Salin ng mga Kahulugan ng Marangal na Qur'an - Salin sa Wikang Kannada ni Bashir Mysore

Numero ng Pahina:close

external-link copy
43 : 38

وَوَهَبْنَا لَهٗۤ اَهْلَهٗ وَمِثْلَهُمْ مَّعَهُمْ رَحْمَةً مِّنَّا وَذِكْرٰی لِاُولِی الْاَلْبَابِ ۟

ಮತ್ತು ನಾವು ನಮ್ಮ ಕಡೆಯ ವಿಶೇಷ ಕಾರುಣ್ಯದಿಂದ ಅವರಿಗೆ ಅವರÀ ಮನೆಯವರನ್ನು ಮತ್ತು ಅವರ ಜೊತೆಯಲ್ಲಿ ಅವರಷ್ಟೇ ಮಂದಿಯನ್ನೂ ನೀಡಿದೆವು. ಇದು ಬುದ್ಧಿಜೀವಿಗಳಿಗೆ ಉದ್ಭೋದೆಯಾಗಲೆಂದಾಗಿದೆ. info
التفاسير:

external-link copy
44 : 38

وَخُذْ بِیَدِكَ ضِغْثًا فَاضْرِبْ بِّهٖ وَلَا تَحْنَثْ ؕ— اِنَّا وَجَدْنٰهُ صَابِرًا ؕ— نِّعْمَ الْعَبْدُ ؕ— اِنَّهٗۤ اَوَّابٌ ۟

ಮತ್ತು ನೀವು ನಿಮ್ಮ ಕÉÊಯಲ್ಲಿ ಹುಲ್ಲು ಕಡ್ಡಿಗಳ ಪೊರಕೆಯೊಂದನ್ನು ತೆಗೆದುಕೊಂಡು ಅದರಿಂದ ಹೊಡೆಯಿರಿ ಹಾಗೂ ಪ್ರತಿಜ್ಞೆಯನ್ನು ಉಲ್ಲಂಘಿಸಬೇಡಿ. ನಿಜವಾಗಿಯು ನಾವು ಅಯ್ಯೂಬರನ್ನು ಸಹನಾಶೀಲರನ್ನಾಗಿ ಕಂಡೆವು. ಅವರು ಅತ್ಯುತ್ತಮ ದಾಸರು ಮತ್ತು ತಮ್ಮ ಪ್ರಭುವಿನೆಡೆಗೆ ಹೆಚ್ಚು ಮರಳುವವರಾಗಿದ್ದರು. info
التفاسير:

external-link copy
45 : 38

وَاذْكُرْ عِبٰدَنَاۤ اِبْرٰهِیْمَ وَاِسْحٰقَ وَیَعْقُوْبَ اُولِی الْاَیْدِیْ وَالْاَبْصَارِ ۟

ನೀವು ನಮ್ಮ ದಾಸರಾದ ಇಬ್ರಾಹೀಮ್, ಇಸ್‌ಹಾಕ್, ಯಅಕೂಬರನ್ನೂ ಸ್ಮರಿಸಿರಿ. ಅವರು ಕರ್ಮ ಶಕ್ತಿಯುಳ್ಳವರೂ, ದೂರದೃಷ್ಟಿ ಹೊಂದಿದವರೂ ಆಗಿದ್ದರು. info
التفاسير:

external-link copy
46 : 38

اِنَّاۤ اَخْلَصْنٰهُمْ بِخَالِصَةٍ ذِكْرَی الدَّارِ ۟ۚ

ನಾವು ಅವರನ್ನು ಒಂದು ವಿಶಿಷ್ಟ ಗುಣದಿಂದಾಗಿ ಉತ್ಕೃಷ್ಟಗೊಳಿಸಿದೆವು. ಅದು ಪರಲೋಕದ ಸ್ಮರಣೆಯಾಗಿತ್ತು. info
التفاسير:

external-link copy
47 : 38

وَاِنَّهُمْ عِنْدَنَا لَمِنَ الْمُصْطَفَیْنَ الْاَخْیَارِ ۟ؕ

ನಿಶ್ಚಯವಾಗಿಯೂ ಅವರು ನಮ್ಮ ಬಳಿ ಆಯ್ಕೆ ಮಾಡಲಾದ ಅತ್ಯುತ್ತಮ ಜನರಾಗಿದ್ದರು. info
التفاسير:

external-link copy
48 : 38

وَاذْكُرْ اِسْمٰعِیْلَ وَالْیَسَعَ وَذَا الْكِفْلِ ؕ— وَكُلٌّ مِّنَ الْاَخْیَارِ ۟ؕ

ಇಸ್ಮಾಯೀಲ್, ಯಸ್‌ಅ ಹಾಗೂ ದುಲ್‌ಕಿಫಲ್‌ರನ್ನು ಸ್ಮರಿಸಿರಿ. ಅವರಲ್ಲಿ ಪ್ರತಿಯೊಬ್ಬರೂ ಸತ್ಕರ್ಮಿಗಳಾಗಿದ್ದರು. info
التفاسير:

external-link copy
49 : 38

هٰذَا ذِكْرٌ ؕ— وَاِنَّ لِلْمُتَّقِیْنَ لَحُسْنَ مَاٰبٍ ۟ۙ

ಇದೊಂದು ಬೋಧನೆಯಾಗಿದೆ. ನಿಶ್ಚಯವಾಗಿಯೂ ಭಯಭಕ್ತಿಯುಳ್ಳವರಿಗೆ ಮರಳಲು ಅತ್ಯುತ್ತಮ ನೆಲೆಯಿದೆ. info
التفاسير:

external-link copy
50 : 38

جَنّٰتِ عَدْنٍ مُّفَتَّحَةً لَّهُمُ الْاَبْوَابُ ۟ۚ

(ಅಂದರೆ) ಶಾಶ್ವತವಾದ ಸ್ವರ್ಗೋದ್ಯಾನಗಳು: ಅವುಗಳ ದ್ವಾರಗಳನ್ನು ಅವರಿಗಾಗಿ ತೆರೆದಿಡಲಾಗಿದೆ. info
التفاسير:

external-link copy
51 : 38

مُتَّكِـِٕیْنَ فِیْهَا یَدْعُوْنَ فِیْهَا بِفَاكِهَةٍ كَثِیْرَةٍ وَّشَرَابٍ ۟

ಅವರು ದಿಂಬುಗಳಿಗೆ ಒರಗಿ ಕುಳಿತುಕೊಂಡು ವಿಧವಿಧದ ಹಣ್ಣುಹಂಪಲು ಹಾಗೂ ಪಾನೀಯಗಳನ್ನು ತರಿಸುತ್ತಿರುವರು. info
التفاسير:

external-link copy
52 : 38

وَعِنْدَهُمْ قٰصِرٰتُ الطَّرْفِ اَتْرَابٌ ۟

ಮತ್ತು ಅವರ ಬಳಿ ದೃಷ್ಟಿ ತಗ್ಗಿಸಿರುವ ಸಮವಯಸ್ಕರಾದ ಅಪ್ಸರೆಗಳಿರುವರು. info
التفاسير:

external-link copy
53 : 38

هٰذَا مَا تُوْعَدُوْنَ لِیَوْمِ الْحِسَابِ ۟

ಇವು ವಿಚಾರಣೆಯ ದಿನಕ್ಕಾಗಿ ನಿಮಗೆ ವಾಗ್ದಾನ ನೀಡಲಾಗುತ್ತಿರುವ ವಸ್ತುಗಳಾಗಿವೆ. info
التفاسير:

external-link copy
54 : 38

اِنَّ هٰذَا لَرِزْقُنَا مَا لَهٗ مِنْ نَّفَادٍ ۟ۚۖ

ಖಂಡಿತವಾಗಿಯೂ ಇದು ನಮ್ಮ( ಕಡೆಯ ವಿಶೇಷ) ಜೀವನಾಧಾರವಾಗಿದೆ. ಇದಕ್ಕೆ ಎಂದಿಗೂ ಅಂತ್ಯವಿಲ್ಲ. info
التفاسير:

external-link copy
55 : 38

هٰذَا ؕ— وَاِنَّ لِلطّٰغِیْنَ لَشَرَّ مَاٰبٍ ۟ۙ

ಇದಂತು (ಧರ್ಮನಿಷ್ಠರ) ಪ್ರತಿಫಲವಾಯಿತು. ನಿಶ್ಚಯವಾಗಿಯು ಅತಿಕ್ರಮಿಗಳಿಗೆ ಕೆಟ್ಟತಾಣವಿರುವುದು. info
التفاسير:

external-link copy
56 : 38

جَهَنَّمَ ۚ— یَصْلَوْنَهَا ۚ— فَبِئْسَ الْمِهَادُ ۟

ಅದು ನರಕವಾಗಿದೆ ಅವರು ಅದರಲ್ಲಿ ಪ್ರವೇಶಿಸುವರು ಮತ್ತು ಅದೆಷ್ಟು ನಿಕೃಷ್ಟ ನೆಲೆಯಾಗಿರುವುದು. info
التفاسير:

external-link copy
57 : 38

هٰذَا ۙ— فَلْیَذُوْقُوْهُ حَمِیْمٌ وَّغَسَّاقٌ ۟ۙ

( ಮಲಕ್‌ಗಳು ಹೇಳುವರು) ಇದು ಅತ್ಯುಷ್ಣ ಜಲ ಹಾಗೂ ಕೀವು ಆಗಿದೆ. ಆದ್ದರಿಂದ ಅವರು ಅದನ್ನು ಸವಿಯಲಿ. info
التفاسير:

external-link copy
58 : 38

وَّاٰخَرُ مِنْ شَكْلِهٖۤ اَزْوَاجٌ ۟ؕ

ಇದೇ ರೀತಿಯ ಇತರೇ ಶಿಕ್ಷೆಗಳಿರುವವು. info
التفاسير:

external-link copy
59 : 38

هٰذَا فَوْجٌ مُّقْتَحِمٌ مَّعَكُمْ ۚ— لَا مَرْحَبًا بِهِمْ ؕ— اِنَّهُمْ صَالُوا النَّارِ ۟

(ಮಲಕ್‌ಗಳು ಸತ್ಯನಿಷೇಧಿಗಳಿಗೆÀ ಹೇಳುವರು) ಇದು ನಿಮ್ಮೊಂದಿಗೆ ನರಕದಲ್ಲಿ ಪ್ರವೇಶಿಸಲಿರುವ ಒಂದು ತುಕ್ಕಡಿಯಾಗಿದೆ. (ಆಗ ನಾಯಕರು) ಅವರಿಗೆಯಾವ ಸ್ವಾಗತವೂ ಇಲ್ಲ. ಇವರು ನರಕಾಗ್ನಿಯನ್ನು ಪ್ರವೇಶಿಸುವವರಾಗಿರುವರು ಎಂದು ಹೇಳುವರು. info
التفاسير:

external-link copy
60 : 38

قَالُوْا بَلْ اَنْتُمْ ۫— لَا مَرْحَبًا بِكُمْ ؕ— اَنْتُمْ قَدَّمْتُمُوْهُ لَنَا ۚ— فَبِئْسَ الْقَرَارُ ۟

(ಆಗ ಅವರ ಅನುಯಾಯಿಗಳು) ಹೇಳುವರು: ಹಾಗಲ್ಲ! ನಿಮಗೂ ಯಾವ ಸ್ವಾಗತವಿಲ್ಲ. ನೀವೇ ಇದನ್ನು ಮೊದಲು ನಮ್ಮ ಮುಂದೆ ತಂದಿಟ್ಟಿರುವಿರಿ. ಹಾಗೆಯೇ ಅದೆಷ್ಟು ಕೆಟ್ಟ ವಾಸಸ್ಥಾನವಾಗಿದೆ. info
التفاسير:

external-link copy
61 : 38

قَالُوْا رَبَّنَا مَنْ قَدَّمَ لَنَا هٰذَا فَزِدْهُ عَذَابًا ضِعْفًا فِی النَّارِ ۟

ಅವರೆನ್ನುವರು: ನಮ್ಮ ಪ್ರಭು, ಯಾರು ನಮಗೆ ಈ ಶಿಕ್ಷಗೆ ಗುರಿಪಡಿಸಿದರೂ ಅವರಿಗೆ ನರಕಾಗ್ನಿಯ ಇಮ್ಮಡಿ ಯಾತನೆಯನ್ನು ನಿಶ್ಚಯಿಸಿಬಿಡು. info
التفاسير: