Salin ng mga Kahulugan ng Marangal na Qur'an - Salin sa Wikang Kannada ni Bashir Mysore

Numero ng Pahina:close

external-link copy
148 : 4

لَا یُحِبُّ اللّٰهُ الْجَهْرَ بِالسُّوْٓءِ مِنَ الْقَوْلِ اِلَّا مَنْ ظُلِمَ ؕ— وَكَانَ اللّٰهُ سَمِیْعًا عَلِیْمًا ۟

ಕೆಟ್ಟ ಪದಗಳನ್ನು ಬಹಿರಂಗಪಡಿಸುವುದನ್ನು ಅಲ್ಲಾಹನು ಇಷ್ಟಪಡುವುದಿಲ್ಲ. ಆದರೆ ಅನ್ಯಾಯಕ್ಕೊಳಗಾದವನಿಗೆ ಅನುಮತಿಯಿದೆ ಮತ್ತು ಅಲ್ಲಾಹನು ಚೆನ್ನಾಗಿ ಆಲಿಸುವವನೂ, ಅರಿಯುವವನೂ ಆಗಿದ್ದಾನೆ. info
التفاسير:

external-link copy
149 : 4

اِنْ تُبْدُوْا خَیْرًا اَوْ تُخْفُوْهُ اَوْ تَعْفُوْا عَنْ سُوْٓءٍ فَاِنَّ اللّٰهَ كَانَ عَفُوًّا قَدِیْرًا ۟

ನೀವು ಯಾವುದೇ ಒಳಿತನ್ನು ಬಹಿರಂಗವಾಗಿಸಿರಿ ಅಥವಾ ಮುಚ್ಚಿಡಿರಿ ಅಥವಾ ಯಾವುದಾದರೂ ತಪ್ಪನ್ನು ಕ್ಷಮಿಸಿರಿ ಖಂಡಿತವಾಗಿಯು ಅಲ್ಲಾಹನು ಕ್ಷಮಿಸುವವನೂ ಸರ್ವಶಕ್ತನೂ ಆಗಿದ್ದಾನೆ. info
التفاسير:

external-link copy
150 : 4

اِنَّ الَّذِیْنَ یَكْفُرُوْنَ بِاللّٰهِ وَرُسُلِهٖ وَیُرِیْدُوْنَ اَنْ یُّفَرِّقُوْا بَیْنَ اللّٰهِ وَرُسُلِهٖ وَیَقُوْلُوْنَ نُؤْمِنُ بِبَعْضٍ وَّنَكْفُرُ بِبَعْضٍ ۙ— وَّیُرِیْدُوْنَ اَنْ یَّتَّخِذُوْا بَیْنَ ذٰلِكَ سَبِیْلًا ۙ۟

ಯಾರು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ನಿಷೇಧ ಹೊಂದುತ್ತಾರೋ ಮತ್ತು ಯಾರು ಅಲ್ಲಾಹ್ ಮತ್ತು ಅವನ ಸಂದೇಶವಾಹಕರ (ಮೇಲೆ ವಿಶ್ವಾಸವಿಡುವ ವಿಚಾರದಲ್ಲಿ) ತಾರತಮ್ಯವುನುಂಟು ಮಾಡಲು ಬಯಸುತ್ತಾರೋ ಮತ್ತು “ನಾವು ಕೆಲವು ಪೈಗಂಬರ್‌ರನ್ನು ನಂಬುತ್ತೇವೆ, ಇನ್ನು ಕೆಲವರನ್ನು ನಂಬುವುದಿಲ್ಲ ಎಂದು ಹೇಳುತ್ತಾರೋ ಮತ್ತು ಅದರ ಮಧ್ಯೆ ಬೇರೆ ಮಾರ್ಗವನ್ನು ಸ್ವೀಕರಿಸಲು ಬಯಸುತ್ತಾರೋ info
التفاسير:

external-link copy
151 : 4

اُولٰٓىِٕكَ هُمُ الْكٰفِرُوْنَ حَقًّا ۚ— وَاَعْتَدْنَا لِلْكٰفِرِیْنَ عَذَابًا مُّهِیْنًا ۟

ಖಂಡಿತವಾಗಿಯು ಅವರೆಲ್ಲ ನೈಜ ಸತ್ಯನಿಷೇಧಿಗಳಾಗಿದ್ದಾರೆ ಮತ್ತು ಸತ್ಯನಿಷೇಧಿಗಳಿಗೆ ನಾವು ನಿಂದ್ಯತೆಯ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ. info
التفاسير:

external-link copy
152 : 4

وَالَّذِیْنَ اٰمَنُوْا بِاللّٰهِ وَرُسُلِهٖ وَلَمْ یُفَرِّقُوْا بَیْنَ اَحَدٍ مِّنْهُمْ اُولٰٓىِٕكَ سَوْفَ یُؤْتِیْهِمْ اُجُوْرَهُمْ ؕ— وَكَانَ اللّٰهُ غَفُوْرًا رَّحِیْمًا ۟۠

ಯಾರು ಅಲ್ಲಾಹನ ಮೇಲೆ ಮತ್ತು ಅವನ ಸಕಲ ಸಂದೇಶವಾಹಕರ ಮೇಲೆ ವಿಶ್ವಾಸವಿಡುತ್ತಾರೋ ಮತ್ತು ಅವರ ಮಧ್ಯೆ ತಾರತಮ್ಯ ಮಾಡುವುದಿಲ್ಲವೋ ಅಲ್ಲಾಹನು ಅವರ ಪ್ರತಿಫಲವನ್ನು ಸಂಪೂರ್ಣವಾಗಿ ನೀಡಲಿರುವನು. ಮತ್ತು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
153 : 4

یَسْـَٔلُكَ اَهْلُ الْكِتٰبِ اَنْ تُنَزِّلَ عَلَیْهِمْ كِتٰبًا مِّنَ السَّمَآءِ فَقَدْ سَاَلُوْا مُوْسٰۤی اَكْبَرَ مِنْ ذٰلِكَ فَقَالُوْۤا اَرِنَا اللّٰهَ جَهْرَةً فَاَخَذَتْهُمُ الصّٰعِقَةُ بِظُلْمِهِمْ ۚ— ثُمَّ اتَّخَذُوا الْعِجْلَ مِنْ بَعْدِ مَا جَآءَتْهُمُ الْبَیِّنٰتُ فَعَفَوْنَا عَنْ ذٰلِكَ ۚ— وَاٰتَیْنَا مُوْسٰی سُلْطٰنًا مُّبِیْنًا ۟

ನೀವು (ಪೈಗಂಬರರೇ) ಅವರ ಬಳಿ ಯಾವುದಾದರೊಂದು ಗ್ರಂಥವನ್ನು ಆಕಾಶದಿಂದ ಇಳಿಸಿಕೊಡಬೇಕೆಂದು ಗ್ರಂಥದವರು ನಿಮ್ಮೊಂದಿಗೆ ಕೇಳುತ್ತಾರೆ. ಇದಕ್ಕಿಂತಲೂ ಘೋರವಾದುದನ್ನು ಅವರು ಮೂಸಾರೊಂದಿಗೆ ಕೇಳಿದ್ದರು: ಅಂದರೆ ನಮಗೆ ಅಲ್ಲಾಹನನ್ನು ಪ್ರತ್ಯಕ್ಷವಾಗಿ ತೋರಿಸಿಕೊಡಿರಿ. ಆಗ ಅವರ ಅಕ್ರಮದ ನಿಮಿತ್ತ ಅವರನ್ನು ಸಿಡಿಲು ಬಡಿದು ಬಿಟ್ಟಿತು. ನಂತರ ಸ್ಪಷ್ಟವಾದ ಪುರಾವೆಗಳು ಬಂದು ತಲುಪಿದ ಬಳಿಕವೂ ಅವರು ಕರುವನ್ನು ತಮ್ಮ ಆರಾಧ್ಯನÀನ್ನಾಗಿ ಮಾಡಿಕೊಂಡರು. ಆದರೆ ನಾವದನ್ನೂ ಕ್ಷಮಿಸಿಬಿಟ್ಟೆವು. ಪೈಗಂಬರ್ ಮೂಸಾರಿಗೆ ನಾವು ಸ್ಪಷ್ಟವಾದ ವಿಜಯವನ್ನು ನೀಡಿದೆವು. info
التفاسير:

external-link copy
154 : 4

وَرَفَعْنَا فَوْقَهُمُ الطُّوْرَ بِمِیْثَاقِهِمْ وَقُلْنَا لَهُمُ ادْخُلُوا الْبَابَ سُجَّدًا وَّقُلْنَا لَهُمْ لَا تَعْدُوْا فِی السَّبْتِ وَاَخَذْنَا مِنْهُمْ مِّیْثَاقًا غَلِیْظًا ۟

(ತೌರಾತಿನ ಆದೇಶಗಳನ್ನು ಯಹೂದಿಯರು ನಿರಾಕರಿಸಿದಾಗ) ಮತ್ತು ಅವರಿಂದ (ಬಲವಾದ) ಕರಾರು ಪಡೆÀಯುವುದಕ್ಕಾಗಿ ನಾವು ಅವರ ತಲೆಯ ಮೇಲೆ ತೂರ್ ಪರ್ವತವನ್ನು ಎತ್ತಿಹಿಡಿದೆವು. ಮತ್ತು ನಾವು ಅವರಿಗೆ ನೀವು ಸಾಷ್ಟಾಂಗ ಮಾಡುತ್ತಾ ದ್ವಾರವನ್ನು ಪ್ರವೇಶಿಸಿರಿ ಎಂದು ಹೇಳಿದೆವು ಹಾಗೂ ನೀವು ಸಬ್ತ್ (ಶನಿವಾರದ ಮೀನಿನ ಬೇಟೆಯ ನಿಷೇಧ) ದಿನದಂದು ಅತಿಕ್ರಮ ತೋರಬಾರದೆಂದು ನಾವು ಅವರಿಗೆ ಹೇಳಿದೆವು ಹಾಗೂ ಅವರಿಂದ ಭದ್ರವಾದ ಕರಾರನ್ನು ಪಡೆದುಕೊಂಡೆವು. info
التفاسير: