పవిత్ర ఖురాన్ యొక్క భావార్థాల అనువాదం - కన్నడ అనువాదం - బషీర్ మైసూరి

పేజీ నెంబరు:close

external-link copy
44 : 7

وَنَادٰۤی اَصْحٰبُ الْجَنَّةِ اَصْحٰبَ النَّارِ اَنْ قَدْ وَجَدْنَا مَا وَعَدَنَا رَبُّنَا حَقًّا فَهَلْ وَجَدْتُّمْ مَّا وَعَدَ رَبُّكُمْ حَقًّا ؕ— قَالُوْا نَعَمْ ۚ— فَاَذَّنَ مُؤَذِّنٌ بَیْنَهُمْ اَنْ لَّعْنَةُ اللّٰهِ عَلَی الظّٰلِمِیْنَ ۟ۙ

ಮತ್ತು ಸ್ವರ್ಗವಾಸಿಗಳು ನರಕವಾಸಿಗಳನ್ನು ಕೂಗಿ ಹೇಳುವರು: ನಮ್ಮ ಪ್ರಭು ನಮ್ಮೊಂದಿಗೆ ಮಾಡಿದ ವಾಗ್ದಾನವು ಸತ್ಯಕ್ಕನುಗುಣವಾಗಿದೆಯೆಂದು ನಾವು ಕಂಡೆವು. ನಿಮ್ಮ ಪ್ರಭು ನಿಮ್ಮೊಂದಿಗೆ ಮಾಡಿದ ವಾಗ್ದಾನವು ಸತ್ಯಕ್ಕನುಗುಣವಾಗಿದೆಯೆಂದು ನೀವು ಕಂಡಿರಾ? ಅವರು ಹೇಳುವರು: 'ಹೌದು'. ಅನಂತರ ಒಬ್ಬ ಕರೆ ನಿಡುವಾತನು ಅವರ ನಡುವೆ ಘೋಷಿಸುವನು: ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿರಲಿ. info
التفاسير:

external-link copy
45 : 7

الَّذِیْنَ یَصُدُّوْنَ عَنْ سَبِیْلِ اللّٰهِ وَیَبْغُوْنَهَا عِوَجًا ۚ— وَهُمْ بِالْاٰخِرَةِ كٰفِرُوْنَ ۟ۘ

ಇವರೇ ಅಲ್ಲಾಹನ ಮಾರ್ಗದಿಂದ ಜನರನ್ನು ತಡೆಯುವವರು ಮತ್ತು ವಕ್ರತೆಯನ್ನು ಅರಸುವವರು ಹಾಗು ಪರಲೋಕವನ್ನು ನಿಷೇಧಿಸುವವರಾಗಿದ್ದರು. info
التفاسير:

external-link copy
46 : 7

وَبَیْنَهُمَا حِجَابٌ ۚ— وَعَلَی الْاَعْرَافِ رِجَالٌ یَّعْرِفُوْنَ كُلًّا بِسِیْمٰىهُمْ ۚ— وَنَادَوْا اَصْحٰبَ الْجَنَّةِ اَنْ سَلٰمٌ عَلَیْكُمْ ۫— لَمْ یَدْخُلُوْهَا وَهُمْ یَطْمَعُوْنَ ۟

ಆ ಎರಡು ಪಂಗಡಗಳ ನಡುವೆ ಒಂದು ತಡೆಯಿದೆ ಮತ್ತು ಎತ್ತರದ ಸ್ಥಳದಲ್ಲಿ ಕೆಲವು ಜನರಿರುವರು. ಅವರು ಪ್ರತಿಯೊಬ್ಬರನ್ನು ಅವರ ಲಕ್ಷಣದ ಮೂಲಕ ಗುರುತಿಸುವರು ಮತ್ತು ಅವರು ಸ್ವರ್ಗವಾಸಿಗಳನ್ನು ಕರೆದು ಹೇಳುವರು: ನಿಮ್ಮ ಮೇಲೆ ಶಾಂತಿಯಿರಲಿ, ಅವರು (ಎತ್ತರದ ಸ್ಥಳದವರು) ಇನ್ನೂ ಸ್ವರ್ಗವನ್ನು ಪ್ರವೇಶಿಸಿರುವುದಿಲ್ಲ. ಆದರೆ ಅದರ ನಿರೀಕ್ಷೆಯಲ್ಲಿರುವರು. info
التفاسير:

external-link copy
47 : 7

وَاِذَا صُرِفَتْ اَبْصَارُهُمْ تِلْقَآءَ اَصْحٰبِ النَّارِ ۙ— قَالُوْا رَبَّنَا لَا تَجْعَلْنَا مَعَ الْقَوْمِ الظّٰلِمِیْنَ ۟۠

ಮತ್ತು ಅವರ ದೃಷ್ಟಿಗಳನ್ನು ನರಕವಾಸಿಗಳೆಡೆಗೆ ತಿರುಗಿಸಲಾದಾಗ ಅವರು ಹೇಳುವರು: ನಮ್ಮ ಪ್ರಭು, ನಮ್ಮನ್ನು ಅಕ್ರಮಿಗಳೊಂದಿಗೆ ಸೇರಿಸದಿರು. info
التفاسير:

external-link copy
48 : 7

وَنَادٰۤی اَصْحٰبُ الْاَعْرَافِ رِجَالًا یَّعْرِفُوْنَهُمْ بِسِیْمٰىهُمْ قَالُوْا مَاۤ اَغْنٰی عَنْكُمْ جَمْعُكُمْ وَمَا كُنْتُمْ تَسْتَكْبِرُوْنَ ۟

ಎತ್ತರದ ಸ್ಥಳದವರು ಲಕ್ಷಣದ ಮೂಲಕ ಗುರುತಿಸಬಹುದಾದ ನರಕವಾಸಿಗಳನ್ನು ಕರೆದು ಹೇಳುವರು: ನಿಮ್ಮ ಜನಬಲ ಹಾಗೂ ಪ್ರತಿಷ್ಠೆಯು ನಿಮ್ಮ ಯಾವ ಪ್ರಯೋಜನಕ್ಕೂ ಬರಲಿಲ್ಲ. info
التفاسير:

external-link copy
49 : 7

اَهٰۤؤُلَآءِ الَّذِیْنَ اَقْسَمْتُمْ لَا یَنَالُهُمُ اللّٰهُ بِرَحْمَةٍ ؕ— اُدْخُلُوا الْجَنَّةَ لَا خَوْفٌ عَلَیْكُمْ وَلَاۤ اَنْتُمْ تَحْزَنُوْنَ ۟

ಅಲ್ಲಾಹನು ಅವರ ಮೆಲೆ ಕರುಣೆ ತೋರಲಾರನು ಎಂದು ನೀವು ಆಣೆಯಿಟ್ಟು ಹೇಳುತ್ತಿದ್ದುದ್ದು ಈ ಜನರ ಕುರಿತಾಗಿತ್ತೇ? ನಂತರ ಅವರ ಪ್ರಭು ಅವರಿಗೆ ಹೇಳುವನು: ನೀವು ಸ್ವರ್ಗವನ್ನು ಪ್ರವೇಶಿಸಿರಿ. ನಿಮ್ಮ ಮೇಲೆ ಯಾವುದೇ ಭವಿಷ್ಯದ ಭಯವಿಲ್ಲ ಮತ್ತು ಗತಿಸಿ ಹೋಗಿರುವುದರ ವ್ಯಥೆಯಿಲ್ಲ. info
التفاسير:

external-link copy
50 : 7

وَنَادٰۤی اَصْحٰبُ النَّارِ اَصْحٰبَ الْجَنَّةِ اَنْ اَفِیْضُوْا عَلَیْنَا مِنَ الْمَآءِ اَوْ مِمَّا رَزَقَكُمُ اللّٰهُ ؕ— قَالُوْۤا اِنَّ اللّٰهَ حَرَّمَهُمَا عَلَی الْكٰفِرِیْنَ ۟ۙ

ಮತ್ತು ನರಕವಾಸಿಗಳು ಸ್ವರ್ಗವಾಸಿಗಳನ್ನು ಕರೆದು ಹೇಳುವರು: ನಮಗೆ ಸ್ವಲ್ಪ ನೀರನ್ನಾದರೂ ಕೊಡಿರಿ ಅಥವಾ ಅಲ್ಲಾಹನು ನಿಮಗೆ ದಯಪಾಲಿಸಿದವುಗಳಿಂದ ಏನನ್ನಾದರು ಕೊಡಿರಿ. ಅವರು ಹೇಳುವರು: ಅಲ್ಲಾಹನು ಅವೆರಡನ್ನು ಸತ್ಯನಿಷೇಧಿಗಳ ಮೇಲೆ ನಿಷಿದ್ಧಗೊಳಿಸಿದ್ದಾನೆ. info
التفاسير:

external-link copy
51 : 7

الَّذِیْنَ اتَّخَذُوْا دِیْنَهُمْ لَهْوًا وَّلَعِبًا وَّغَرَّتْهُمُ الْحَیٰوةُ الدُّنْیَا ۚ— فَالْیَوْمَ نَنْسٰىهُمْ كَمَا نَسُوْا لِقَآءَ یَوْمِهِمْ هٰذَا ۙ— وَمَا كَانُوْا بِاٰیٰتِنَا یَجْحَدُوْنَ ۟

ಅವರು ಇಹಲೋಕದಲ್ಲಿ ತಮ್ಮ ಧರ್ಮವನ್ನು ವಿನೋದವನ್ನಾಗಿಯು, ಮೋಜನ್ನಾಗಿಯು ಮಾಡಿದರು ಹಾಗೂ ಐಹಿಕ ಜೀವನಕ್ಕೆ ಮರಳಾದವರಾಗಿದ್ದಾರೆ. ಇಂದಿನ ದಿನವನ್ನು ಅವರು ಮರೆತು ಬಿಟ್ಟಿದ್ದ ಹಾಗೆ ನಾವು ಈ ದಿನ ಅವರನ್ನು ಮರೆತು ಬಿಡುವೆವು. ಏಕೆಂದರೆ ಅವರು ನಮ್ಮ ದೃಷ್ಟಾಂತಗಳನ್ನು ನಿರಾಕರಿಸುತ್ತಿದ್ದರು. info
التفاسير: