పవిత్ర ఖురాన్ యొక్క భావార్థాల అనువాదం - కన్నడ అనువాదం - బషీర్ మైసూరి

పేజీ నెంబరు:close

external-link copy
89 : 11

وَیٰقَوْمِ لَا یَجْرِمَنَّكُمْ شِقَاقِیْۤ اَنْ یُّصِیْبَكُمْ مِّثْلُ مَاۤ اَصَابَ قَوْمَ نُوْحٍ اَوْ قَوْمَ هُوْدٍ اَوْ قَوْمَ صٰلِحٍ ؕ— وَمَا قَوْمُ لُوْطٍ مِّنْكُمْ بِبَعِیْدٍ ۟

ಮತ್ತು ಓ ನನ್ನ ಜನಾಂಗದವರೇ ನನ್ನೊಂದಿಗೆ ಇರುವ ನಿಮ್ಮ ವಿರೋಧವೂ ನೂಹ್‌ರ ಜನಾಂಗ, ಹೂದರ ಜನಾಂಗ, ಮತ್ತು ಸ್ವಾಲಿಹರ ಜನಾಂಗಕ್ಕೆ ಎರಗಿದಂತಹ ಶಿಕ್ಷೆಗಳು ನಿಮ್ಮ ಮೇಲೂ ಎರಗುವಂತಾಗಲು ಕಾರಣವಾಗದಿರಲಿ. ಹಾಗು ಲೂತರ ಜನಾಂಗವು ನಿಮ್ಮಿಂದ ಬಹಳ ದೂರವಿಲ್ಲ. info
التفاسير:

external-link copy
90 : 11

وَاسْتَغْفِرُوْا رَبَّكُمْ ثُمَّ تُوْبُوْۤا اِلَیْهِ ؕ— اِنَّ رَبِّیْ رَحِیْمٌ وَّدُوْدٌ ۟

ನೀವು ನಿಮ್ಮ ಪ್ರಭುವಿನಲ್ಲಿ ಕ್ಷಮೆಯಾಚಿಸಿರಿ ಮತ್ತು ಅವನೆಡೆಗೆ ಪಶ್ಚಾತ್ತಾಪ ಪಟ್ಟು ಮರಳಿರಿ, ನಿಶ್ಚಯವಾಗಿಯೂ ನನ್ನ ಪ್ರಭುವು ಕರುಣಾನಿಧಿಯೂ, ಅತ್ಯಂತ ಒಲುಮೆಯವನೂ ಆಗಿದ್ದಾನೆ. info
التفاسير:

external-link copy
91 : 11

قَالُوْا یٰشُعَیْبُ مَا نَفْقَهُ كَثِیْرًا مِّمَّا تَقُوْلُ وَاِنَّا لَنَرٰىكَ فِیْنَا ضَعِیْفًا ۚ— وَلَوْلَا رَهْطُكَ لَرَجَمْنٰكَ ؗ— وَمَاۤ اَنْتَ عَلَیْنَا بِعَزِیْزٍ ۟

ಅವರು ಹೇಳಿದರು; ಶುಐಬ್ ನಿನ್ನ ಹೆಚ್ಚಿನ ಮಾತುಗಳು ನಮಗೆ ಅರ್ಥವೇ ಆಗುವುದಿಲ್ಲ. ಮತ್ತು ನಾವು ನಿಮ್ಮನ್ನು ನಮ್ಮ ಪೈಕಿ ದುರ್ಬಲನಾಗಿ ಕಾಣುತ್ತಿದ್ದೇವೆ, ನಿನ್ನ ವಂಶದವರ ಕಾಳಜಿ ಇಲ್ಲದಿರುತ್ತಿದ್ದರೆ ನಾವು ನಿನ್ನನ್ನು ಕಲ್ಲೆಸೆದು ಕೊಲ್ಲುತ್ತಿದ್ದೆವು ಮತ್ತು ನೀನು ನಮಗಿಂತ ಮಾನ್ಯನೇನೂ ಅಲ್ಲ. info
التفاسير:

external-link copy
92 : 11

قَالَ یٰقَوْمِ اَرَهْطِیْۤ اَعَزُّ عَلَیْكُمْ مِّنَ اللّٰهِ ؕ— وَاتَّخَذْتُمُوْهُ وَرَآءَكُمْ ظِهْرِیًّا ؕ— اِنَّ رَبِّیْ بِمَا تَعْمَلُوْنَ مُحِیْطٌ ۟

ಶುಐಬರು ಉತ್ತರಿಸಿದರು ಓ ನನ್ನ ಜನಾಂಗದವರೇ ನನ್ನ ವಂಶದವರು ನಿಮಗೆ ಅಲ್ಲಾಹನಿಗಿಂತಲೂ ಹೆಚ್ಚು ಗೌರವಾರ್ಹರಾಗಿದ್ದಾರೆಯೇ? ನೀವು ಅಲ್ಲಾಹನನ್ನು ಹಿಂದೆ ತಳ್ಳಿಬಿಟ್ಟಿರಿ, ನಿಜವಾಗಿಯೂ ನನ್ನ ಪ್ರಭು ನೀವು ಮಾಡುತ್ತಿರುವುದನ್ನು ಆವರಿಸಿದ್ದಾನೆ. info
التفاسير:

external-link copy
93 : 11

وَیٰقَوْمِ اعْمَلُوْا عَلٰی مَكَانَتِكُمْ اِنِّیْ عَامِلٌ ؕ— سَوْفَ تَعْلَمُوْنَ ۙ— مَنْ یَّاْتِیْهِ عَذَابٌ یُّخْزِیْهِ وَمَنْ هُوَ كَاذِبٌ ؕ— وَارْتَقِبُوْۤا اِنِّیْ مَعَكُمْ رَقِیْبٌ ۟

ಮತ್ತು ನನ್ನ ಜನಾಂಗದವರೇ, ನಿಮ್ಮ ಕ್ರಮದಂತೆ ಕಾರ್ಯವೆಸಗಿರಿ, ನಾನು ಸಹ ಕಾರ್ಯವೆಸಗುತ್ತಿದೇನೆ, ಯಾರಿಗೆ ಅಪಮಾನಕರ ಯಾತನೆಯು ಬರಲಿದೆಯೆಂದು ಮತ್ತು ಸುಳ್ಳನಾರೆಂದು ಶೀಘ್ರವೇ ನಿಮಗೆ ಗೊತ್ತಾಗಲಿದೆ. ನೀವು ನಿರೀಕ್ಷಿಸಿರಿ. ನಾನು ಸಹ ನಿಮ್ಮ ಜೊತೆ ನಿರೀಕ್ಷಿಸುವವನಾಗಿದ್ದೇನೆ. info
التفاسير:

external-link copy
94 : 11

وَلَمَّا جَآءَ اَمْرُنَا نَجَّیْنَا شُعَیْبًا وَّالَّذِیْنَ اٰمَنُوْا مَعَهٗ بِرَحْمَةٍ مِّنَّا وَاَخَذَتِ الَّذِیْنَ ظَلَمُوا الصَّیْحَةُ فَاَصْبَحُوْا فِیْ دِیَارِهِمْ جٰثِمِیْنَ ۟ۙ

ಕೊನೆಗೆ ನಮ್ಮ ಆಜ್ಞೆಯು ಬಂದಾಗ ನಾವು ಶುಐಬರನ್ನೂ ಅವರೊಂದಿಗೆ ಸತ್ಯ ವಿಶ್ವಾಸವಿರಿಸಿದವರನ್ನೂ ನಮ್ಮ ಕೃಪೆಯಿಂದ ರಕ್ಷಿಸಿದೆವು ಮತ್ತು ಅಕ್ರಮವೆಸಗಿದವರಿಗೆ ಘೋರ ಆರ್ಭಟವೊಂದು ಹಿಡಿದುಬಿಟ್ಟಿತು ಮತ್ತು ಬೆಳಗಾದಾಗ ಅವರು ತಮ್ಮ ಮನೆಗಳಲ್ಲಿ ಅಧೋಮುಖಿಗಳಾಗಿ ಬಿದ್ದಿದ್ದರು. info
التفاسير:

external-link copy
95 : 11

كَاَنْ لَّمْ یَغْنَوْا فِیْهَا ؕ— اَلَا بُعْدًا لِّمَدْیَنَ كَمَا بَعِدَتْ ثَمُوْدُ ۟۠

ಅವರು ಆ ಮನೆಗಳಲ್ಲಿ ವಾಸಿಸಿಯೇ ಇಲ್ಲವೆಂಬAತೆ(ಅಳಿದು ಹೋದರು) ತಿಳಿದುಕೊಳ್ಳಿರಿ! ಸಮೂದ್ ಶಪಿಸಲ್ಪಪಟ್ಟಂತೆ ಮದ್‌ಯನ್ನರೂ ಶಪಿಸಲ್ಪಟ್ಟರು. info
التفاسير:

external-link copy
96 : 11

وَلَقَدْ اَرْسَلْنَا مُوْسٰی بِاٰیٰتِنَا وَسُلْطٰنٍ مُّبِیْنٍ ۟ۙ

ನಿಶ್ಚಯವಾಗಿಯೂ ನಾವು ಮೂಸಾರನ್ನು ನಮ್ಮ ದೃಷ್ಟಾಂತಗಳೊAದಿಗೆ ಮತ್ತು ಸುವ್ಯಕ್ತ ಪುರಾವೆಯೊಂದಿಗೆ ಫಿರ್‌ಔನ್ ಮತ್ತು ಅವರ ಮುಖಂಡರೆಡೆಗೆ ಕಳುಹಿಸಿದ್ದೆವು, info
التفاسير:

external-link copy
97 : 11

اِلٰی فِرْعَوْنَ وَمَلَاۡىِٕهٖ فَاتَّبَعُوْۤا اَمْرَ فِرْعَوْنَ ۚ— وَمَاۤ اَمْرُ فِرْعَوْنَ بِرَشِیْدٍ ۟

ಆದರೆ ಅವರು ಫಿರ್‌ಔನನ ಆದೇಶವನ್ನು ಅನುಸರಿಸಿದರು ಮತ್ತು ಫಿರ್‌ಔನನ ಆದೇಶವು ಋಜುವಾಗಿರಲಿಲ್ಲ. info
التفاسير: