அல்குர்ஆன் மொழிபெயர்ப்பு - கன்னட மொழிபெயர்ப்பு - ஹம்ஸா பத்தூர்

பக்க எண்:close

external-link copy
78 : 28

قَالَ اِنَّمَاۤ اُوْتِیْتُهٗ عَلٰی عِلْمٍ عِنْدِیْ ؕ— اَوَلَمْ یَعْلَمْ اَنَّ اللّٰهَ قَدْ اَهْلَكَ مِنْ قَبْلِهٖ مِنَ الْقُرُوْنِ مَنْ هُوَ اَشَدُّ مِنْهُ قُوَّةً وَّاَكْثَرُ جَمْعًا ؕ— وَلَا یُسْـَٔلُ عَنْ ذُنُوْبِهِمُ الْمُجْرِمُوْنَ ۟

ಅವನು ಹೇಳಿದನು: “ನನ್ನ ಜ್ಞಾನದ ಆಧಾರದಲ್ಲೇ ಇವೆಲ್ಲವನ್ನೂ ನನಗೆ ನೀಡಲಾಗಿದೆ.” ಅವನಿಗಿಂತಲೂ ಹೆಚ್ಚು ಶಕ್ತಿಶಾಲಿಗಳಾಗಿದ್ದ ಮತ್ತು ಅವನಿಗಿಂತ ಹೆಚ್ಚು ಜನಬಲವಿದ್ದ ಎಷ್ಟೋ ತಲೆಮಾರುಗಳನ್ನು ಅಲ್ಲಾಹು ಅವನಿಗಿಂತ ಮೊದಲು ನಾಶ ಮಾಡಿದ್ದಾನೆಂದು ಅವನು ತಿಳಿದಿಲ್ಲವೇ? ಅಪರಾಧಿಗಳೊಡನೆ ಅವರ ಅಪರಾಧಗಳ ಕುರಿತು ಪ್ರಶ್ನಿಸಲಾಗುವುದಿಲ್ಲ. info
التفاسير:

external-link copy
79 : 28

فَخَرَجَ عَلٰی قَوْمِهٖ فِیْ زِیْنَتِهٖ ؕ— قَالَ الَّذِیْنَ یُرِیْدُوْنَ الْحَیٰوةَ الدُّنْیَا یٰلَیْتَ لَنَا مِثْلَ مَاۤ اُوْتِیَ قَارُوْنُ ۙ— اِنَّهٗ لَذُوْ حَظٍّ عَظِیْمٍ ۟

ನಂತರ ಅವನು (ಕಾರೂನ್) ತನ್ನ ಎಲ್ಲಾ ಅಲಂಕಾರಗಳೊಂದಿಗೆ ಜನರ ನಡುವಿಗೆ ಬಂದನು. ಇಹಲೋಕ ಜೀವನವನ್ನು ಬಯಸುವವರು ಹೇಳಿದರು: “ಕಾರೂನನಿಗೆ ನೀಡಲಾಗಿರುವ ಸಂಪತ್ತು ನಮಗೂ ನೀಡಲಾಗಿದ್ದರೆ ಎಷ್ಟು ಚೆನ್ನಾಗಿತ್ತು! ನಿಜಕ್ಕೂ ಅವನು ಮಹಾ ಅದೃಷ್ಟವಂತನೇ ಸರಿ.” info
التفاسير:

external-link copy
80 : 28

وَقَالَ الَّذِیْنَ اُوْتُوا الْعِلْمَ وَیْلَكُمْ ثَوَابُ اللّٰهِ خَیْرٌ لِّمَنْ اٰمَنَ وَعَمِلَ صَالِحًا ۚ— وَلَا یُلَقّٰىهَاۤ اِلَّا الصّٰبِرُوْنَ ۟

ಆದರೆ ಜ್ಞಾನ ನೀಡಲಾದವರು ಹೇಳಿದರು: “ನಿಮಗೆ ದುರದೃಷ್ಟ ಕಾದಿದೆ! ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರಿಗೆ ಅಲ್ಲಾಹನ ಪ್ರತಿಫಲವೇ ಅತ್ಯುತ್ತಮವಾಗಿದೆ. ತಾಳ್ಮೆ ಮತ್ತು ಸ್ಥೈರ್ಯದಿಂದ ಬದುಕುವವರಿಗೆ ಮಾತ್ರ ಇದನ್ನು ನೀಡಲಾಗುತ್ತದೆ.” info
التفاسير:

external-link copy
81 : 28

فَخَسَفْنَا بِهٖ وَبِدَارِهِ الْاَرْضَ ۫— فَمَا كَانَ لَهٗ مِنْ فِئَةٍ یَّنْصُرُوْنَهٗ مِنْ دُوْنِ اللّٰهِ ؗۗ— وَمَا كَانَ مِنَ الْمُنْتَصِرِیْنَ ۟

ನಂತರ ನಾವು ಅವನನ್ನು ಮತ್ತು ಅವನ ಅರಮನೆಯನ್ನು ಭೂಮಿಯಲ್ಲಿ ಹುದುಗಿಸಿದೆವು. ಆಗ ಅಲ್ಲಾಹನ ಹೊರತು ಅವನಿಗೆ ಸಹಾಯ ಮಾಡುವ ಯಾವುದೇ ಜನರೂ ಇರಲಿಲ್ಲ. ಸ್ವಯಂ ರಕ್ಷಣೆ ಪಡೆಯಲೂ ಅವನಿಗೆ ಸಾಧ್ಯವಾಗಲಿಲ್ಲ. info
التفاسير:

external-link copy
82 : 28

وَاَصْبَحَ الَّذِیْنَ تَمَنَّوْا مَكَانَهٗ بِالْاَمْسِ یَقُوْلُوْنَ وَیْكَاَنَّ اللّٰهَ یَبْسُطُ الرِّزْقَ لِمَنْ یَّشَآءُ مِنْ عِبَادِهٖ وَیَقْدِرُ ۚ— لَوْلَاۤ اَنْ مَّنَّ اللّٰهُ عَلَیْنَا لَخَسَفَ بِنَا ؕ— وَیْكَاَنَّهٗ لَا یُفْلِحُ الْكٰفِرُوْنَ ۟۠

ನಿನ್ನೆ ಅವನ ಸ್ಥಾನಮಾನಕ್ಕೆ ತಲುಪಲು ಆಸೆಪಟ್ಟವರು ಇಂದು ಹೀಗೆ ಹೇಳತೊಡಗಿದರು: “ನಿಮಗೆ ಕಾಣುವುದಿಲ್ಲವೇ! ಅಲ್ಲಾಹು ಅವನ ದಾಸರಲ್ಲಿ ಅವನು ಇಚ್ಛಿಸುವವರಿಗೆ ಉಪಜೀವನವನ್ನು ವಿಶಾಲಗೊಳಿಸುತ್ತಾನೆ ಮತ್ತು ಅವನು ಇಚ್ಛಿಸುವವರಿಗೆ ಇಕ್ಕಟ್ಟುಗೊಳಿಸುತ್ತಾನೆ. ಒಂದು ವೇಳೆ ಅಲ್ಲಾಹು ನಮ್ಮ ಮೇಲೆ ಔದಾರ್ಯ ತೋರದಿರುತ್ತಿದ್ದರೆ ನಮ್ಮನ್ನೂ ಭೂಮಿಯಲ್ಲಿ ಹುದುಗಿಸುತ್ತಿದ್ದನು! ನಿಮಗೆ ಕಾಣುವುದಿಲ್ಲವೇ! ಸತ್ಯನಿಷೇಧಿಗಳು ಎಂದಿಗೂ ಯಶಸ್ವಿಯಾಗುವುದಿಲ್ಲ.” info
التفاسير:

external-link copy
83 : 28

تِلْكَ الدَّارُ الْاٰخِرَةُ نَجْعَلُهَا لِلَّذِیْنَ لَا یُرِیْدُوْنَ عُلُوًّا فِی الْاَرْضِ وَلَا فَسَادًا ؕ— وَالْعَاقِبَةُ لِلْمُتَّقِیْنَ ۟

ನಾವು ಆ ಪರಲೋಕ ಭವನವನ್ನು ಭೂಮಿಯಲ್ಲಿ ಅಹಂಕಾರ ತೋರದ ಮತ್ತು ಕಿಡಿಗೇಡಿತನ ಮಾಡದ ಜನರಿಗೆ ಕೊಟ್ಟುಬಿಡುವೆವು. ಅಂತಿಮ ಫಲಿತಾಂಶವಿರುವುದು ದೇವಭಯವುಳ್ಳರಿಗೆ ಮಾತ್ರ. info
التفاسير:

external-link copy
84 : 28

مَنْ جَآءَ بِالْحَسَنَةِ فَلَهٗ خَیْرٌ مِّنْهَا ۚ— وَمَنْ جَآءَ بِالسَّیِّئَةِ فَلَا یُجْزَی الَّذِیْنَ عَمِلُوا السَّیِّاٰتِ اِلَّا مَا كَانُوْا یَعْمَلُوْنَ ۟

ಯಾರು ಒಳಿತನ್ನು ತರುತ್ತಾನೋ ಅವನಿಗೆ ಅದಕ್ಕಿಂತಲೂ ಶ್ರೇಷ್ಠವಾದುದು ದೊರೆಯುತ್ತದೆ. ಯಾರಾದರೂ ಕೆಡುಕನ್ನು ತಂದರೆ—ಕೆಡುಕು ಮಾಡುವವರಿಗೆ ಅವರು ಮಾಡಿದ ಕೆಡುಕಿನ ಪ್ರತಿಫಲವಲ್ಲದೆ ಬೇರೇನೂ ನೀಡಲಾಗುವುದಿಲ್ಲ. info
التفاسير: