د قرآن کریم د معناګانو ژباړه - کنادي ژباړه - حمزه بتور

external-link copy
9 : 4

وَلْیَخْشَ الَّذِیْنَ لَوْ تَرَكُوْا مِنْ خَلْفِهِمْ ذُرِّیَّةً ضِعٰفًا خَافُوْا عَلَیْهِمْ ۪— فَلْیَتَّقُوا اللّٰهَ وَلْیَقُوْلُوْا قَوْلًا سَدِیْدًا ۟

ತಮ್ಮ ಅಮಾಯಕ ಮಕ್ಕಳನ್ನು ಬಿಟ್ಟು (ತಾವು ಸತ್ತರೆ ಅವರ ಸ್ಥಿತಿಯೇನಾಗಬಹುದೆಂದು) ಭಯಪಡುವವರು (ಪೋಷಕರು) ಇತರರ ಬಗ್ಗೆಯೂ ಹಾಗೆಯೇ ಭಯಪಡಲಿ. ಅವರು ಅಲ್ಲಾಹನನ್ನು ಭಯಪಡಲಿ ಮತ್ತು ಸರಿಯಾದ ಮಾತುಗಳನ್ನಾಡಲಿ.[1] info

[1] ತಾನು ಸತ್ತರೆ ತನ್ನ ಪುಟ್ಟ ಮಕ್ಕಳು ಅನಾಥರಾಗುತ್ತಾರೆ. ಅವರು ಇತರರ ಪೋಷಣೆಯಲ್ಲಿ ಬೆಳೆಯಬೇಕಾಗುತ್ತದೆ. ಹೀಗೆ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಮಾಡುವವರು, ಅನಾಥರಾಗಿ ತಮ್ಮ ಪೋಷಣೆಗೆ ಬರುವ ಇತರ ಮಕ್ಕಳ ಬಗ್ಗೆಯೂ ಇದೇ ರೀತಿ ಚಿಂತೆ ಮಾಡಬೇಕು. ಅವರ ವಿಷಯದಲ್ಲಿ ಅಲ್ಲಾಹನನ್ನು ಭಯಪಟ್ಟು ನ್ಯಾಯದಿಂದ ವರ್ತಿಸಬೇಕು.

التفاسير: