పవిత్ర ఖురాన్ యొక్క భావార్థాల అనువాదం - కన్నడ అనువాదం - బషీర్ మైసూరి

external-link copy
23 : 4

حُرِّمَتْ عَلَیْكُمْ اُمَّهٰتُكُمْ وَبَنٰتُكُمْ وَاَخَوٰتُكُمْ وَعَمّٰتُكُمْ وَخٰلٰتُكُمْ وَبَنٰتُ الْاَخِ وَبَنٰتُ الْاُخْتِ وَاُمَّهٰتُكُمُ الّٰتِیْۤ اَرْضَعْنَكُمْ وَاَخَوٰتُكُمْ مِّنَ الرَّضَاعَةِ وَاُمَّهٰتُ نِسَآىِٕكُمْ وَرَبَآىِٕبُكُمُ الّٰتِیْ فِیْ حُجُوْرِكُمْ مِّنْ نِّسَآىِٕكُمُ الّٰتِیْ دَخَلْتُمْ بِهِنَّ ؗ— فَاِنْ لَّمْ تَكُوْنُوْا دَخَلْتُمْ بِهِنَّ فَلَا جُنَاحَ عَلَیْكُمْ ؗ— وَحَلَآىِٕلُ اَبْنَآىِٕكُمُ الَّذِیْنَ مِنْ اَصْلَابِكُمْ ۙ— وَاَنْ تَجْمَعُوْا بَیْنَ الْاُخْتَیْنِ اِلَّا مَا قَدْ سَلَفَ ؕ— اِنَّ اللّٰهَ كَانَ غَفُوْرًا رَّحِیْمًا ۟ۙ

ನಿಮ್ಮ ಮೇಲೆ ನಿಷಿದ್ಧ ಮಾಡಲಾದವರು ನಿಮ್ಮ ತಾಯಂದಿರು, ನಿಮ್ಮ ಪುತ್ರಿಯರು, ನಿಮ್ಮ ಸಹೋದರಿಯರು, ನಿಮ್ಮ ಸೋದರತ್ತೆಯರು ನಿಮ್ಮ ಮಾತೃ ಸಹೋದರಿಯರು, (ಚಿಕ್ಕಮ್ಮ, ದೊಡ್ಡಮ್ಮ) ನಿಮ್ಮ ಸಹೋದರ ಪುತ್ರಿಯರು, ನಿಮ್ಮ ಸಹೋದರಿ ಪುತ್ರಿಯರು, ನಿಮಗೆ ಮೊಲೆಹಾಲುಣಿಸಿದ ನಿಮ್ಮ ಸಾಕುತಾಯಂದಿರು, ಮೊಲೆ ಹಾಲಿನಲ್ಲಿ ಪಾಲುಗೊಂಡಿರುವ ನಿಮ್ಮ ಸಹೋದರಿಯರು, ನಿಮ್ಮ ಪತ್ನಿಯರ ತಾಯಂದಿರು, ನೀವು ಸಂಭೋಗ ಮಾಡಿರುವ ಪತ್ನಿಯರಿಂದಿರುವ ನಿಮ್ಮ ಮಲಪುತ್ರಿಯರು ನಿಮ್ಮ ಮೇಲೆ ನಿಷಿದ್ಧಗೊಳಿಸಲಾಗಿದೆ. ಇನ್ನು ನೀವು ಅವರೊಂದಿಗೆ ಲೈಂಗಿಕ ಸಂಪರ್ಕ ಮಾಡಿರದಿದ್ದರೆ ನಿಮ್ಮ ಮೇಲೆ ಯಾವುದೇ ದೋಷವಿಲ್ಲ. ನಿಮ್ಮ ಸ್ವಂತ ಪುತ್ರರ ಪತ್ನಿಯರು ಮತ್ತು ಇಬ್ಬರು ಸಹೋದರಿಯರನ್ನು ಏಕಕಾಲಕ್ಕೆ ವಿವಾಹವಾಗುವುದನ್ನು ನಿಷಿದ್ಧಗೊಳಿಸಲಾಗಿದೆ. ಆದರೆ ಹಿಂದೆ ಕಳೆದದ್ದು ಕಳೆದುಹೋಯಿತು. ನಿಶ್ಚಯವಾಗಿಯು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರಣಾನಿಧಿಯೂ ಆಗಿದ್ದಾನೆ. info
التفاسير: