د قرآن کریم د معناګانو ژباړه - کنادي ژباړه - حمزه بتور

external-link copy
18 : 5

وَقَالَتِ الْیَهُوْدُ وَالنَّصٰرٰی نَحْنُ اَبْنٰٓؤُا اللّٰهِ وَاَحِبَّآؤُهٗ ؕ— قُلْ فَلِمَ یُعَذِّبُكُمْ بِذُنُوْبِكُمْ ؕ— بَلْ اَنْتُمْ بَشَرٌ مِّمَّنْ خَلَقَ ؕ— یَغْفِرُ لِمَنْ یَّشَآءُ وَیُعَذِّبُ مَنْ یَّشَآءُ ؕ— وَلِلّٰهِ مُلْكُ السَّمٰوٰتِ وَالْاَرْضِ وَمَا بَیْنَهُمَا ؗ— وَاِلَیْهِ الْمَصِیْرُ ۟

ಯಹೂದಿಗಳು ಮತ್ತು ಕ್ರೈಸ್ತರು ಹೇಳುತ್ತಾರೆ: “ನಾವು ಅಲ್ಲಾಹನ ಮಕ್ಕಳು ಮತ್ತು ಅವನ ಪ್ರೀತಿಪಾತ್ರರು.”[1] ಹೇಳಿರಿ: “ಹಾಗಾದರೆ, ನೀವು ತಪ್ಪು ಮಾಡಿದರೆ ಅವನು ನಿಮ್ಮನ್ನು ಶಿಕ್ಷಿಸುವುದೇಕೆ?” ಅಲ್ಲ, ವಾಸ್ತವವಾಗಿ ನೀವೆಲ್ಲರೂ ಅವನ ಸೃಷ್ಟಿಗಳಲ್ಲಿ ಸೇರಿದ ಮನುಷ್ಯರು. ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ಶಿಕ್ಷಿಸುತ್ತಾನೆ. ಭೂಮ್ಯಾಕಾಶಗಳ ಮತ್ತು ಅವುಗಳ ನಡುವೆಯಿರುವ ಎಲ್ಲಾ ವಸ್ತುಗಳ ಆಧಿಪತ್ಯವು ಅಲ್ಲಾಹನಿಗೆ ಸೇರಿದ್ದು. ನೀವೆಲ್ಲರೂ ಅವನ ಬಳಿಗೇ ಮರಳಿ ಹೋಗಬೇಕಾಗಿದೆ. info

[1] ಯಹೂದಿಗಳು ಉಝೈರ್‌ರನ್ನು ಮತ್ತು ಕ್ರೈಸ್ತರು ಈಸಾರನ್ನು ಅಲ್ಲಾಹನ ಮಗನೆಂದು ಕರೆಯುತ್ತಿದ್ದರು. ಅಷ್ಟೇ ಅಲ್ಲದೆ, ಸ್ವತಃ ತಮ್ಮನ್ನು ದೇವರ ಮಕ್ಕಳು ಮತ್ತು ದೇವರ ಪ್ರೀತಿಪಾತ್ರರೆಂದು ಅಹಂಭಾವದಿಂದ ಹೇಳುತ್ತಿದ್ದರು.

التفاسير: