పవిత్ర ఖురాన్ యొక్క భావార్థాల అనువాదం - కన్నడ అనువాదం - హమ్జా బత్తూర్

పేజీ నెంబరు:close

external-link copy
25 : 30

وَمِنْ اٰیٰتِهٖۤ اَنْ تَقُوْمَ السَّمَآءُ وَالْاَرْضُ بِاَمْرِهٖ ؕ— ثُمَّ اِذَا دَعَاكُمْ دَعْوَةً ۖۗ— مِّنَ الْاَرْضِ اِذَاۤ اَنْتُمْ تَخْرُجُوْنَ ۟

ಭೂಮ್ಯಾಕಾಶವು ಅವನ ಆಜ್ಞೆಯಂತೆ ಅಸ್ತಿತ್ವದಲ್ಲಿರುವುದು ಅವನ ದೃಷ್ಟಾಂತಗಳಲ್ಲಿ ಒಂದಾಗಿದೆ. ನಂತರ ಅವನು ಭೂಮಿಯಿಂದ ನಿಮ್ಮನ್ನು ಒಮ್ಮೆ ಕರೆದು ಬಿಟ್ಟರೆ, ಅಗೋ! ನೀವು ಹೊರಟು ಬರುತ್ತೀರಿ. info
التفاسير:

external-link copy
26 : 30

وَلَهٗ مَنْ فِی السَّمٰوٰتِ وَالْاَرْضِ ؕ— كُلٌّ لَّهٗ قٰنِتُوْنَ ۟

ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಅವನ ನಿಯಂತ್ರಣದಲ್ಲಿದ್ದಾರೆ. ಎಲ್ಲರೂ ಅವನ ಆಜ್ಞೆಗೆ ವಿಧೇಯರಾಗಿದ್ದಾರೆ. info
التفاسير:

external-link copy
27 : 30

وَهُوَ الَّذِیْ یَبْدَؤُا الْخَلْقَ ثُمَّ یُعِیْدُهٗ وَهُوَ اَهْوَنُ عَلَیْهِ ؕ— وَلَهُ الْمَثَلُ الْاَعْلٰى فِی السَّمٰوٰتِ وَالْاَرْضِ ۚ— وَهُوَ الْعَزِیْزُ الْحَكِیْمُ ۟۠

ಅವನೇ ಪ್ರಥಮ ಬಾರಿಗೆ ಸೃಷ್ಟಿಸುವವನು ಮತ್ತು ನಂತರ ಅದನ್ನು ಪುನರಾವರ್ತಿಸುವವನು. ಅದು ಅವನಿಗೆ ಅತ್ಯಂತ ಸುಲಭವಾಗಿದೆ. ಅವನಿಗೆ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಉನ್ನತ ಗುಣಲಕ್ಷಣಗಳಿವೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
28 : 30

ضَرَبَ لَكُمْ مَّثَلًا مِّنْ اَنْفُسِكُمْ ؕ— هَلْ لَّكُمْ مِّنْ مَّا مَلَكَتْ اَیْمَانُكُمْ مِّنْ شُرَكَآءَ فِیْ مَا رَزَقْنٰكُمْ فَاَنْتُمْ فِیْهِ سَوَآءٌ تَخَافُوْنَهُمْ كَخِیْفَتِكُمْ اَنْفُسَكُمْ ؕ— كَذٰلِكَ نُفَصِّلُ الْاٰیٰتِ لِقَوْمٍ یَّعْقِلُوْنَ ۟

ಅಲ್ಲಾಹು ನಿಮಗೆ ನಿಮ್ಮಿಂದಲೇ ಒಂದು ಉದಾಹರಣೆಯನ್ನು ನೀಡುತ್ತಾನೆ. ನಾವು ನಿಮಗೆ ನೀಡಿದ ಸವಲತ್ತುಗಳಲ್ಲಿ ನಿಮ್ಮ ಗುಲಾಮರು ಯಾರಾದರೂ ನಿಮ್ಮ ಪಾಲುದಾರರಾಗಿದ್ದಾರೆಯೇ? ಅಂದರೆ, ನಿಮಗೆ ಮತ್ತು ಅವರಿಗೆ ಸಮಾನ ಸ್ಥಾನಮಾನವಿರುವ ರೀತಿಯಲ್ಲಿ? ನೀವು ಸ್ವತಃ ನಿಮ್ಮ ಬಗ್ಗೆ ಭಯಪಡುವಂತೆ ಅವರ ಬಗ್ಗೆಯೂ ಭಯಪಡುವ ರೀತಿಯಲ್ಲಿ? ಅರ್ಥಮಾಡಿಕೊಳ್ಳುವ ಜನರಿಗೆ ನಾವು ಈ ರೀತಿ ವಚನಗಳನ್ನು ವಿವರಿಸಿಕೊಡುತ್ತೇವೆ. info
التفاسير:

external-link copy
29 : 30

بَلِ اتَّبَعَ الَّذِیْنَ ظَلَمُوْۤا اَهْوَآءَهُمْ بِغَیْرِ عِلْمٍ ۚ— فَمَنْ یَّهْدِیْ مَنْ اَضَلَّ اللّٰهُ ؕ— وَمَا لَهُمْ مِّنْ نّٰصِرِیْنَ ۟

ಆದರೆ ಅಕ್ರಮವೆಸಗಿದವರು ಯಾವುದೇ ಜ್ಞಾನವಿಲ್ಲದೆ ಅವರ ಸ್ವೇಚ್ಛೆಗಳನ್ನು ಹಿಂಬಾಲಿಸಿದರು. ಅಲ್ಲಾಹು ದಾರಿತಪ್ಪಿಸಿದವರಿಗೆ ಸನ್ಮಾರ್ಗ ತೋರಿಸಲು ಯಾರಿಗೂ ಸಾಧ್ಯವಿಲ್ಲ. ಅವರಿಗೆ ಯಾವುದೇ ಸಹಾಯಕರೂ ಇರುವುದಿಲ್ಲ. info
التفاسير:

external-link copy
30 : 30

فَاَقِمْ وَجْهَكَ لِلدِّیْنِ حَنِیْفًا ؕ— فِطْرَتَ اللّٰهِ الَّتِیْ فَطَرَ النَّاسَ عَلَیْهَا ؕ— لَا تَبْدِیْلَ لِخَلْقِ اللّٰهِ ؕ— ذٰلِكَ الدِّیْنُ الْقَیِّمُ ۙۗ— وَلٰكِنَّ اَكْثَرَ النَّاسِ لَا یَعْلَمُوْنَ ۟ۗۙ

ಆದ್ದರಿಂದ ನೀವು ಏಕನಿಷ್ಠರಾಗಿ ನಿಮ್ಮ ಮುಖವನ್ನು ಧರ್ಮದ ಕಡೆಗೆ ತಿರುಗಿಸಿರಿ. ಅದು ಅಲ್ಲಾಹು ಮನುಷ್ಯರನ್ನು ಸೃಷ್ಟಿಸಿದ ಸಹಜ ಮನೋಧರ್ಮವಾಗಿದೆ. ಅಲ್ಲಾಹನ ಸೃಷ್ಟಿ ನಿಯಮಕ್ಕೆ ಯಾವುದೇ ಬದಲಾವಣೆಯಿಲ್ಲ. ಅದೇ ನೇರವಾದ ಧರ್ಮ. ಆದರೆ ಮನುಷ್ಯರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ. info
التفاسير:

external-link copy
31 : 30

مُنِیْبِیْنَ اِلَیْهِ وَاتَّقُوْهُ وَاَقِیْمُوا الصَّلٰوةَ وَلَا تَكُوْنُوْا مِنَ الْمُشْرِكِیْنَ ۟ۙ

ಅಲ್ಲಾಹನ ಕಡೆಗೆ ತಿರುಗಿ ಅವನನ್ನು ಭಯಪಡಿರಿ ಮತ್ತು ನಮಾಝ್ ಸಂಸ್ಥಾಪಿಸಿರಿ. ಬಹುದೇವಾರಾಧಕರಲ್ಲಿ ಸೇರಬೇಡಿ. info
التفاسير:

external-link copy
32 : 30

مِنَ الَّذِیْنَ فَرَّقُوْا دِیْنَهُمْ وَكَانُوْا شِیَعًا ؕ— كُلُّ حِزْبٍ بِمَا لَدَیْهِمْ فَرِحُوْنَ ۟

ಅಂದರೆ, ತಮ್ಮ ಧರ್ಮವನ್ನು ಒಡೆದು ಹಲವಾರು ಪಂಗಡಗಳಾಗಿ ಬಿಟ್ಟವರು. ಪ್ರತಿಯೊಂದು ಪಂಗಡವೂ ಅದರ ಕೈಯಲ್ಲಿ ಏನಿದೆಯೋ ಅದರಲ್ಲಿ ಸಂಭ್ರಮಿಸುತ್ತಿದೆ. info
التفاسير: