Salin ng mga Kahulugan ng Marangal na Qur'an - Salin sa Wikang Kannada ni Bashir Mysore

external-link copy
25 : 2

وَبَشِّرِ الَّذِیْنَ اٰمَنُوْا وَعَمِلُوا الصّٰلِحٰتِ اَنَّ لَهُمْ جَنّٰتٍ تَجْرِیْ مِنْ تَحْتِهَا الْاَنْهٰرُ ؕ— كُلَّمَا رُزِقُوْا مِنْهَا مِنْ ثَمَرَةٍ رِّزْقًا ۙ— قَالُوْا هٰذَا الَّذِیْ رُزِقْنَا مِنْ قَبْلُ وَاُتُوْا بِهٖ مُتَشَابِهًا ؕ— وَلَهُمْ فِیْهَاۤ اَزْوَاجٌ مُّطَهَّرَةٌ وَّهُمْ فِیْهَا خٰلِدُوْنَ ۟

ಓ ಪೈಗಂಬರರೇ ! ಸತ್ಯವಿಶ್ವಾಸವಿರಿಸಿ ಸತ್ಕರ್ಮಗಳನ್ನು ಕೈಗೊಂಡವರಿಗೆ ತಳಭಾಗದಲ್ಲಿ ನದಿಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಿವೆ ಎಂದು ಸುವಾರ್ತೆ ನೀಡಿರಿ. ಅವರಿಗೆ ಅವುಗಳಲ್ಲಿಂದ ಫಲಗಳನ್ನು ಆಹಾರವಾಗಿ ನೀಡಲಾದಾಗಲೆಲ್ಲಾ ಅವರು (ಅದರ ಬಾಹ್ಯ ರೂಪವನ್ನು ನೋಡಿ) ಇದು ಮೊದಲು ನಮಗೆ ನೀಡಲಾದಂತಹದ್ದೇ ಆಗಿದೆ ಎನ್ನುವರು. ಮತ್ತು ಅವರಿಗೆ ಪರಸ್ಪರ ಸಾದೃಷ್ಯವಿರುವಂತಹ ಫಲಗಳನ್ನು ನೀಡಲಾಗುವುದು ಮತ್ತು ಅವರಿಗೆ ಅದರಲ್ಲಿ ಪರಿಶುದ್ಧರಾದ ಪತ್ನಿಯರಿರುವರು ಹಾಗೂ ಅವರು ಅದರಲ್ಲಿ (ಆ ಸ್ವರ್ಗದಲ್ಲಿ) ಶಾಶ್ವತವಾಗಿರುವರು. info
التفاسير: