾಣೆ! info
التفاسير:

external-link copy
3 : 51

فَالْجٰرِیٰتِ یُسْرًا ۟ۙ

ಸುಗಮವಾಗಿ ಸಂಚರಿಸುವ (ಹಡಗುಗಳ) ಮೇಲಾಣೆ! info
التفاسير:

external-link copy
4 : 51

فَالْمُقَسِّمٰتِ اَمْرًا ۟ۙ

ಕಾರ್ಯಗಳನ್ನು ವಿಂಗಡಿಸಿಕೊಡುವ (ದೇವದೂತರು‍ಗಳ) ಮೇಲಾಣೆ! info
التفاسير:

external-link copy
5 : 51

اِنَّمَا تُوْعَدُوْنَ لَصَادِقٌ ۟ۙ

ನಿಶ್ಚಯವಾಗಿಯೂ ನಿಮಗೆ ಎಚ್ಚರಿಕೆ ನೀಡಲಾಗುವ ವಿಷಯವು ಸತ್ಯವಾಗಿದೆ. info
التفاسير:

external-link copy
6 : 51

وَّاِنَّ الدِّیْنَ لَوَاقِعٌ ۟ؕ

ನಿಶ್ಚಯವಾಗಿಯೂ ವಿಚಾರಣೆಯು ಸಂಭವಿಸಿಯೇ ತೀರುತ್ತದೆ. info
التفاسير:

external-link copy
7 : 51

وَالسَّمَآءِ ذَاتِ الْحُبُكِ ۟ۙ

ಕಕ್ಷೆಗಳನ್ನು ಹೊಂದಿರುವ ಆಕಾಶದ ಮೇಲಾಣೆ! info
التفاسير:

external-link copy
8 : 51

اِنَّكُمْ لَفِیْ قَوْلٍ مُّخْتَلِفٍ ۟ۙ

ನಿಶ್ಚಯವಾಗಿಯೂ ನೀವು ವಿಭಿನ್ನ ಅಭಿಪ್ರಾಯಗಳಲ್ಲಿದ್ದೀರಿ. info
التفاسير:

external-link copy
9 : 51

یُّؤْفَكُ عَنْهُ مَنْ اُفِكَ ۟ؕ

(ಸತ್ಯದಿಂದ) ತಪ್ಪಿಸಲ್ಪಟ್ಟವನು ಅದರಿಂದ (ಕುರ್‌ಆನ್‍ನಿಂದ) ತಪ್ಪಿಸಲ್ಪಡುತ್ತಾನೆ. info
التفاسير:

external-link copy
10 : 51

قُتِلَ الْخَرّٰصُوْنَ ۟ۙ

ಆಧಾರರಹಿತ ಮಾತುಗಳನ್ನು ಹೇಳುವವರು ನಾಶವಾಗಿದ್ದಾರೆ. info
التفاسير:

external-link copy
11 : 51

الَّذِیْنَ هُمْ فِیْ غَمْرَةٍ سَاهُوْنَ ۟ۙ

ಅವರು ಅಜ್ಞಾನದಲ್ಲಿದ್ದಾರೆ ಮತ್ತು ಮರೆತುಬಿಟ್ಟಿದ್ದಾರೆ. info
التفاسير:

external-link copy
12 : 51

یَسْـَٔلُوْنَ اَیَّانَ یَوْمُ الدِّیْنِ ۟ؕ

“ಪ್ರತಿಫಲದ ದಿನ ಯಾವಾಗ?” ಎಂದು ಅವರು ಕೇಳುತ್ತಾರೆ. info
التفاسير:

external-link copy
13 : 51

یَوْمَ هُمْ عَلَی النَّارِ یُفْتَنُوْنَ ۟

ಅವರನ್ನು ನರಕಾಗ್ನಿಯಲ್ಲಿ ಶಿಕ್ಷಿಸಲಾಗುವ ದಿನ. info
التفاسير:

external-link copy
14 : 51

ذُوْقُوْا فِتْنَتَكُمْ ؕ— هٰذَا الَّذِیْ كُنْتُمْ بِهٖ تَسْتَعْجِلُوْنَ ۟

(ಅವರೊಂದಿಗೆ ಹೇಳಲಾಗುವುದು): “ನಿಮ್ಮ ಶಿಕ್ಷೆಯ ರುಚಿಯನ್ನು ನೋಡಿರಿ. ಇದಕ್ಕೇ ನೀವು ತ್ವರೆ ಮಾಡುತ್ತಿದ್ದಿರಿ.” info
التفاسير:

external-link copy
15 : 51

اِنَّ الْمُتَّقِیْنَ فِیْ جَنّٰتٍ وَّعُیُوْنٍ ۟ۙ

ನಿಶ್ಚಯವಾಗಿಯೂ ದೇವಭಯವುಳ್ಳವರು ಸ್ವರ್ಗೋದ್ಯಾನಗಳಲ್ಲಿ ಮತ್ತು ತೊರೆಗಳಲ್ಲಿರುವರು. info
التفاسير:

external-link copy
16 : 51

اٰخِذِیْنَ مَاۤ اٰتٰىهُمْ رَبُّهُمْ ؕ— اِنَّهُمْ كَانُوْا قَبْلَ ذٰلِكَ مُحْسِنِیْنَ ۟ؕ

ಅವರಿಗೆ ಅವರ ಪರಿಪಾಲಕನು (ಅಲ್ಲಾಹು) ನೀಡಿದ್ದನ್ನು ಅವರು ಪಡೆಯುವರು. ನಿಶ್ಚಯವಾಗಿಯೂ ಇದಕ್ಕಿಂತ ಮೊದಲು ಅವರು ನೀತಿವಂತರಾಗಿದ್ದರು. info
التفاسير:

external-link copy
17 : 51

كَانُوْا قَلِیْلًا مِّنَ الَّیْلِ مَا یَهْجَعُوْنَ ۟

ಅವರು ರಾತ್ರಿಯಲ್ಲಿ ಬಹಳ ಕಡಿಮೆ ನಿದ್ರಿಸುತ್ತಿದ್ದರು. info
التفاسير:

external-link copy
18 : 51

وَبِالْاَسْحَارِ هُمْ یَسْتَغْفِرُوْنَ ۟

ಸಹರಿಯ ಸಮಯದಲ್ಲಿ ಅವರು (ಅಲ್ಲಾಹನಲ್ಲಿ) ಕ್ಷಮೆಯಾಚಿಸುತ್ತಿದ್ದರು. info
التفاسير:

external-link copy
19 : 51

وَفِیْۤ اَمْوَالِهِمْ حَقٌّ لِّلسَّآىِٕلِ وَالْمَحْرُوْمِ ۟

ಅವರ ಧನದಲ್ಲಿ ಬೇಡುವವರಿಗೆ ಮತ್ತು (ಉಪಜೀವನ) ತಡೆಯಲ್ಪಟ್ಟವರಿಗೆ ಹಕ್ಕಿತ್ತು. info
التفاسير:

external-link copy
20 : 51

وَفِی الْاَرْضِ اٰیٰتٌ لِّلْمُوْقِنِیْنَ ۟ۙ

ದೃಢವಿಶ್ವಾಸವುಳ್ಳವರಿಗೆ ಭೂಮಿಯಲ್ಲಿ ಅನೇಕ ದೃಷ್ಟಾಂತಗಳಿವೆ. info
التفاسير:

external-link copy
21 : 51

وَفِیْۤ اَنْفُسِكُمْ ؕ— اَفَلَا تُبْصِرُوْنَ ۟

ನಿಮ್ಮ ದೇಹಗಳಲ್ಲೂ ಕೂಡ. ಆದರೂ ನೀವು ನೋಡುವುದಿಲ್ಲವೇ? info
التفاسير:

external-link copy
22 : 51

وَفِی السَّمَآءِ رِزْقُكُمْ وَمَا تُوْعَدُوْنَ ۟

ಆಕಾಶದಲ್ಲಿ ನಿಮ್ಮ ಉಪಜೀವನ ಮತ್ತು ನಿಮಗೆ ವಾಗ್ದಾನ ಮಾಡಲಾಗುವ ಎಲ್ಲವೂ ಇದೆ. info
التفاسير:

external-link copy
23 : 51

فَوَرَبِّ السَّمَآءِ وَالْاَرْضِ اِنَّهٗ لَحَقٌّ مِّثْلَ مَاۤ اَنَّكُمْ تَنْطِقُوْنَ ۟۠

ಭೂಮ್ಯಾಕಾಶಗಳ ಪರಿಪಾಲಕನ (ಅಲ್ಲಾಹನ) ಮೇಲಾಣೆ! ನೀವು ಹೇಗೆ ಮಾತನಾಡುತ್ತಿರುವಿರೋ ಹಾಗೆಯೇ ಇವೆಲ್ಲವೂ ಸತ್ಯವಾಗಿದೆ.[1] info

[1] ನಿಮಗೆ ಮಾತನಾಡುವ ಶಕ್ತಿಯಿರುವುದನ್ನು ನೀವು ಹೇಗೆ ನಿರಾಕರಿಸುವುದಿಲ್ಲವೋ ಹಾಗೆಯೇ ಮೇಲೆ ಹೇಳಿದ ವಿಷಯಗಳೆಲ್ಲವೂ ನಿರಾಕರಿಸಲಾಗದ ಸತ್ಯವಾಗಿದೆ.

التفاسير:

external-link copy
24 : 51

هَلْ اَتٰىكَ حَدِیْثُ ضَیْفِ اِبْرٰهِیْمَ الْمُكْرَمِیْنَ ۟ۘ

ಇಬ್ರಾಹೀಮರ ಸನ್ಮಾನ್ಯ ಅತಿಥಿಗಳ ಸಮಾಚಾರವು ನಿಮಗೆ ತಲುಪಿದೆಯೇ? info
التفاسير:

external-link copy
25 : 51

اِذْ دَخَلُوْا عَلَیْهِ فَقَالُوْا سَلٰمًا ؕ— قَالَ سَلٰمٌ ۚ— قَوْمٌ مُّنْكَرُوْنَ ۟

ಅವರು ಇಬ್ರಾಹೀಮರ ಬಳಿಗೆ ಬಂದು ಸಲಾಂ ಹೇಳಿದ ಸಂದರ್ಭ. ಇಬ್ರಾಹೀಮ್ ಸಲಾಂಗೆ ಉತ್ತರಿಸಿ ಹೇಳಿದರು: “ನೀವು ಅಪರಿಚಿತ ಜನರಂತೆ ಕಾಣುತ್ತೀರಿ.” info
التفاسير:

external-link copy
26 : 51

فَرَاغَ اِلٰۤی اَهْلِهٖ فَجَآءَ بِعِجْلٍ سَمِیْنٍ ۟ۙ

ನಂತರ ಅವರು ಆತುರದಿಂದ ತಮ್ಮ ಮನೆಯವರ ಕಡೆಗೆ ತೆರಳಿ ಒಂದು ಕೊಬ್ಬಿದ ಕರುವನ್ನು (ಬೇಯಿಸಿ) ತಂದರು. info
التفاسير:

external-link copy
27 : 51

فَقَرَّبَهٗۤ اِلَیْهِمْ قَالَ اَلَا تَاْكُلُوْنَ ۟ؗ

ಅದನ್ನು ಅವರ ಮುಂದೆ ಇಟ್ಟರು. ನಂತರ ಕೇಳಿದರು: “ನೀವೇಕೆ ತಿನ್ನುವುದಿಲ್ಲ?” info
التفاسير:

external-link copy
28 : 51

فَاَوْجَسَ مِنْهُمْ خِیْفَةً ؕ— قَالُوْا لَا تَخَفْ ؕ— وَبَشَّرُوْهُ بِغُلٰمٍ عَلِیْمٍ ۟

ಇಬ್ರಾಹೀಮರಿಗೆ ಅವರ ಬಗ್ಗೆ ಮನಸ್ಸಿನಲ್ಲಿ ಗಾಬರಿ ಉಂಟಾಯಿತು. ಅವರು ಹೇಳಿದರು: “ಗಾಬರಿಯಾಗಬೇಡಿ.” ಅವರು ಇಬ್ರಾಹೀಮರಿಗೆ ಜ್ಞಾನವಂತ ಮಗುವಿನ (ಜನನದ ಬಗ್ಗೆ) ಸುವಾರ್ತೆ ತಿಳಿಸಿದರು. info
التفاسير:

external-link copy
29 : 51

فَاَقْبَلَتِ امْرَاَتُهٗ فِیْ صَرَّةٍ فَصَكَّتْ وَجْهَهَا وَقَالَتْ عَجُوْزٌ عَقِیْمٌ ۟

ಅವರ ಪತ್ನಿ ಸದ್ದು ಮಾಡುತ್ತಾ ಮುಂದಕ್ಕೆ ಬಂದು ತನ್ನ ಮುಖಕ್ಕೆ ಬಡಿದು ಹೇಳಿದರು: “ನಾನೊಬ್ಬ ಮುದುಕಿ ಮತ್ತು ಬಂಜೆಯಾಗಿದ್ದೇನೆ.” info
التفاسير:

external-link copy
30 : 51

قَالُوْا كَذٰلِكِ ۙ— قَالَ رَبُّكِ ؕ— اِنَّهٗ هُوَ الْحَكِیْمُ الْعَلِیْمُ ۟

ದೇವದೂತರು‍ಗಳು ಹೇಳಿದರು: “ಈ ರೀತಿ ನಿಮ್ಮ ಪರಿಪಾಲಕನು (ಅಲ್ಲಾಹು) ಹೇಳಿದ್ದಾನೆ. ನಿಶ್ಚಯವಾಗಿಯೂ ಅವನು ವಿವೇಕಪೂರ್ಣನು ಮತ್ತು ಸರ್ವಜ್ಞನಾಗಿದ್ದಾನೆ.” info
التفاسير:

external-link copy
31 : 51

قَالَ فَمَا خَطْبُكُمْ اَیُّهَا الْمُرْسَلُوْنَ ۟

ಇಬ್ರಾಹೀಮ್ ಕೇಳಿದರು: “ಓ ದೂತರೇ! ಇಲ್ಲಿ ನಿಮಗೇನು ಕೆಲಸವಿದೆಯೆಂದು ಬಂದಿದ್ದೀರಿ?” info
التفاسير:

external-link copy
32 : 51

قَالُوْۤا اِنَّاۤ اُرْسِلْنَاۤ اِلٰی قَوْمٍ مُّجْرِمِیْنَ ۟ۙ

ಅವರು ಉತ್ತರಿಸಿದರು: “ನಮ್ಮನ್ನು ಅಪರಾಧಿಗಳಾದ ಜನರ ಬಳಿಗೆ ಕಳುಹಿಸಲಾಗಿದೆ. info
التفاسير:

external-link copy
33 : 51

لِنُرْسِلَ عَلَیْهِمْ حِجَارَةً مِّنْ طِیْنٍ ۟ۙ

ಅವರ ಮೇಲೆ ಜೇಡಿಮಣ್ಣಿನ ಕಲ್ಲುಗಳನ್ನು ಸುರಿಸುವುದಕ್ಕಾಗಿ. info
التفاسير:

external-link copy
34 : 51

مُّسَوَّمَةً عِنْدَ رَبِّكَ لِلْمُسْرِفِیْنَ ۟

ಅದು ಎಲ್ಲೆ ಮೀರಿದ ಜನರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಗುರುತು ಹಾಕಲಾದ ಕಲ್ಲುಗಳಾಗಿವೆ.” info
التفاسير:

external-link copy
35 : 51

فَاَخْرَجْنَا مَنْ كَانَ فِیْهَا مِنَ الْمُؤْمِنِیْنَ ۟ۚ

ನಾವು ಅಲ್ಲಿದ್ದ ಎಲ್ಲಾ ಸತ್ಯವಿಶ್ವಾಸಿಗಳನ್ನು ಹೊರತೆಗೆದೆವು (ರಕ್ಷಿಸಿದೆವು). info
التفاسير:

external-link copy
36 : 51

فَمَا وَجَدْنَا فِیْهَا غَیْرَ بَیْتٍ مِّنَ الْمُسْلِمِیْنَ ۟ۚ

ಆದರೆ ನಾವು ಅಲ್ಲಿ ಮುಸ್ಲಿಮರಿಗೆ ಸೇರಿದ ಒಂದೇ ಒಂದು ಮನೆಯನ್ನು ಮಾತ್ರ ಕಂಡೆವು. info
التفاسير:

external-link copy
37 : 51

وَتَرَكْنَا فِیْهَاۤ اٰیَةً لِّلَّذِیْنَ یَخَافُوْنَ الْعَذَابَ الْاَلِیْمَ ۟ؕ

ಯಾತನಾಮಯ ಶಿಕ್ಷೆಯನ್ನು ಭಯಪಡುವವರಿಗೆ ನಾವು ಅಲ್ಲಿ ಒಂದು ದೃಷ್ಟಾಂತವನ್ನು ಉಳಿಸಿದೆವು. info
التفاسير:

external-link copy
38 : 51

وَفِیْ مُوْسٰۤی اِذْ اَرْسَلْنٰهُ اِلٰی فِرْعَوْنَ بِسُلْطٰنٍ مُّبِیْنٍ ۟

ಮೂಸಾರ ಸಮಾಚಾರದಲ್ಲೂ (ದೃಷ್ಟಾಂತಗಳಿವೆ). ನಾವು ಅವರನ್ನು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಫರೋಹ‍ನ ಬಳಿಗೆ ಕಳುಹಿಸಿದ ಸಂದರ್ಭ. info
التفاسير:

external-link copy
39 : 51

فَتَوَلّٰی بِرُكْنِهٖ وَقَالَ سٰحِرٌ اَوْ مَجْنُوْنٌ ۟

ಆದರೆ ಅವನು ತನ್ನ ಶಕ್ತಿಸಾಮರ್ಥ್ಯಕ್ಕೆ ಮರುಳಾಗಿ ಮುಖ ತಿರುಗಿಸುತ್ತಾ ಹೇಳಿದನು: “ಇವನೊಬ್ಬ ಮಾಟಗಾರ ಅಥವಾ ಮಾನಸಿಕ ಅಸ್ವಸ್ಥ.” info
التفاسير:

external-link copy
40 : 51

فَاَخَذْنٰهُ وَجُنُوْدَهٗ فَنَبَذْنٰهُمْ فِی الْیَمِّ وَهُوَ مُلِیْمٌ ۟ؕ

ಆದ್ದರಿಂದ ನಾವು ಅವನನ್ನು ಮತ್ತು ಅವನ ಸೈನ್ಯಗಳನ್ನು ಹಿಡಿದು ಸಮುದ್ರಕ್ಕೆ ಎಸೆದವು. ಅವನು ಆಕ್ಷೇಪಾರ್ಹನಾಗಿದ್ದನು. info
التفاسير:

external-link copy
41 : 51

وَفِیْ عَادٍ اِذْ اَرْسَلْنَا عَلَیْهِمُ الرِّیْحَ الْعَقِیْمَ ۟ۚ

ಆದ್ ಗೋತ್ರದಲ್ಲೂ (ದೃಷ್ಟಾಂತವಿದೆ). ನಾವು ಅವರ ವಿರುದ್ಧ ಬರಡು ಗಾಳಿಯನ್ನು ಕಳುಹಿಸಿದ ಸಂದರ್ಭ. info
التفاسير:

external-link copy
42 : 51

مَا تَذَرُ مِنْ شَیْءٍ اَتَتْ عَلَیْهِ اِلَّا جَعَلَتْهُ كَالرَّمِیْمِ ۟ؕ

ಅದು ಯಾವೆಲ್ಲಾ ವಸ್ತುಗಳ ಮೇಲೆ ಬೀಸುತ್ತಿತ್ತೋ ಅವೆಲ್ಲವನ್ನೂ ಕೊಳೆತ ತುಣುಕುಗಳಂತೆ (ಚೂರು ಚೂರು) ಮಾಡುತ್ತಿತ್ತು. info
التفاسير:

external-link copy
43 : 51

وَفِیْ ثَمُوْدَ اِذْ قِیْلَ لَهُمْ تَمَتَّعُوْا حَتّٰی حِیْنٍ ۟

ಸಮೂದ್ ಗೋತ್ರದಲ್ಲೂ (ದೃಷ್ಟಾಂತವಿದೆ). “ಒಂದು ಅವಧಿಯವರೆಗೆ ಆನಂದಿಸಿರಿ” ಎಂದು ಅವರೊಡನೆ ಹೇಳಲಾದ ಸಂದರ್ಭ. info
التفاسير:

external-link copy
44 : 51

فَعَتَوْا عَنْ اَمْرِ رَبِّهِمْ فَاَخَذَتْهُمُ الصّٰعِقَةُ وَهُمْ یَنْظُرُوْنَ ۟

ಆದರೆ ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆಯನ್ನು ಧಿಕ್ಕರಿಸಿದರು. ಆಗ ಅವರು ನೋಡುತ್ತಿದ್ದಂತೆಯೇ ಭಯಾನಕ ಶಬ್ದವು ಅವರನ್ನು ಹಿಡಿಯಿತು. info
التفاسير:

external-link copy
45 : 51

فَمَا اسْتَطَاعُوْا مِنْ قِیَامٍ وَّمَا كَانُوْا مُنْتَصِرِیْنَ ۟ۙ

ಅವರಿಗೆ ಎದ್ದು ನಿಲ್ಲಲು ಕೂಡ ಸಾಧ್ಯವಾಗಲಿಲ್ಲ. ಅವರಿಗೆ ಸ್ವಯಂ ರಕ್ಷಿಸಿಕೊಳ್ಳಲೂ ಸಾಧ್ಯವಾಗಲಿಲ್ಲ. info
التفاسير:

external-link copy
46 : 51

وَقَوْمَ نُوْحٍ مِّنْ قَبْلُ ؕ— اِنَّهُمْ كَانُوْا قَوْمًا فٰسِقِیْنَ ۟۠

ಅದಕ್ಕಿಂತ ಮೊದಲು ನೂಹರ ಜನರಿಗೂ (ಇದೇ ಸ್ಥಿತಿ ಉಂಟಾಗಿತ್ತು). ನಿಶ್ಚಯವಾಗಿಯೂ ಅವರು ದುಷ್ಕರ್ಮಿಗಳಾದ ಜನರಾಗಿದ್ದರು. info
التفاسير:

external-link copy
47 : 51

وَالسَّمَآءَ بَنَیْنٰهَا بِاَیْىدٍ وَّاِنَّا لَمُوْسِعُوْنَ ۟

ನಾವು ಆಕಾಶವನ್ನು ಕೈಗಳಿಂದ ನಿರ್ಮಿಸಿದ್ದೇವೆ. ನಿಶ್ಚಯವಾಗಿಯೂ ನಾವು ವಿಸ್ತರಿಸುವವರಾಗಿದ್ದೇವೆ. info
التفاسير:

external-link copy
48 : 51

وَالْاَرْضَ فَرَشْنٰهَا فَنِعْمَ الْمٰهِدُوْنَ ۟

ನಾವು ಭೂಮಿಯನ್ನು ಹಾಸಿನಂತೆ ಹರಡಿದ್ದೇವೆ. ನಾವು ಅತ್ಯುತ್ತಮವಾಗಿ ಹಾಸುವವರಾಗಿದ್ದೇವೆ. info
التفاسير:

external-link copy
49 : 51

وَمِنْ كُلِّ شَیْءٍ خَلَقْنَا زَوْجَیْنِ لَعَلَّكُمْ تَذَكَّرُوْنَ ۟

ನಾವು ಎಲ್ಲ ವಸ್ತುಗಳನ್ನೂ ಜೋಡಿಯಾಗಿ ಸೃಷ್ಟಿಸಿದ್ದೇವೆ. ನೀವು ಉಪದೇಶ ಸ್ವೀಕರಿಸುವುದಕ್ಕಾಗಿ. info
التفاسير:

external-link copy
50 : 51

فَفِرُّوْۤا اِلَی اللّٰهِ ؕ— اِنِّیْ لَكُمْ مِّنْهُ نَذِیْرٌ مُّبِیْنٌ ۟ۚ

ಆದ್ದರಿಂದ ನೀವು ಅಲ್ಲಾಹನ ಕಡೆಗೆ (ಪಶ್ಚಾತ್ತಾಪದೊಂದಿಗೆ) ಧಾವಿಸಿರಿ. ನಿಶ್ಚಯವಾಗಿಯೂ ನಾನು ನಿಮಗೆ ಅವನ ಕಡೆಯ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ. info
التفاسير:

external-link copy
51 : 51

وَلَا تَجْعَلُوْا مَعَ اللّٰهِ اِلٰهًا اٰخَرَ ؕ— اِنِّیْ لَكُمْ مِّنْهُ نَذِیْرٌ مُّبِیْنٌ ۟

ನೀವು ಅಲ್ಲಾಹನೊಂದಿಗೆ ಬೇರೆ ದೇವರುಗಳನ್ನು ಮಾಡಿಕೊಳ್ಳಬೇಡಿ. ನಿಶ್ಚಯವಾಗಿಯೂ ನಾನು ನಿಮಗೆ ಅವನ ಕಡೆಯ ಸ್ಪಷ್ಟ ಮುನ್ನೆಚ್ಚರಿಕೆಗಾರನಾಗಿದ್ದೇನೆ. info
التفاسير:

external-link copy
52 : 51

كَذٰلِكَ مَاۤ اَتَی الَّذِیْنَ مِنْ قَبْلِهِمْ مِّنْ رَّسُوْلٍ اِلَّا قَالُوْا سَاحِرٌ اَوْ مَجْنُوْنٌ ۟۫

ಈ ರೀತಿ ಇವರಿಗಿಂತ ಮೊದಲಿನವರ ಬಳಿಗೆ ಸಂದೇಶವಾಹಕರು ಬಂದಾಗಲೆಲ್ಲಾ ಅವರು ಅವರನ್ನು ಮಾಟಗಾರ ಅಥವಾ ಮಾನಸಿಕ ಅಸ್ವಸ್ಥ ಎಂದೇ ಹೇಳುತ್ತಿದ್ದರು. info
التفاسير:

external-link copy
53 : 51

اَتَوَاصَوْا بِهٖ ۚ— بَلْ هُمْ قَوْمٌ طَاغُوْنَ ۟ۚ

ಇವರು ಈ ಮಾತನ್ನು ಪರಸ್ಪರ ಉಪದೇಶ ಮಾಡಿದ್ದಾರೆಯೇ? ಅಲ್ಲ, ವಾಸ್ತವವಾಗಿ ಅವರು ಅತಿರೇಕಿಗಳಾದ ಜನರಾಗಿದ್ದಾರೆ. info
التفاسير:

external-link copy
54 : 51

فَتَوَلَّ عَنْهُمْ فَمَاۤ اَنْتَ بِمَلُوْمٍ ۟ؗ

ಆದ್ದರಿಂದ ನೀವು ಅವರನ್ನು ಬಿಟ್ಟು ವಿಮುಖರಾಗಿರಿ. ನಿಮ್ಮ ಮೇಲೆ ಯಾವುದೇ ಆಕ್ಷೇಪವಿಲ್ಲ. info
التفاسير:

external-link copy
55 : 51

وَّذَكِّرْ فَاِنَّ الذِّكْرٰی تَنْفَعُ الْمُؤْمِنِیْنَ ۟

ನೀವು ಉಪದೇಶ ಮಾಡಿರಿ. ನಿಶ್ಚಯವಾಗಿಯೂ ಉಪದೇಶವು ಸತ್ಯವಿಶ್ವಾಸಿಗಳಿಗೆ ಪ್ರಯೋಜನ ನೀಡುತ್ತದೆ. info
التفاسير:

external-link copy
56 : 51

وَمَا خَلَقْتُ الْجِنَّ وَالْاِنْسَ اِلَّا لِیَعْبُدُوْنِ ۟

ನಾನು ಜಿನ್ನ್‌ಗಳನ್ನು ಮತ್ತು ಮನುಷ್ಯರನ್ನು ಸೃಷ್ಟಿಸಿದ್ದು ನನ್ನನ್ನು ಆರಾಧಿಸುವುದಕ್ಕಾಗಿ ಮಾತ್ರ. info
التفاسير:

external-link copy
57 : 51

مَاۤ اُرِیْدُ مِنْهُمْ مِّنْ رِّزْقٍ وَّمَاۤ اُرِیْدُ اَنْ یُّطْعِمُوْنِ ۟

ನಾನು ಅವರಿಂದ ಯಾವುದೇ ಉಪಜೀವನವನ್ನು ಬಯಸುವುದಿಲ್ಲ. ಅವರು ನನಗೆ ಆಹಾರ ನೀಡಬೇಕೆಂದೂ ನಾನು ಬಯಸುವುದಿಲ್ಲ. info
التفاسير:

external-link copy
58 : 51

اِنَّ اللّٰهَ هُوَ الرَّزَّاقُ ذُو الْقُوَّةِ الْمَتِیْنُ ۟

ನಿಶ್ಚಯವಾಗಿಯೂ ಅಲ್ಲಾಹನೇ ಎಲ್ಲರಿಗೂ ಉಪಜೀವನ ನೀಡುವವನು. ಅವನು ಮಹಾಶಕ್ತಿಶಾಲಿ ಮತ್ತು ಬಲಿಷ್ಠನಾಗಿದ್ದಾನೆ. info
التفاسير:

external-link copy
59 : 51

فَاِنَّ لِلَّذِیْنَ ظَلَمُوْا ذَنُوْبًا مِّثْلَ ذَنُوْبِ اَصْحٰبِهِمْ فَلَا یَسْتَعْجِلُوْنِ ۟

ಅಕ್ರಮವೆಸಗಿದವರಿಗೆ ಅವರ ಸಂಗಡಿಗರಿಗೆ ದೊರೆತ (ಶಿಕ್ಷೆಯ) ಪಾಲಿನಂತೆಯೇ ಒಂದು ಪಾಲು ದೊರೆಯಲಿದೆ. ಆದ್ದರಿಂದ ಅವರು ನನ್ನೊಡನೆ ತ್ವರೆ ಮಾಡದಿರಲಿ. info
التفاسير:

external-link copy
60 : 51

فَوَیْلٌ لِّلَّذِیْنَ كَفَرُوْا مِنْ یَّوْمِهِمُ الَّذِیْ یُوْعَدُوْنَ ۟۠

ಅವರಿಗೆ ವಾಗ್ದಾನ ಮಾಡಲಾದ ಆ ದಿನದ ಕಾರಣದಿಂದ ಸತ್ಯನಿಷೇಧಿಗಳಿಗೆ ವಿನಾಶವಿದೆ. info
التفاسير: