அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி

ಯಾಸೀನ್

external-link copy
1 : 36

یٰسٓ ۟ۚ

ಯಾಸೀನ್. info
التفاسير:

external-link copy
2 : 36

وَالْقُرْاٰنِ الْحَكِیْمِ ۟ۙ

ಯುಕ್ತಿಪೂರ್ಣವಾದ ಕುರ್‌ಆನಿನ ಆಣೆ. info
التفاسير:

external-link copy
3 : 36

اِنَّكَ لَمِنَ الْمُرْسَلِیْنَ ۟ۙ

ನಿಸ್ಸಂದೇಹವಾಗಿಯು ನೀವು ಸಂದೇಶವಾಹಕರಲ್ಲಾಗಿರುವಿರಿ. info
التفاسير:

external-link copy
4 : 36

عَلٰی صِرَاطٍ مُّسْتَقِیْمٍ ۟ؕ

ಋಜುವಾದ ಮಾರ್ಗದಲ್ಲಿರುವಿರಿ. info
التفاسير:

external-link copy
5 : 36

تَنْزِیْلَ الْعَزِیْزِ الرَّحِیْمِ ۟ۙ

ಈ ಕುರ್‌ಆನ್ ಪ್ರತಾಪಶಾಲಿಯು, ಕರುಣಾನಿಧಿಯು ಆದ ಅಲ್ಲಾಹನ ಕಡೆಯಿಂದ ಅವತೀರ್ಣಗೊಂಡಿದೆ. info
التفاسير:

external-link copy
6 : 36

لِتُنْذِرَ قَوْمًا مَّاۤ اُنْذِرَ اٰبَآؤُهُمْ فَهُمْ غٰفِلُوْنَ ۟

ಇದೇಕೆಂದರೆ ನೀವು ಒಂದು ಜನಾಂಗಕ್ಕೆ ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಅವರ ಪೂರ್ವಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿರಲಿಲ್ಲ. ಆದ್ದರಿಂದ ಅವರು ಅಲಕ್ಷö್ಯತೆಯಲ್ಲಿದ್ದರು. info
التفاسير:

external-link copy
7 : 36

لَقَدْ حَقَّ الْقَوْلُ عَلٰۤی اَكْثَرِهِمْ فَهُمْ لَا یُؤْمِنُوْنَ ۟

ಅವರ ಪೆÊಕಿ ಹೆಚ್ಚಿನವರ ಮೇಲೆ (ಶಿಕ್ಷೆಯ) ಮಾತು ಧೃಢವಾಗಿ ಬಿಟ್ಟಿದೆ. ಆದ್ದರಿಂದ ಅವರು ವಿಶ್ವಾಸವಿಡಲಾರರು. info
التفاسير:

external-link copy
8 : 36

اِنَّا جَعَلْنَا فِیْۤ اَعْنَاقِهِمْ اَغْلٰلًا فَهِیَ اِلَی الْاَذْقَانِ فَهُمْ مُّقْمَحُوْنَ ۟

ನಾವು ಅವರ ಕೊರಳುಗಳಲ್ಲಿ ಕಂಠಕಡಗಗಳನ್ನು ಹಾಕಿದ್ದೇವೆ. ಅವು ಗಲ್ಲಗಳವರೆಗೆ ತಲುಪಿವೆ ಅದರಿಂದಾಗಿ ಅವರ ತಲೆಯು ಸೆಟೆದು ನಿಂತಿರುತ್ತವೆ. info
التفاسير:

external-link copy
9 : 36

وَجَعَلْنَا مِنْ بَیْنِ اَیْدِیْهِمْ سَدًّا وَّمِنْ خَلْفِهِمْ سَدًّا فَاَغْشَیْنٰهُمْ فَهُمْ لَا یُبْصِرُوْنَ ۟

ನಾವು ಅವರ ಮುಂದೆ ಒಂದು ತಡೆಯನ್ನು ಮತ್ತು ಅವರ ಹಿಂದೆ ಒಂದು ತಡೆಯನ್ನು ಇರಿಸಿದ್ದೇವೆ. ಇದರಿಂದ ಅವರನ್ನು ನಾವು ಆವರಿಸಿ ಬಿಟ್ಟದ್ದೇವೆ. ಆದ್ದರಿಂದ ಅವರು ಏನನ್ನೂ ನೋಡಲಾರರು. info
التفاسير:

external-link copy
10 : 36

وَسَوَآءٌ عَلَیْهِمْ ءَاَنْذَرْتَهُمْ اَمْ لَمْ تُنْذِرْهُمْ لَا یُؤْمِنُوْنَ ۟

ನೀವು ಅವರಿಗೆ ಮುನ್ನೆಚ್ಚರಿಕೆ ನೀಡಿದರೂ ಅಥವಾ ಮುನ್ನೆಚ್ಚರಿಕೆ ನೀಡದಿದ್ದರು ಅವರಿಗೆ ಸಮಾನವಾಗಿದೆ. ಅವರು ವಿಶ್ವಾಸವಿಡಲಾರರು. info
التفاسير:

external-link copy
11 : 36

اِنَّمَا تُنْذِرُ مَنِ اتَّبَعَ الذِّكْرَ وَخَشِیَ الرَّحْمٰنَ بِالْغَیْبِ ۚ— فَبَشِّرْهُ بِمَغْفِرَةٍ وَّاَجْرٍ كَرِیْمٍ ۟

ಕುರ್‌ಆನನ್ನು ಅನುಸರಿಸಿದ ಮತ್ತು ಪರಮದಯಾಮಯನನ್ನು ಅಗೋಚರವಾಗಿ ಭಯಪಡು ವಂತಹ ವ್ಯಕ್ತಿಗೆ ಮಾತ್ರ ನಿಮ್ಮ ಮುನ್ನೆಚ್ಚರಿಕೆಯು ಪ್ರಯೋಜನ ನೀಡಬಲ್ಲದು. ಆದ್ದರಿಂದ ನೀವು ಅವನಿಗೆ ಪಾಪವಿಮೋಚನೆ ಮತ್ತು ಗೌರವಾನ್ವಿತ ಪ್ರತಿಫಲದ ಶುಭವಾರ್ತೆಯನ್ನು ನೀಡಿರಿ. info
التفاسير:

external-link copy
12 : 36

اِنَّا نَحْنُ نُحْیِ الْمَوْتٰی وَنَكْتُبُ مَا قَدَّمُوْا وَاٰثَارَهُمْ ؔؕ— وَكُلَّ شَیْءٍ اَحْصَیْنٰهُ فِیْۤ اِمَامٍ مُّبِیْنٍ ۟۠

ನಿಸ್ಸಂಶಯವಾಗಿಯೂ ನಾವು ಮೃತರನ್ನು ಜೀವಂತಗೊಳಿಸುವೆವು ಮತ್ತು ಅವರು ಮುಂದೆ ಕಳುಹಿಸಿದ ಹಾಗೂ ಹಿಂದೆ ಬಿಟ್ಟು ಬಂದಿರುವ ಕರ್ಮಗಳನ್ನು ನಾವು ದಾಖಲಿಸುತ್ತಿದ್ದೇವೆ ಮತ್ತು ಪ್ರತಿಯೊಂದನ್ನು ನಾವು ಒಂದು ಸುಸ್ಪಷ್ಟವಾದ ದಾಖಲೆಯೊಂದರಲ್ಲಿ ಲಿಖಿತಗೊಳಿಸಿರುವೆವು. info
التفاسير: