அல்குர்ஆன் மொழிபெயர்ப்பு - கன்னட மொழிபெயர்ப்பு - பஷீர் மைசூரி

பக்க எண்:close

external-link copy
107 : 10

وَاِنْ یَّمْسَسْكَ اللّٰهُ بِضُرٍّ فَلَا كَاشِفَ لَهٗۤ اِلَّا هُوَ ۚ— وَاِنْ یُّرِدْكَ بِخَیْرٍ فَلَا رَآدَّ لِفَضْلِهٖ ؕ— یُصِیْبُ بِهٖ مَنْ یَّشَآءُ مِنْ عِبَادِهٖ ؕ— وَهُوَ الْغَفُوْرُ الرَّحِیْمُ ۟

ಅಲ್ಲಾಹನು ನಿಮಗೇನಾದರೂ ಸಂಕಷ್ಟಕ್ಕೆ ಗುರಿಪಡಿಸಿದರೆ ಅವನ ಹೊರತು ಅದನ್ನು ನೀಗಿಸುವವನಾರಿಲ್ಲ ಮತ್ತು ಅವನು ನಿಮಗೇನಾದರೂ ಒಳಿತನ್ನು ನೀಡಿದರೆ ಅವನ ಅನುಗ್ರಹವನ್ನು ತಡೆಯುವವನಾರಿಲ್ಲ. ಅವನು ಅದನ್ನು ತನ್ನ ದಾಸರ ಪೈಕಿ ತಾನಿಚ್ಛಿಸಿದವರಿಗೆ ತಲುಪಿಸುತ್ತಾನೆ ಮತ್ತು ಅವನು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ. info
التفاسير:

external-link copy
108 : 10

قُلْ یٰۤاَیُّهَا النَّاسُ قَدْ جَآءَكُمُ الْحَقُّ مِنْ رَّبِّكُمْ ۚ— فَمَنِ اهْتَدٰی فَاِنَّمَا یَهْتَدِیْ لِنَفْسِهٖ ۚ— وَمَنْ ضَلَّ فَاِنَّمَا یَضِلُّ عَلَیْهَا ؕ— وَمَاۤ اَنَا عَلَیْكُمْ بِوَكِیْلٍ ۟ؕ

ಹೇಳಿರಿ. ಓ ಜನರೇ ನಿಮಗೆ ನಿಮ್ಮ ಪ್ರಭುವಿನ ಕಡೆಯಿಂದ ಸತ್ಯವು ಬಂದಿರುತ್ತದೆ ಆದುದರಿಂದ ಯಾರು ಸನ್ಮಾರ್ಗ ಪಡೆಯುವನೋ ಅವನು ತನ್ನ ಹಿತಕ್ಕಾಗಿಯೇ ಸನ್ಮಾರ್ಗ ಪಡೆಯುವನು ಮತ್ತು ಯಾರು ಮಾರ್ಗಭ್ರಷ್ಟನಾಗುವನೋ ಅದು ಅವನಿಗೆ ಹಾನಿಕಾರಕವಾಗಿರುತ್ತದೆ ಮತ್ತು ನಾನು ನಿಮ್ಮ ಮೇಲ್ವಿಚಾರಕನಲ್ಲ. info
التفاسير:

external-link copy
109 : 10

وَاتَّبِعْ مَا یُوْحٰۤی اِلَیْكَ وَاصْبِرْ حَتّٰی یَحْكُمَ اللّٰهُ ۚ— وَهُوَ خَیْرُ الْحٰكِمِیْنَ ۟۠

ನೀವು ನಿಮ್ಮೆಡೆಗೆ ಅವತೀರ್ಣಗೊಳಿಸಲಾದ ಅಲ್ಲಾಹನ ಮಾರ್ಗದರ್ಶನವನ್ನು ಅನುಸರಿಸುತ್ತಿರಿ ಹಾಗೂ ಅಲ್ಲಾಹನು ತೀರ್ಮಾನ ಮಾಡುವವರೆಗೆ (ದುಷ್ಟರ ಪೀಡನೆಗಳಿಂದ) ಸಹನೆವಹಿಸಿರಿ. ಅವನು ನ್ಯಾಯಾಧಿಪತಿಗಳಲ್ಲಿ ಅತ್ತುö್ಯತ್ತಮನಾಗಿರುವನು. info
التفاسير: