Salin ng mga Kahulugan ng Marangal na Qur'an - Salin sa Wikang Kannada ni Bashir Mysore

external-link copy
92 : 4

وَمَا كَانَ لِمُؤْمِنٍ اَنْ یَّقْتُلَ مُؤْمِنًا اِلَّا خَطَأً ۚ— وَمَنْ قَتَلَ مُؤْمِنًا خَطَأً فَتَحْرِیْرُ رَقَبَةٍ مُّؤْمِنَةٍ وَّدِیَةٌ مُّسَلَّمَةٌ اِلٰۤی اَهْلِهٖۤ اِلَّاۤ اَنْ یَّصَّدَّقُوْا ؕ— فَاِنْ كَانَ مِنْ قَوْمٍ عَدُوٍّ لَّكُمْ وَهُوَ مُؤْمِنٌ فَتَحْرِیْرُ رَقَبَةٍ مُّؤْمِنَةٍ ؕ— وَاِنْ كَانَ مِنْ قَوْمٍ بَیْنَكُمْ وَبَیْنَهُمْ مِّیْثَاقٌ فَدِیَةٌ مُّسَلَّمَةٌ اِلٰۤی اَهْلِهٖ وَتَحْرِیْرُ رَقَبَةٍ مُّؤْمِنَةٍ ۚ— فَمَنْ لَّمْ یَجِدْ فَصِیَامُ شَهْرَیْنِ مُتَتَابِعَیْنِ ؗ— تَوْبَةً مِّنَ اللّٰهِ ؕ— وَكَانَ اللّٰهُ عَلِیْمًا حَكِیْمًا ۟

ಒಬ್ಬ ಸತ್ಯವಿಶ್ವಾಸಿಯನ್ನು ವಧಿಸುವುದು ಪ್ರಮಾದದ ಹೊರತು ಭೂಷಣವಲ್ಲ. ಪ್ರಮಾದವಶಾತ್ ಯಾರಾದರೂ ಒಬ್ಬ ಸತ್ಯವಿಶ್ವಾಸಿಯನ್ನು ವಧಿಸಿಬಿಟ್ಟರೆ ಪ್ರಾಯಶ್ಚಿತವಾಗಿ ಒಬ್ಬ ಸತ್ಯವಿಶ್ವಾಸಿ ಗುಲಾಮನನ್ನು ಬಿಡುಗಡೆಗೊಳಿಸಬೇಕು. ಮತ್ತು ಅವನ (ಹತನಾದವನ) ಕುಟುಂಬದವರಿಗೆ ಪರಿಹಾರ ಧನವನ್ನು ನೀಡಬೇಕು. ಆದರೆ ಅವರು ಕುಟುಂಬದವರು ಅದನ್ನು ದಾನವಾಗಿ ಬಿಟ್ಟುಕೊಡುವುದಾದರೆ ಬೇರೆ ವಿಚಾರ ಮತ್ತು ಕೊಲೆಗೀಡಾದವನು ನಿಮ್ಮ ಶತ್ರು ಸಮೂಹದವನಾಗಿದ್ದು, ಅವನು ವಿಶ್ವಾಸಿಯಾಗಿದ್ದರೆ ಕೇವಲ ಸತ್ಯವಿಶ್ವಾಸಿಯಾದ ಓರ್ವ ಗುಲಾಮನನ್ನು ಬಿಡುಗಡೆ ಗೊಳಿಸುವುದು ಕಡ್ಡಾಯವಾಗಿದೆ. ಇನ್ನು ಅವನು (ಕೊಲೆಗೀಡಾದವನು) ನಿಮ್ಮ ಜೊತೆ ಸಂಧಾನ ಮಾಡಿಕೊಂಡಿರುವ ಸಮೂಹದವನಾಗಿದ್ದರೆ ಪರಿಹಾರಧನ ಕಡ್ಡಾಯವಾಗಿದೆ. ಮತ್ತು ಅವನ ವಾರೀಸುದಾರರಿಗೆ ಅದನ್ನು ನೀಡಬೇಕು. ಮತ್ತು ಒಬ್ಬ ವಿಶ್ವಾಸಿಯಾದ ಗುಲಾಮನನ್ನು ಬಿಡುಗಡೆಗೊಳಿಸಬೇಕಾಗಿದೆ. ಇನ್ನು ಯಾರಿಗಾದರು ಅದರ ಸಾಮರ್ಥ್ಯವಿಲ್ಲದಿದ್ದರೆ ಅವನ ಮೇಲೆ ನಿರಂತರ ಎರಡು ತಿಂಗಳು ಉಪವಾಸ ಆಚರಿಸುವ ಹೊಣೆಯಿದೆ. ಇದು ಅಲ್ಲಾಹನಿಂದ ಕ್ಷಮೆ ಸಿಗಲೆಂದಾಗಿದೆ ಮತ್ತು ಅಲ್ಲಾಹನು ಚೆನ್ನಾಗಿ ಅರಿಯುವವನೂ, ಯುಕ್ತಿಪೂರ್ಣನೂ ಆಗಿದ್ದಾನೆ. info
التفاسير: