Salin ng mga Kahulugan ng Marangal na Qur'an - Salin sa Wikang Kanarese ni Hamza Batur

Numero ng Pahina:close

external-link copy
6 : 22

ذٰلِكَ بِاَنَّ اللّٰهَ هُوَ الْحَقُّ وَاَنَّهٗ یُحْیِ الْمَوْتٰی وَاَنَّهٗ عَلٰی كُلِّ شَیْءٍ قَدِیْرٌ ۟ۙ

ಅದೇಕೆಂದರೆ ಅಲ್ಲಾಹನೇ ಸತ್ಯ. ಅವನು ಸತ್ತವರಿಗೆ ಜೀವ ನೀಡುತ್ತಾನೆ. ಅವನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
7 : 22

وَّاَنَّ السَّاعَةَ اٰتِیَةٌ لَّا رَیْبَ فِیْهَا ۙ— وَاَنَّ اللّٰهَ یَبْعَثُ مَنْ فِی الْقُبُوْرِ ۟

ಅಂತ್ಯಸಮಯವು ಬಂದೇ ಬರುತ್ತದೆ. ಅದರಲ್ಲಿ ಸಂಶಯವೇ ಇಲ್ಲ. ಸಮಾಧಿಗಳಲ್ಲಿರುವವರನ್ನು ಅಲ್ಲಾಹು ಜೀವ ನೀಡಿ ಎಬ್ಬಿಸುತ್ತಾನೆ. info
التفاسير:

external-link copy
8 : 22

وَمِنَ النَّاسِ مَنْ یُّجَادِلُ فِی اللّٰهِ بِغَیْرِ عِلْمٍ وَّلَا هُدًی وَّلَا كِتٰبٍ مُّنِیْرٍ ۟ۙ

ಜನರಲ್ಲಿ ಕೆಲವರಿದ್ದಾರೆ. ಅವರು ಯಾವುದೇ ಜ್ಞಾನ, ಮಾರ್ಗದರ್ಶನ ಅಥವಾ ಬೆಳಕು ಚೆಲ್ಲುವ ಗ್ರಂಥದ ಆಧಾರವಿಲ್ಲದೆ ಅಲ್ಲಾಹನ ವಿಷಯದಲ್ಲಿ ತರ್ಕಿಸುತ್ತಾರೆ. info
التفاسير:

external-link copy
9 : 22

ثَانِیَ عِطْفِهٖ لِیُضِلَّ عَنْ سَبِیْلِ اللّٰهِ ؕ— لَهٗ فِی الدُّنْیَا خِزْیٌ وَّنُذِیْقُهٗ یَوْمَ الْقِیٰمَةِ عَذَابَ الْحَرِیْقِ ۟

ಅವನು (ಅಹಂಕಾರದಿಂದ) ತನ್ನ ಕತ್ತನ್ನು ತಿರುಗಿಸುತ್ತಾನೆ. ಜನರನ್ನು ಅಲ್ಲಾಹನ ಮಾರ್ಗದಿಂದ ತಪ್ಪಿಸುವುದಕ್ಕಾಗಿ. ಅವನಿಗೆ ಇಹಲೋಕದಲ್ಲೇ ಅಪಮಾನವಿದೆ. ಪುನರುತ್ಥಾನ ದಿನದಂದು ನಾವು ಅವನಿಗೆ ಸುಟ್ಟು ಕರಕಲಾಗಿಸುವ ಶಿಕ್ಷೆಯ ರುಚಿಯನ್ನು ತೋರಿಸುವೆವು. info
التفاسير:

external-link copy
10 : 22

ذٰلِكَ بِمَا قَدَّمَتْ یَدٰكَ وَاَنَّ اللّٰهَ لَیْسَ بِظَلَّامٍ لِّلْعَبِیْدِ ۟۠

ನಿನ್ನ ಕೈಗಳು ಮುಂದಕ್ಕೆ ಕಳುಹಿಸಿದ ದುಷ್ಕರ್ಮಗಳೇ ಇದಕ್ಕೆ ಕಾರಣ. ಅಲ್ಲಾಹು ತನ್ನ ದಾಸರಿಗೆ ಸ್ವಲ್ಪವೂ ಅನ್ಯಾಯ ಮಾಡುವವನಲ್ಲ. info
التفاسير:

external-link copy
11 : 22

وَمِنَ النَّاسِ مَنْ یَّعْبُدُ اللّٰهَ عَلٰی حَرْفٍ ۚ— فَاِنْ اَصَابَهٗ خَیْرُ ١طْمَاَنَّ بِهٖ ۚ— وَاِنْ اَصَابَتْهُ فِتْنَةُ ١نْقَلَبَ عَلٰی وَجْهِهٖ ۫ۚ— خَسِرَ الدُّنْیَا وَالْاٰخِرَةَ ؕ— ذٰلِكَ هُوَ الْخُسْرَانُ الْمُبِیْنُ ۟

ಜನರಲ್ಲಿ ಕೆಲವರಿದ್ದಾರೆ. ಅವರು ಒಂದು ತುದಿಯಲ್ಲಿ ನಿಂತು ಅಲ್ಲಾಹನನ್ನು ಆರಾಧಿಸುತ್ತಾರೆ. ಅವರಿಗೆ ಏನಾದರೂ ಲಾಭವುಂಟಾದರೆ ಅವರು ಆಸಕ್ತಿಯಿಂದ ಅದನ್ನು ಸ್ವೀಕರಿಸುತ್ತಾರೆ. ಆದರೆ ಅವರಿಗೇನಾದರೂ ಪರೀಕ್ಷೆ ಎದುರಾದರೆ ಅವರು ಮುಖ ತಿರುಗಿಸಿ ನಡೆಯುತ್ತಾರೆ. ಅವನು ಇಹಲೋಕ ಮತ್ತು ಪರಲೋಕವನ್ನು ಕಳೆದುಕೊಂಡಿದ್ದಾನೆ. ಅದೇ ಅತ್ಯಂತ ಸ್ಪಷ್ಟವಾದ ನಷ್ಟ. info
التفاسير:

external-link copy
12 : 22

یَدْعُوْا مِنْ دُوْنِ اللّٰهِ مَا لَا یَضُرُّهٗ وَمَا لَا یَنْفَعُهٗ ؕ— ذٰلِكَ هُوَ الضَّلٰلُ الْبَعِیْدُ ۟ۚ

ಅವರು ಅಲ್ಲಾಹನನ್ನು ಬಿಟ್ಟು ಅವರಿಗೆ ತೊಂದರೆ ಅಥವಾ ಉಪಕಾರ ಮಾಡದವರನ್ನು ಕರೆದು ಪ್ರಾರ್ಥಿಸುತ್ತಾರೆ. ಅದೇ ಅತಿವಿದೂರವಾದ ದುರ್ಮಾರ್ಗ. info
التفاسير:

external-link copy
13 : 22

یَدْعُوْا لَمَنْ ضَرُّهٗۤ اَقْرَبُ مِنْ نَّفْعِهٖ ؕ— لَبِئْسَ الْمَوْلٰی وَلَبِئْسَ الْعَشِیْرُ ۟

ಯಾರ ತೊಂದರೆಯು ಅವನ ಉಪಕಾರಕ್ಕಿಂತಲೂ ಹೆಚ್ಚು ಹತ್ತಿರದಲ್ಲಿದೆಯೋ ಅಂತಹವರನ್ನು ಅವರು ಕರೆದು ಪ್ರಾರ್ಥಿಸುತ್ತಾರೆ. ಅವನು ಬಹಳ ಕೆಟ್ಟ ರಕ್ಷಕನಾಗಿದ್ದಾನೆ. ಅವನು ಬಹಳ ನಿಕೃಷ್ಟ ಸಹಾಯಕನಾಗಿದ್ದಾನೆ. info
التفاسير:

external-link copy
14 : 22

اِنَّ اللّٰهَ یُدْخِلُ الَّذِیْنَ اٰمَنُوْا وَعَمِلُوا الصّٰلِحٰتِ جَنّٰتٍ تَجْرِیْ مِنْ تَحْتِهَا الْاَنْهٰرُ ؕ— اِنَّ اللّٰهَ یَفْعَلُ مَا یُرِیْدُ ۟

ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳನ್ನು ಮತ್ತು ಸತ್ಕರ್ಮವೆಸಗಿದವರನ್ನು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸುವನು. ನಿಶ್ಚಯವಾಗಿಯೂ ಅಲ್ಲಾಹು ಅವನು ಬಯಸುವುದನ್ನು ಮಾಡುತ್ತಾನೆ. info
التفاسير:

external-link copy
15 : 22

مَنْ كَانَ یَظُنُّ اَنْ لَّنْ یَّنْصُرَهُ اللّٰهُ فِی الدُّنْیَا وَالْاٰخِرَةِ فَلْیَمْدُدْ بِسَبَبٍ اِلَی السَّمَآءِ ثُمَّ لْیَقْطَعْ فَلْیَنْظُرْ هَلْ یُذْهِبَنَّ كَیْدُهٗ مَا یَغِیْظُ ۟

ಅಲ್ಲಾಹು ತನ್ನ ಪ್ರವಾದಿಗೆ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಸಹಾಯ ಮಾಡುವುದಿಲ್ಲ ಎಂದು ಭಾವಿಸುವವನು ಛಾವಣಿಗೆ ಹಗ್ಗ ಕಟ್ಟಿ (ತನ್ನ ಕೊರಳಿಗೆ ಉರುಳು ಹಾಕಿ) ಸಾಯಲಿ. ನಂತರ ತನ್ನ ಚಾಲಾಕಿತನದಿಂದ ತನ್ನನ್ನು ಕೆರಳಿಸುವ ಆ ವಿಷಯವು ನಿವಾರಣೆಯಾಗುತ್ತದೋ ಎಂದು ನೋಡಲಿ. info
التفاسير: