د قرآن کریم د معناګانو ژباړه - کنادي ژباړه - حمزه بتور

ಅಲ್ -ಹದೀದ್

external-link copy
1 : 57

سَبَّحَ لِلّٰهِ مَا فِی السَّمٰوٰتِ وَالْاَرْضِ ۚ— وَهُوَ الْعَزِیْزُ الْحَكِیْمُ ۟

ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನ ಪರಿಶುದ್ಧಿಯನ್ನು ಕೊಂಡಾಡುತ್ತಿವೆ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ. info
التفاسير:

external-link copy
2 : 57

لَهٗ مُلْكُ السَّمٰوٰتِ وَالْاَرْضِ ۚ— یُحْیٖ وَیُمِیْتُ ۚ— وَهُوَ عَلٰی كُلِّ شَیْءٍ قَدِیْرٌ ۟

ಭೂಮ್ಯಾಕಾಶಗಳ ಸಾರ್ವಭೌಮತ್ವವು ಅವನಿಗೆ ಸೇರಿದ್ದು. ಅವನು ಜೀವ ಮತ್ತು ಮರಣವನ್ನು ನೀಡುತ್ತಾನೆ. ಅವನು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ. info
التفاسير:

external-link copy
3 : 57

هُوَ الْاَوَّلُ وَالْاٰخِرُ وَالظَّاهِرُ وَالْبَاطِنُ ۚ— وَهُوَ بِكُلِّ شَیْءٍ عَلِیْمٌ ۟

ಅವನೇ ಆದಿ, ಅಂತ್ಯ, ಪ್ರತ್ಯಕ್ಷ ಮತ್ತು ಪರೋಕ್ಷನು. ಅವನು ಸರ್ವ ವಿಷಯಗಳನ್ನು ತಿಳಿದವನಾಗಿದ್ದಾನೆ.[1] info

[1] ಅವನು ಆದಿ—ಅಂದರೆ ಅವನಿಗಿಂತ ಮೊದಲು ಏನೂ ಇಲ್ಲ. ಅವನು ಅಂತ್ಯ—ಅಂದರೆ ಅವನ ನಂತರ ಏನೂ ಇಲ್ಲ. ಅವನು ಪ್ರತ್ಯಕ್ಷ—ಅಂದರೆ ಅವನಿಗಿಂತ ಮೇಲೆ ಏನೂ ಇಲ್ಲ. ಅವನು ಎಲ್ಲಕ್ಕಿಂತ ಮೇಲಿರುವವನು, ಎಲ್ಲದ ಮೇಲೆ ಪ್ರಾಬಲ್ಯವಿರುವವನು. ಅವನು ಪರೋಕ್ಷ—ಅಂದರೆ ಅವನು ಪರೋಕ್ಷವಾಗಿರುವ, ರಹಸ್ಯವಾಗಿರುವ ಎಲ್ಲವನ್ನೂ ತಿಳಿಯುತ್ತಾನೆ. ಅವನು ದೃಷ್ಟಿಗಳಿಂದ ಮತ್ತು ಬುದ್ಧಿಯಿಂದ ಮರೆಯಾಗಿದ್ದಾನೆ.

التفاسير: