அல்குர்ஆன் மொழிபெயர்ப்பு - கன்னட மொழிபெயர்ப்பு - ஹம்ஸா பத்தூர்

பக்க எண்:close

external-link copy
160 : 7

وَقَطَّعْنٰهُمُ اثْنَتَیْ عَشْرَةَ اَسْبَاطًا اُمَمًا ؕ— وَاَوْحَیْنَاۤ اِلٰی مُوْسٰۤی اِذِ اسْتَسْقٰىهُ قَوْمُهٗۤ اَنِ اضْرِبْ بِّعَصَاكَ الْحَجَرَ ۚ— فَانْۢبَجَسَتْ مِنْهُ اثْنَتَا عَشْرَةَ عَیْنًا ؕ— قَدْ عَلِمَ كُلُّ اُنَاسٍ مَّشْرَبَهُمْ ؕ— وَظَلَّلْنَا عَلَیْهِمُ الْغَمَامَ وَاَنْزَلْنَا عَلَیْهِمُ الْمَنَّ وَالسَّلْوٰی ؕ— كُلُوْا مِنْ طَیِّبٰتِ مَا رَزَقْنٰكُمْ ؕ— وَمَا ظَلَمُوْنَا وَلٰكِنْ كَانُوْۤا اَنْفُسَهُمْ یَظْلِمُوْنَ ۟

ನಾವು ಅವರನ್ನು ಹನ್ನೆರಡು ವಂಶಗಳ ಗೋತ್ರಗಳನ್ನಾಗಿ ವಿಂಗಡಿಸಿದೆವು. ಮೂಸಾರೊಡನೆ ಅವರ ಜನರು ನೀರಿಗಾಗಿ ಅಂಗಲಾಚಿದಾಗ, “ನಿಮ್ಮ ಕೋಲಿನಿಂದ ಆ ಬಂಡೆಗೆ ಬಡಿಯಿರಿ” ಎಂದು ನಾವು ಅವರಿಗೆ ದೇವವಾಣಿ ನೀಡಿದೆವು. ಆಗ ಅದರಿಂದ ಹನ್ನೆರಡು ಒರತೆಗಳು ಚಿಮ್ಮಿ ಹರಿದವು. ಜನರೆಲ್ಲರೂ ತಮ್ಮ ತಮ್ಮ ನೀರು ಕುಡಿಯುವ ಸ್ಥಳವನ್ನು ತಿಳಿದುಕೊಂಡರು. ನಾವು ಅವರಿಗೆ ಮೋಡದ ನೆರಳನ್ನು ನೀಡಿದೆವು. ಅವರಿಗೆ ಮನ್ನ ಹಾಗೂ ಸಲ್ವಾವನ್ನು ಇಳಿಸಿಕೊಟ್ಟೆವು. “ನಾವು ನಿಮಗೆ ಒದಗಿಸಿದ ಶುದ್ಧ ವಸ್ತುಗಳಿಂದ ತಿನ್ನಿರಿ” (ಎಂದು ನಾವು ಹೇಳಿದೆವು). ಅವರು ನಮ್ಮೊಂದಿಗೆ ಅನ್ಯಾಯ ಮಾಡಿಲ್ಲ; ಆದರೆ ಅವರು ಅವರೊಂದಿಗೇ ಅನ್ಯಾಯ ಮಾಡುತ್ತಿದ್ದರು. info
التفاسير:

external-link copy
161 : 7

وَاِذْ قِیْلَ لَهُمُ اسْكُنُوْا هٰذِهِ الْقَرْیَةَ وَكُلُوْا مِنْهَا حَیْثُ شِئْتُمْ وَقُوْلُوْا حِطَّةٌ وَّادْخُلُوا الْبَابَ سُجَّدًا نَّغْفِرْ لَكُمْ خَطِیْٓـٰٔتِكُمْ ؕ— سَنَزِیْدُ الْمُحْسِنِیْنَ ۟

ಅವರೊಡನೆ ಹೇಳಲಾದ ಸಂದರ್ಭ: “ನೀವು ಈ ಊರಿನಲ್ಲಿ ವಾಸಿಸಿರಿ. ಇಲ್ಲಿ ನೀವು ಇಚ್ಛಿಸುವ ಎಲ್ಲಾ ಕಡೆಯಿಂದ ಯಥೇಷ್ಟವಾಗಿ ತಿನ್ನಿರಿ. ಸಾಷ್ಟಾಂಗ ಮಾಡುತ್ತಾ ದ್ವಾರವನ್ನು ಪ್ರವೇಶಿಸಿರಿ ಮತ್ತು 'ಹಿತ್ತ' ಎಂದು ಹೇಳಿರಿ. ನಾವು ನಿಮ್ಮ ಪಾಪಗಳನ್ನು ಕ್ಷಮಿಸುವೆವು ಮತ್ತು ಸತ್ಕರ್ಮವೆಸಗುವವರಿಗೆ (ಪ್ರತಿಫಲವನ್ನು) ಹೆಚ್ಚಿಸುವೆವು.” info
التفاسير:

external-link copy
162 : 7

فَبَدَّلَ الَّذِیْنَ ظَلَمُوْا مِنْهُمْ قَوْلًا غَیْرَ الَّذِیْ قِیْلَ لَهُمْ فَاَرْسَلْنَا عَلَیْهِمْ رِجْزًا مِّنَ السَّمَآءِ بِمَا كَانُوْا یَظْلِمُوْنَ ۟۠

ಆದರೆ ಆ ಅಕ್ರಮಿಗಳು ಅವರಿಗೆ ಹೇಳಲಾದ ಮಾತಿಗೆ ಬದಲು ಬೇರೊಂದು ಮಾತನ್ನು ಹೇಳಿದರು. ಅವರು ಅಕ್ರಮವೆಸಗುತ್ತಿದ್ದ ಕಾರಣ ನಾವು ಅವರ ಮೇಲೆ ಆಕಾಶದಿಂದ ಶಿಕ್ಷೆಯನ್ನು ಇಳಿಸಿದೆವು. info
التفاسير:

external-link copy
163 : 7

وَسْـَٔلْهُمْ عَنِ الْقَرْیَةِ الَّتِیْ كَانَتْ حَاضِرَةَ الْبَحْرِ ۘ— اِذْ یَعْدُوْنَ فِی السَّبْتِ اِذْ تَاْتِیْهِمْ حِیْتَانُهُمْ یَوْمَ سَبْتِهِمْ شُرَّعًا وَّیَوْمَ لَا یَسْبِتُوْنَ ۙ— لَا تَاْتِیْهِمْ ۛۚ— كَذٰلِكَ ۛۚ— نَبْلُوْهُمْ بِمَا كَانُوْا یَفْسُقُوْنَ ۟

ಸಮುದ್ರ ತೀರದಲ್ಲಿದ್ದ ಆ ಊರಿನ ಬಗ್ಗೆ ಅವರೊಡನೆ ಕೇಳಿರಿ. ಅವರು ಸಬ್ಬತ್ ದಿನ (ಶನಿವಾರ) ಅತಿರೇಕವೆಸಗಿದ ಸಂದರ್ಭ. ಸಬ್ಬತ್‌ನ ದಿನ (ಶನಿವಾರ) ಮೀನುಗಳು ನೀರಿನ ಮೇಲೆ ತಲೆಯೆತ್ತುತ್ತಾ ಅವರ ಮುಂದೆ ಪ್ರತ್ಯಕ್ಷವಾಗುತ್ತಿದ್ದವು ಮತ್ತು ಸಬ್ಬತ್ ಅಲ್ಲದ ದಿನ ಅವರ ಮುಂದೆ ಪ್ರತ್ಯಕ್ಷವಾಗುತ್ತಿರಲಿಲ್ಲ. ಅವರು ಅವಿಧೇಯತೆ ತೋರುತ್ತಿದ್ದ ಕಾರಣ ನಾವು ಅವರನ್ನು ಈ ರೀತಿಯಲ್ಲಿ ಪರೀಕ್ಷಿಸಿದೆವು.[1] info

[1] ಯಹೂದಿಗಳಿಗೆ ಸಬ್ಬತ್ ದಿನ (ಶನಿವಾರ) ಮೀನು ಹಿಡಿಯುವುದು ನಿಷೇಧಿಸಲಾಗಿತ್ತು. ಆದರೆ ಅಲ್ಲಾಹನ ಪರೀಕ್ಷೆಯಂತೆ ಶನಿವಾರವೇ ನೀರಿನಲ್ಲಿ ಹೆಚ್ಚು ಮೀನುಗಳು ಕಂಡುಬರುತ್ತಿದ್ದವು. ಆದ್ದರಿಂದ ಯಹೂದಿಗಳು ಒಂದು ಉಪಾಯ ಮಾಡಿದರು. ಅವರು ಶನಿವಾರ ಮೀನು ಹಿಡಿಯುವ ಬದಲು ಮೀನಿಗಾಗಿ ಬಲೆ ಹಾಕುತ್ತಿದ್ದರು. ನಂತರ ಅದರಲ್ಲಿ ಸಿಕ್ಕಿದ ಮೀನುಗಳನ್ನು ಭಾನುವಾರ ಹಿಡಿಯುತ್ತಿದ್ದರು. ಇದು ದೇವಾಜ್ಞೆಯ ಸ್ಪಷ್ಟ ಉಲ್ಲಂಘನೆಯಾಗಿತ್ತು.

التفاسير: